• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಳೆಯ ಅರ್ಭಟಕ್ಕೆ ನಲುಗಿದ ಚೆನ್ನೈ: ರಸ್ತೆ ಸಂಚಾರ ಅಸ್ತವ್ಯಸ್ತ -14 ಸಾವು

|
Google Oneindia Kannada News

ಚೆನ್ನೈ ನವೆಂಬರ್ 12: ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಗೆ ಚೆನ್ನೈ ಜನ ತತ್ತರಿಸಿಹೋಗಿದ್ದಾರೆ. ಮನೆಗಳಿಗೆ ಮಳೆ ನೀರು ನುಗ್ಗಿ ಜನ ಜೀವನ ಬೀದಿಪಾಲಾಗಿದೆ. ರಸ್ತೆಗಳು ನದಿಗಳಂತಾಗಿ ಸಂಚಾರ ವ್ಯವಸ್ಥೆ ಅಲ್ಲೋಲಕಲ್ಲೋಲಗೊಂಡಿದೆ. ತೀವ್ರ ಮಳೆಹಾನಿಗೊಳಗಾದ ಪ್ರದೇಶಗಳಲ್ಲಿನ ಜನ ಸಂಪರ್ಕ ಇರಲಿ ದೂರವಾಣಿ ಸಂಪರ್ಕವೂ ಸಾಧ್ಯವಾಗುತ್ತಿಲ್ಲ. ಊಟ, ನೀರು, ಇರಲು ಸೂರಿಲ್ಲದೆ ಜನ ತಲೆ ಮೇಲೆ ಕೈಹೊತ್ತುಕೊಂಡು ಕುಳಿತುಕೊಳ್ಳುವಂತಾಗಿದೆ. ಮಳೆಯ ಅಬ್ಬರಕ್ಕೆ 14 ಜನ ಬಲಿಯಾಗಿದ್ದಾರೆ.

ಭಾರೀ ಮಳೆಗೆ ತುಂಬಿದ ಅಣೆಕಟ್ಟುಗಳಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿರುವುದರಿಂದ ತಮಿಳುನಾಡಿನಲ್ಲಿ ಪ್ರವಾಹ ಉಂಟಾಗಿದೆ. ಗುರುವಾರ ತಡರಾತ್ರಿವರೆಗೂ ಚೆನ್ನೈನ ಹಲವು ಭಾಗಗಳು ನೀರಿನಿಂದ ಮುಳುಗಿದ್ದು, 75,000 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಇತರ ಸರ್ಕಾರಿ ಅಧಿಕಾರಿಗಳು ನಾಗರಿಕರಿಗೆ ಸಹಾಯ ಮಾಡಲು ಕಾರ್ಯಪ್ರವೃತ್ತರಾಗಿದ್ದಾರೆ. ಮಳೆ ಮಾತ್ರವಲ್ಲದೆ ಅಣೆಕಟ್ಟುಗಳಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ್ದರಿಂದ ಮನೆಗಳು, ರಸ್ತೆಗಳು ಪ್ರವಾಹ ಮತ್ತು ಕಸದಿಂದ ತುಂಬಿ ಹೋಗಿವೆ.

ಪ್ರಸ್ತುತ ಸ್ಥಿತಿ ಹೇಗಿದೆ?

ಪ್ರಸ್ತುತ ಸ್ಥಿತಿ ಹೇಗಿದೆ?

ಗುರುವಾರ ಚೆನ್ನೈನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಅಧಿಕಾರಿಗಳು ಭಾರೀ ಗಾತ್ರದ ಮೋಟಾರ್‌ಗಳನ್ನು, ರೋಬೋಟಿಕ್ ಅಗೆಯುವ ಯಂತ್ರಗಳನ್ನು ಬಳಸಿ ನೀರನ್ನು ಪಂಪ್ ಮಾಡಲು, ಚರಂಡಿಗಳನ್ನು ಮುಚ್ಚಲು, ಕಸವನ್ನು ತೆಗೆದುಹಾಕಲು ಮತ್ತು ಬಿದ್ದ ಮರಗಳನ್ನು ಬೇರುಸಹಿತ ತೆಗೆಯಲು ಮಾನವಶಕ್ತಿಯನ್ನು ನಿಯೋಜಿಸಲಾಗಿದೆ.

ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ಮೈಲಾಪುರ ಡೌನ್‌ಟೌನ್ ಸೇರಿದಂತೆ ಬಹುತೇಕ ಇಡೀ ನಗರವು ನೀರಿನಿಂದ ಆವೃತವಾಗಿದೆ ಮತ್ತು ವೆಲಚೇರಿ ಸೇರಿದಂತೆ ನೆರೆಹೊರೆಗಳ ಹಲವಾರು ಭಾಗಗಳಲ್ಲಿ ಭಾರೀ ಪ್ರಮಾಣದಲ್ಲಿ ಜಲಾವೃತವಾಗಿದ್ದು ಕೆಕೆ ನಗರ ಮತ್ತು ಕ್ರೋಮ್‌ಪೇಟ್‌ನಲ್ಲಿನ ಸರ್ಕಾರಿ ಆಸ್ಪತ್ರೆಗಳಿಗೆ ಮಳೆ ನೀರು ನುಗ್ಗಿ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮಾಡಿದೆ.

