ಸುಪ್ರೀಂಕೋರ್ಟಲ್ಲಿ ತೀರ್ಪು ಉಲ್ಟಾ ಆದ್ರೆ ಅಮ್ಮನ ಭವಿಷ್ಯವೂ ಪುಲ್ಟಾ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಮೇ 19 : ತಮಿಳುನಾಡಿನ ಜನರು ಎಲ್ಲಾ ನಂಬಿಕೆಗಳನ್ನು ಬುಡಮೇಲು ಮಾಡಿದ್ದಾರೆ. ಜೆ.ಜಯಲಲಿತಾ ಅವರಿಗೆ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಕೊಟ್ಟಿದ್ದಾರೆ. ಆದರೆ, 'ಅಮ್ಮ'ನ ಭವಿಷ್ಯ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ.[ವಿಜಯೋತ್ಸಾಹದ ಚಿತ್ರಗಳು]

ಅಕ್ರಮ ಆಸ್ತಿಗಳಿಕೆ ವಿವಾದ ಜಯಲಲಿತಾ ಅವರನ್ನು ಕಾಡುತ್ತಿದೆ. ಈ ಪ್ರಕರಣದಲ್ಲಿ ಜಯಲಲಿತಾ, ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರನ್ನು ದೋಷಮುಕ್ತ ಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. [ಅಮ್ಮ ರಿಟರ್ನ್ಸ್, ತಮಿಳುನಾಡಿನಲ್ಲಿ ಎಐಎಡಿಎಂಕೆ ದಾಖಲೆ]

jayalalithaa

ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯುವ ತೀರ್ಮಾನ ಈಗ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಜಯಲಲಿತಾ ಅವರು ಜೈಲು ಸೇರಿದ್ದರು. ಕರ್ನಾಟಕ ಹೈಕೋರ್ಟ್ ಅವರನ್ನು ಖುಲಾಸೆಗೊಳಿಸಿದ ಮೇಲೆ ಪುನಃ ಮುಖ್ಯಮಂತ್ರಿಯಾಗಿದ್ದರು. [ಜಯಮ್ಮನ 1 ರು. ಇಡ್ಲಿ ಸಾಂಬಾರಿಗೆ ಮರುಳಾದ ಮತದಾರರು]

ಸದ್ಯ, ಜಯಲಲಿತಾ ಅವರ ಸಂಪೂರ್ಣ ರಾಜಕೀಯ ನಡೆ ಕೋರ್ಟ್ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಜೂನ್ 1ರಂದು ಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುವ ಸಾಧ್ಯತೆ ಇದೆ. [ಜಯಲಲಿತಾರಿಂದ ಆಸ್ತಿ ಘೋಷಣೆ, 2 ಕೋಟಿ ರು ಖೋತಾ!]

ಒಂದು ವೇಳೆ ಜಯಲಲಿತಾ ಅವರನ್ನು ಖುಲಾಸೆಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದರೆ ಅಮ್ಮನಿಗೆ ನೆಮ್ಮದಿ ಸಿಗಲಿದೆ. ತೀರ್ಪು ರದ್ದಾದರೆ ಅವರು ಮತ್ತೆ ಜೈಲು 4 ವರ್ಷಗಳ ಕಾಲ ಜೈಲು ಸೇರಬೇಕಾಗುತ್ತದೆ ಮತ್ತು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಜಯಲಲಿತಾ ಅವರ ಪ್ರಕರಣದ ವಿಚಾರಣೆಯ ವಾದ ಮಂಡನೆಯನ್ನು ಜೂನ್ 1ರಂದು ಪೂರ್ಣಗೊಳಿಸಿ ಎಂದು ಸುಪ್ರೀಂಕೋರ್ಟ್ ವಕೀಲರಿಗೆ ಸೂಚನೆ ನೀಡಿದೆ. ಜುಲೈ ಮೊದಲ ವಾರದೊಳಗೆ ತೀರ್ಪು ಪ್ರಕಟಗೊಳ್ಳುವ ನಿರೀಕ್ಷೆ ಇದೆ. [ತಮಿಳುನಾಡಿನಲ್ಲಿ ಅಮ್ಮ ಆಡಳಿತ, ಡೋಲು ಬಡಿತ!]

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
With the voters in Tamil Nadu reposing faith in J.Jayalalithaa and giving her a second term, it appears that she has crossed a major hurdle. However there is one nagging issue that would be on the back of her mind and that is the appeal in the Supreme Court challenging her acquittal in the disproportionate assets case.
Please Wait while comments are loading...