• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಮಲಾ ಹ್ಯಾರಿಸ್ ಬ್ಯಾನರ್ ಹಾಕಿ ಸಂಭ್ರಮಿಸಿದ ತುಳಸೇಂದ್ರಪುರಂ ಗ್ರಾಮಸ್ಥರು

|

ಚೆನ್ನೈ, ಜನವರಿ 20: ಅಮೆರಿಕದಲ್ಲಿ ಬುಧವಾರ ಜೋ ಬೈಡನ್ ನೇತೃತ್ವದ ಡೆಮಾಕ್ರಟಿಕ್ ಪಕ್ಷ ಆಡಳಿತಕ್ಕೆ ಬರುತ್ತಿದೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಭಾರತ ಮೂಲದ ಅಮೆರಿಕನ್ ಕಮಲಾ ಹ್ಯಾರಿಸ್ ಅವರು 49ನೇ ಉಪಾಧ್ಯಕ್ಷೆಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣಭಾರತ ಮೂಲದ ಕಮಲಾ ಜೊತೆ ಜೋ ಬೈಡನ್ ಅಧ್ಯಕ್ಷೀಯ ಪ್ರಮಾಣ

ಈ ಸಂಭ್ರಮದ ಗಳಿಗೆಯನ್ನು ಕಮಲ ಹ್ಯಾರಿಸ್ ಅವರ ಮೂಲ ನೆಲೆ ಎನ್ನಲಾದ ತಮಿಳುನಾಡು ಕೂಡ ಆಚರಿಸುತ್ತಿದೆ. ತಮಿಳುನಾಡಿನ ತುಳಸೇಂದ್ರಪುರಂ ಹಳ್ಳಿಯಲ್ಲಿ ಕಮಲಾ ಹ್ಯಾರಿಸ್ ಅವರ ಫೋಟೊ, ಬ್ಯಾನರ್ ಗಳನ್ನು ತಮ್ಮ ಮನೆಗಳ ಹಾಗೂ ಅಂಗಡಿಗಳ ಮುಂದೆ ಹಾಕುವ ಮೂಲಕ ಕಮಲಾ ಹ್ಯಾರಿಸ್ ಗೆ ಗ್ರಾಮಸ್ಥರು ಶುಭ ಕೋರಿದ್ದಾರೆ.

ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈನವರಾಗಿದ್ದರು. ತಮ್ಮ ತಾತ ಗೋಪಾಲನ್ ಅವರ ನೆನಪುಗಳನ್ನೂ ಕಮಲಾ ಹ್ಯಾರಿಸ್ ಕೆಲವು ಸಂದರ್ಭಗಳಲ್ಲಿ ಹಂಚಿಕೊಂಡಿದ್ದರು.

ಅವರು ಇಂದು ಅಮೆರಿಕದ 49ನೇ ಉಪಾಧ್ಯಕ್ಷೆಯಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಏರಿದ ಮೊದಲ ಮಹಿಳೆ ಎನಿಸಿಕೊಳ್ಳುತ್ತಿದ್ದು, ಇದಕ್ಕೆ ತುಳಸೇಂದ್ರಪುರಂ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. "ಕಮಲಾ ಹ್ಯಾರಿಸ್ ಅವರು ಅಮೆರಿಕ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಕುರಿತು ನಾವೆಲ್ಲಾ ಉತ್ಸುಕರಾಗಿದ್ದೇವೆ. ನಮಗೆ ಹೆಮ್ಮೆ ಎನಿಸುತ್ತಿದೆ. ಈ ಹಳ್ಳಿಯ ಎಲ್ಲಾ ಮಹಿಳೆಯರಿಗೂ ಕಮಲಾ ಹ್ಯಾರಿಸ್ ಸ್ಫೂರ್ತಿ ಎಂದು ಸ್ಥಳೀಯರು ಸಂತಸ ಹಂಚಿಕೊಂಡಿದ್ದಾರೆ ಸ್ಥಳೀಯರು.

English summary
People in Thulasendrapuram village of tamil nadu put up hoardings and posters of US Vice President-elect Kamala Harris at their shops & homes,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X