ಸ್ವತ್ತುಗಳ ಸುರಕ್ಷತೆ

ಸ್ವತ್ತುಗಳ ಸುರಕ್ಷತೆ

ಉಕ್ಕಿ ಹರಿಯುತ್ತಿರುವ ಕೂಂ ನದಿಯ ಸಮೀಪದಲ್ಲಿರುವ ಪುದುಪೇಟ್‌ನ ಬೈಲೇನ್‌ಗಳು, ಚೂಲೈ, ಸೆಮ್ಮಂಚೇರಿ, ಕೋಡಂಬಂಬಾಕ್ಕಂ, ಕೆಕೆ ನಗರ-ಎಂಜಿಆರ್ ನಗರ ಮತ್ತು ಅರುಂಬಕ್ಕಂ, ಅಸಂಖ್ಯಾತ ನೆರೆಹೊರೆಗಳಲ್ಲಿ ಪ್ರವಾಹಕ್ಕೆ ಸಿಲುಕಿವೆ. ಹಾನಿಯ ಭಯದಿಂದ ಮಡಿಪಾಕ್ಕಂನ ರಾಮ್ ನಗರದ ಹಲವಾರು ನಿವಾಸಿಗಳು ತಮ್ಮ ಕಾರುಗಳನ್ನು, ಬೈಕ್ ಗಳನ್ನು, ತಳ್ಳೋಗಾಡಿಗಳನ್ನು ಹತ್ತಿರದ ವೆಲಚೇರಿ ಮೇಲ್ಸೇತುವೆಯ ಅಂಚಿನಲ್ಲಿ ಮತ್ತು ಹತ್ತಿರದ ಅಂತಹ ಸೌಲಭ್ಯಗಳ ಕೆಳಗೆ ನಿಲ್ಲಿಸಿದ್ದಾರೆ.

ವಿಮಾನ ಹಾರಾಟ ರದ್ದು

ವಿಮಾನ ಹಾರಾಟ ರದ್ದು

ಫ್ಲೈಟ್‌ಗಳ ಲ್ಯಾಂಡಿಂಗ್‌ ನಿರ್ಬಂಧಿಸಲಾಗಿದೆ. ತೀವ್ರ ಮಳೆ ಮತ್ತು ಭಾರೀ ಅಡ್ಡಗಾಳಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ವಿಮಾನಗಳ ಆಗಮನವನ್ನು ನವೆಂಬರ್ 11 ರ ಗುರುವಾರ ಸಂಜೆ 6 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. "ತೀವ್ರ ಮಳೆ ಮತ್ತು ಭಾರೀ ಅಡ್ಡಗಾಳಿಯಿಂದಾಗಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಇಂದು 13:15 ರಿಂದ 18:00 ಗಂಟೆಗಳವರೆಗೆ ಆಗಮನವನ್ನು ಸ್ಥಗಿತಗೊಳಿಸಲಾಗುತ್ತದೆ. ನಿರ್ಗಮನ ಮುಂದುವರಿಯುತ್ತದೆ. ಪ್ರಯಾಣಿಕರ ಸುರಕ್ಷತೆಯ ಅಂಶ ಮತ್ತು ಗಾಳಿಯ ತೀವ್ರತೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಚೆನ್ನೈ ವಿಮಾನ ನಿಲ್ದಾಣ ಟ್ವೀಟ್ ಮಾಡಿದೆ.

ಈ ಪ್ರದೇಶಗಳಲ್ಲಿ ಪ್ರವಾಹ

ಈ ಪ್ರದೇಶಗಳಲ್ಲಿ ಪ್ರವಾಹ

ಕೆಲವೆಡೆ ವರುಣನ ಅರ್ಭಟಕ್ಕೆ ಕೆಲ ಪ್ರದೇಶಗಳಲ್ಲಿ ಮನುಷ್ಯರು ಮುಳುಗುವ ಎತ್ತರಕ್ಕೆ ನೀರು ನಿಂತುಕೊಂಡಿದೆ. ಹಸ್ತಿನಾಪುರದ ಸುತ್ತಮುತ್ತಲಿನ ರಸ್ತೆಗಳು, ಉಪನಗರ ಕ್ರೋಮ್‌ಪೇಟ್‌ಗೆ ಸಮೀಪದಲ್ಲಿ ಪ್ರದೇಶಗಳು ನದಿಯನ್ನು ಹೋಲುತ್ತವೆ. ಇಲ್ಲಿ ನೀರಿನ ಮಟ್ಟವು ಮೂರು ಅಡಿಗಳಷ್ಟು ಹೆಚ್ಚುತ್ತಿದೆ. ಗಿಂಡಿ-ವೇಲಾಚಾರಿ ಪಾಯಿಂಟ್‌ನ ಐದು ಫರ್ಲಾಂಗ್ ರಸ್ತೆಯಂತಹ ಹಲವಾರು ಸ್ಥಳಗಳಲ್ಲಿ ಸುಮಾರು ಮೂರು ಅಡಿ ಅಥವಾ ಅದಕ್ಕೂ ಮೇಲೆ ನೀರು ನಿಂತುಕೊಂಡಿದೆ.

