• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಮಿಳುನಾಡು ಸರ್ಕಾರಕ್ಕೆ ಬೆನ್ನೆಲುಬಾಗಿರುವುದೇ ಬಿಜೆಪಿ; ಪಳನಿಸ್ವಾಮಿ

|

ನವದೆಹಲಿ, ಮಾರ್ಚ್ 24: "ನನ್ನ ಅನುಭವ, ಜ್ಞಾನದಿಂದಷ್ಟೇ ನನಗೆ ಈ ಸ್ಥಾನ ಸಿಕ್ಕಿರುವುದು. ಏಕಾಏಕಿ ನನಗೆ ಯಾವುದೂ ದೊರೆತಿಲ್ಲ. ನಾನು ಕೂಡ ಸಂಸದ, ಶಾಸಕ, ಸಚಿವ ಆಗಿ ನಂತರ ಸಿಎಂ ಆಗಿದ್ದೇನೆ" ಎಂದು ಹೇಳಿಕೊಂಡಿದ್ದಾರೆ ತಮಿಳುನಾಡು ಸಿಎಂ ಎಡಪ್ಪಾಡಿ ಕೆ ಪಳನಿಸ್ವಾಮಿ.

ಶಶಿಕಲಾ ಅವರ ಆಜ್ಞೆಯ ಮೇರೆಗೆ ಪಳನಿಸ್ವಾಮಿ ಅವರು ತಮಿಳುನಾಡು ಮುಖ್ಯಮಂತ್ರಿಯಾದರು ಎಂಬ ಆರೋಪಕ್ಕೆ "ಎನ್‌ಡಿ ಟಿವಿ"ಗೆ ನೀಡಿರುವ ಸಂದರ್ಶನದಲ್ಲಿ ಪಳನಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. "ನನ್ನ ಅರ್ಹತೆ ಮೇಲೆ ನನ್ನನ್ನು ಆಯ್ಕೆ ಮಾಡಲಾಗಿದೆಯೇ ಹೊರತು ಯಾರ ಹಂಗಿನಿಂದಲೂ ಅಲ್ಲ" ಎಂದಿದ್ದಾರೆ. ಜೊತೆಗೆ ತಮ್ಮೊಂದಿಗೆ ಮೈತ್ರಿಯಲ್ಲಿರುವ ಬಿಜೆಪಿ ಬೆಂಬಲದ ಕುರಿತೂ ಮಾತನಾಡಿದ್ದಾರೆ. ಮುಂದೆ ಓದಿ...

ಕರುಣಾನಿಧಿಯವರೇ ತಮ್ಮ ಮಗ ಸ್ಟಾಲಿನ್‌ನನ್ನು ನಂಬಲಿಲ್ಲ; ಪಳನಿಸ್ವಾಮಿ

"ಕರುಣಾನಿಧಿಯವರನ್ನು ಯಾರೂ ಚುನಾಯಿಸಿರಲಿಲ್ಲ"

ತಮ್ಮ ನೇಮಕವನ್ನು, ಐದು ಬಾರಿ ತಮಿಳುನಾಡಿನ ಸಿಎಂ ಆಗಿದ್ದ ಡಿಎಂಕೆ ಮುಖಂಡ ದಿ. ಎಂ. ಕರುಣಾನಿಧಿ ಅವರೊಂದಿಗೆ ಹೋಲಿಸಿದ ಅವರು, "ಕರುಣಾನಿಧಿಯವರನ್ನು ಸಿಎಂ ಆಗುವಂತೆ ಯಾರೂ ಚುನಾಯಿಸಿರಲಿಲ್ಲ. ಅಣ್ಣಾದೊರೈ ಅವರ ಸಾವಿನ ನಂತರ ಇವರು ಅಧಿಕಾರಕ್ಕೆ ಬಂದರಷ್ಟೆ. ಅಣ್ಣಾ ಅವರಿಗೆ ಮಾತ್ರ ಮತ ನೀಡಲಾಗಿತ್ತು. ಒಬ್ಬ ನಾಯಕ ಸತ್ತ ನಂತರ ಆ ಜಾಗಕ್ಕೆ ಒಬ್ಬರನ್ನು ನೇಮಿಸಲಾಗುತ್ತದೆ. ಅದೇ ರೀತಿ ನಾನು ಕೂಡ ಮುಖ್ಯಮಂತ್ರಿಯಾದೆ" ಎಂದು ಹೇಳಿದ್ದಾರೆ.

 ಡಿಎಂಕೆ ಕೂಡ ಬಿಜೆಪಿ-ಬಿ ಟೀಮ್ ಆಗಿತ್ತಲ್ಲವೇ?

ಡಿಎಂಕೆ ಕೂಡ ಬಿಜೆಪಿ-ಬಿ ಟೀಮ್ ಆಗಿತ್ತಲ್ಲವೇ?

