ತಮಿಳುನಾಡಿನ ಅಭಿವೃದ್ಧಿಯೇ ಬಿಜೆಪಿಯ ಮೊದಲ ಆದ್ಯತೆ: ಅಮಿತ್ ಶಾ
Recommended Video

ಚೆನ್ನೈ, ಜುಲೈ 10: ತಮಿಳುನಾಡಿನ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆದ್ಯತೆಗಳಲ್ಲೊಂದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ತಮಿಳುನಾಡಿನ ಚೆನ್ನೈಗೆ ನಿನ್ನೆ(ಜು.09) ಆಗಮಿಸಿದ್ದ ಅಮಿತ್ ಶಾ ಲೋಕಸಬಾ ಚುನಾವಣೆಗೆ ತಯಾರಿ ಆರಂಭಿಸಿದರು. ತಮಿಳುನಾಡಿನ ಬಿಜೆಪಿ ಮುಖಂಡರೊಂದಿಗೆ ಸಭೆ ನಡೆಸಿ, ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, '13ನೇ ಹಣಕಾಸು ಆಯೋಗ ತಮಿಳುನಾಡಿಗೆ 94,540 ಕೋಟಿ ರೂ.ಗಳನ್ನು ನೀಡಿದ್ದರೆ, 14 ನೇ ಹಣಕಾಸು ಆಯೋಗ 1,99,096 ರೂ.ಗಳನ್ನು ನೀಡಿದೆ' ಎಂದರು.

ತಮಿಳುನಾಡಿನ ಅಭಿವೃದ್ಧಿಗೆ ಬಿಜೆಪಿ ಪಕ್ಷ ಶ್ರಮಿಸಿದಷ್ಟು ಇನ್ನ್ಯಾವುದೇ ಪಕ್ಷವೂ ಶ್ರಮಿಸಿಲ್ಲ ಎಂದು ಅವರು ತಿಳಿಸಿದರು.
ತಮಿಳುನಾಡು ಅತೀ ಹೆಚ್ಚು ರೈಲ್ವೇ ಮಾರ್ಗಗಳನ್ನು ಹೊಂದಿರುವ ರಾಜ್ಯ. ಇಲ್ಲಿನ 3200 ಕಿ.ಮೀ.ರೈಲ್ವೇ ಮಾರ್ಗಕ್ಕೆ ಬಿಜೆಪಿ 20,000 ಕೋಟಿ ರೂ.ಗಳನ್ನು ನೀಡಿದೆ ಎಂದು ಅವರು ಹೇಳಿದರು.
ಅಮಿತ್ ಶಾ ತಮಿಳುನಾಡಿಗೆ ಬರುವುದನ್ನು ಬಹುಪಾಲಿಉ ತಮಿಳರು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ನಿನ್ನೆಯೆಲ್ಲ ಗೋಬ್ಯಾಕ್ ಅಮಿತ್ ಶಾ ಹ್ಯಾಶ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗಿತ್ತು.












Click it and Unblock the Notifications