ಸಿಎಂ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಸಭೆ

ಸಿಎಂ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಸಭೆ

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಳೆಯ ಸಚಿವರೊಂದಿಗೆ ಚರ್ಚೆ ನಡೆಸಿದರು. ಮಳೆ ಪರಿಸ್ಥಿತಿಯನ್ನು ಪರಿಶೀಲಿಸಲು ಮುಖ್ಯ ಕಾರ್ಯದರ್ಶಿ ವಿ ಇರೈ ಅನ್ಬು ನೇತೃತ್ವದಲ್ಲಿ ರಾಜ್ಯದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಸಮಸ್ಯೆಗಳ ನಿರ್ವಹಣೆಗೆ ವಿಶೇಷವಾಗಿ ನಿಯೋಜಿತವಾಗಿರುವ ಅಧಿಕಾರಿಗಳಿಗೆ ಪರಿಹಾರ ಚಟುವಟಿಕೆಗಳನ್ನು ಚುರುಕುಗೊಳಿಸಲು ಮತ್ತು ಪರಿಹಾರ ಶಿಬಿರಗಳಲ್ಲಿ ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಖಚಿತಪಡಿಸಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಮುಂದೆ ಮಳೆ ಕಡಿಮೆಯಾಗುವ ನಿರೀಕ್ಷೆ ಇದ್ದು ಇನ್ನಾದರೂ ಅಧಿಕಾರಿಗಳು ಬೆಳೆ ನಷ್ಟವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಿಶೇಷವಾಗಿ ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಬೆಳೆ ಹಾನಿಯನ್ನು ಅಂದಾಜಿಸಲು ಮತ್ತು ಪರಿಹಾರ ಕಾರ್ಯವನ್ನು ತ್ವರಿತಗೊಳಿಸಲು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲು ಸಹಕಾರಿ ಸಚಿವ ಐ ಪೆರಿಯಸಾಮಿ ನೇತೃತ್ವದ ಆರು ಸದಸ್ಯರ ಸಚಿವ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಆದೇಶಿಸಿದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

IMD ಹೇಳಿಕೆ ಏನು?

IMD ಹೇಳಿಕೆ ಏನು?

ಮಳೆ ತರಿಸುವ ಮೋಡಗಳು ಚೆನ್ನೈಗೆ ಸಮೀಪದಲ್ಲಿದ್ದು ಇದು ಶೀಘ್ರದಲ್ಲೇ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ ಎಂದು IMD ಅಪ್‌ಡೇಟ್ ಹೇಳಿದೆ. ಇಲ್ಲಿಯವರೆಗೆ 157 ಜಾನುವಾರುಗಳು ಸಾವನ್ನಪ್ಪಿದ್ದು 1,146 ಗುಡಿಸಲುಗಳು ಮತ್ತು 237 ಮನೆಗಳು ಮಳೆ ಸಂಬಂಧಿತ ಘಟನೆಗಳಲ್ಲಿ ಹಾನಿಗೊಳಗಾಗಿವೆ.

ರೈಲುಗಳ ಸ್ಥಗಿತ

ರೈಲುಗಳ ಸ್ಥಗಿತ

ರೈಲುಹಳಿಗಳ ಮೇಲೆ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಚೆನ್ನೈ ಸೆಂಟ್ರಲ್ ಮತ್ತು ತಿರುವಳ್ಳೂರ್ ನಡುವೆ ಉಪನಗರ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜೊತೆಗೆ ಗುಮ್ಮಿಡಿಪೂಂಡಿ ಭಾಗದಲ್ಲಿ ರೈಲು ವಿಳಂಬವಾಗಿದೆ ಎಂದು ರೈಲ್ವೇ ಇಲಾಖೆ ಹೇಳಿದೆ. "ಚೆನ್ನೈ ಸೆಂಟ್ರಲ್‌ನಿಂದ ತಿರುವಳ್ಳೂರು ಮತ್ತು ಅರಕ್ಕೋಣಂ ಕಡೆಗೆ ಸೇವೆಗಳ ಸಂಖ್ಯೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ತಿಳಿಸಲು ನಾವು ಸಂತೋಷಪಡುತ್ತೇವೆ. ಆದರೆ ಸದ್ಯಕ್ಕೆ ಕೆಲವು ಸೇವೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ. ರೈಲು ಸೇವೆಗಳನ್ನು ಸಹಜ ಸ್ಥಿತಿಗೆ ತರಲು ಕೆಲಸ ನಡೆಯುತ್ತಿದೆ" ಎಂದು ಟ್ವೀಟ್‌ನಲ್ಲಿ ರೈಲ್ವೇ ಇಲಾಖೆ ಹೇಳಿದೆ.

English summary
The flooding in Tamil Nadu, triggered by intense showers and the release of surplus water from dams, has claimed 14 lives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X