ತಮಿಳುನಾಡಿನಲ್ಲಿ ಮುಂಬರುವ ಚುನಾವಣೆಯಲ್ಲಿ ಡಿಎಂಕೆ ಪಕ್ಷದ ಎಂಕೆ ಸ್ಟಾಲಿನ್ ಪಳನಿಸ್ವಾಮಿ ಅವರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಾರೆ. ಸ್ಟಾಲಿನ್ ಎಐಎಡಿಎಂಕೆಯನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಪಳನಿಸ್ವಾಮಿ, 1999ರ ಅವಧಿಯನ್ನು ಉಲ್ಲೇಖಿಸಿ, ಎಐಎಡಿಎಂಕೆ-ಬಿಜೆಪಿ ಸಂಬಂಧ ಆಗ ನೆಲಕಚ್ಚಿತ್ತು. ಡಿಎಂಕೆ, ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಡಿಎಂಕೆ ಕೂಡ ಬಿಜೆಪಿ ಬಿ ಟೀಮ್ ಆಗಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎನ್‌ಡಿಎ ಸರ್ಕಾರದಲ್ಲಿ ಡಿಎಂಕೆ ಮುಖಂಡ ಮುರಸೋಲಿ ಮಾರನ್ ಅವರು ಕೇಂದ್ರ ಸಚಿವರಾಗಿದ್ದರು. ಡಿಎಂಕೆ ಬಿಜೆಪಿ ಕೈಜೋಡಿಸುತ್ತವೆಂದರೆ ಅದು ಸಲ್ಲುತ್ತದೆ, ಆದರೆ ಎಐಎಡಿಎಂಕೆ ಕೈಜೋಡಿಸಿದರೆ ತಪ್ಪಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ತೆವಳಿ ಹೋಗಲು ನಾನೇನು ಹಲ್ಲಿಯೇ ಅಥವಾ ಹಾವೇ?: ಸ್ಟಾಲಿನ್ ವಿರುದ್ಧ ಇಪಿಎಸ್ ಕಿಡಿ

"ಬಿಜೆಪಿಯಿಂದಲೇ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ"

ಬಿಜೆಪಿ ಎಐಎಡಿಎಂಕೆ ಜೊತೆ ಮೈತ್ರಿಗೆ ಒತ್ತಡ ಹೇರಿತ್ತು. ತಮ್ಮನ್ನು ಬೆಂಬಲಿಸುವಂತೆ ಒತ್ತಾಯ ತಂದಿತ್ತು ಎಂಬ ಅರೋಪವನ್ನು ತಳ್ಳಿ ಹಾಕಿರುವ ಅವರು, "ಇದು ತಪ್ಪು. ನಮಗೆ ಕೇಂದ್ರದಿಂದ ಯಾವುದೇ ಒತ್ತಡ ಬಂದಿಲ್ಲ. ಬಿಜೆಪಿ ಬೆಂಬಲದಿಂದಲೇ ಎಐಎಡಿಎಂಕೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯಿಂದಲೇ ಎಐಎಡಿಎಂಕೆ ಈ ಮಟ್ಟದಲ್ಲಿ ಅಧಿಕಾರ ನಡೆಸಲು ಸಾಧ್ಯವಾಗಿದೆ. ಬಿಜೆಪಿ ಎಐಎಡಿಎಂಕೆಗೆ ಬೆನ್ನೆಲುಬಾಗಿದೆ" ಎಂದು ಹೇಳಿದ್ದಾರೆ.

 ಶಶಿಕಲಾ ಬಗ್ಗೆ ಮಾತನಾಡಲು ನಿರಾಕರಿಸಿದ ಪಳನಿಸ್ವಾಮಿ

ಶಶಿಕಲಾ ಬಗ್ಗೆ ಮಾತನಾಡಲು ನಿರಾಕರಿಸಿದ ಪಳನಿಸ್ವಾಮಿ

ಜಯಲಲಿತಾ ಆಪ್ತೆ ಶಶಿಕಲಾ ರಾಜಕೀಯ ವಿದಾಯ ಪಡೆದ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, "ಈ ಪ್ರಶ್ನೆಯನ್ನು ಅವರಿಗೇ ಕೇಳಬೇಕು" ಎಂದಿದ್ದಾರೆ. ನಾಲ್ಕು ವರ್ಷಗಳ ಜೈಲುವಾಸದ ನಂತರ ಶಶಿಕಲಾ ತಮಿಳುನಾಡಿಗೆ ಮರಳಿದಾಗ ಶಶಿಕಲಾ ಹಾಗೂ ಪಳನಿಸ್ವಾಮಿ ಅವರ ನಡುವೆ ಅಧಿಕಾರದ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಶಶಿಕಲಾ ಇದ್ದಕ್ಕಿದ್ದಂತೆ ರಾಜಕೀಯ ವಿದಾಯ ಹೇಳಿದ್ದು ಎಐಎಡಿಎಂಕೆ ದಾರಿಯನ್ನು ಸುಲಭ ಮಾಡಿಕೊಟ್ಟಿತ್ತು.

English summary
"I got the position because of my experience and knowledge... It did not come immediately. I was MP, MLA, minister, then chief minister," said tamil nadu cm Palaniswami in an interview with NDTV,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X