ತಮಿಳುನಾಡಿನ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: ಮಾಲೀಕ ಸೇರಿ 7ಮಂದಿ ದುರ್ಮರಣ

ಚೆನ್ನೈ, ಸೆಪ್ಟೆಂಬರ್ 04: ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಾಲೀಕ ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ.

ತಮಿಳು ನಾಡಿನ ಕದ್ದಲೂರು ಜಿಲ್ಲೆಯ ಪಟಾಕಿ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸ್ಫೋಟ ಸಂಭವಿಸಿ 7 ಮಂದಿ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ ಎಂದು ಜಿಲ್ಲಾ ಎಸ್ಪಿ ಎಂ ಶ್ರೀ ಅಭಿನವ್ ತಿಳಿಸಿದ್ದಾರೆ.

ಚೆನ್ನೈಯಿಂದ 190 ಕಿಲೋ ಮೀಟರ್ ದೂರದಲ್ಲಿ ಕದ್ದಲೂರು ಜಿಲ್ಲೆಯ ಕಟ್ಟುಮನ್ನರ್ಕೊಯ್ಲ್ ಎಂಬಲ್ಲಿ ಈ ದುರ್ಘಟನೆ ನಡೆದಿದ್ದು ಸ್ಫೋಟಕ್ಕೆ ಕಾರಣವೇನು ಎಂಬುದನ್ನು ತನಿಖಾ ತಂಡ ಪತ್ತೆಹಚ್ಚುವ ಕಾರ್ಯದಲ್ಲಿ ನಿರತವಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದು ಹೆಚ್ಚಿನ ಮಾಹಿತಿ ಸಿಗಬೇಕಿದೆ.

Tamil Nadu Fireworks Factory Explosion: 7 Killed

ಕೊರೊನಾ ಸೋಂಕಿನ ಲಾಕ್‌ಡೌನ್ ಬಳಿಕ ಹಂತ ಹಂತವಾಗಿ ಸಡಿಲಿಕೆ ಮಾಡಿದ ಲಾಕ್‌ಡೌನ್‌ ನಿಯಮಗಳಲ್ಲಿ ನೂರಕ್ಕೆ ನೂರಷ್ಟು ಕೆಲಸಗಾರರೊಂದಿಗೆ ಕಾರ್ಖಾನೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಕಾರ್ಖಾನೆಯು ಪರವಾನಗಿ ಪಡೆದು ಕೆಲಸವನ್ನು ನಡೆಸುತ್ತಿತ್ತು.

ಅಲ್ಲಿ ಸಾಕಷ್ಟು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೇವಲ ಪಟಾಕಿ ಮಾತ್ರ ತಯಾರಿಸುತ್ತಿದ್ದರೋ ಅಥವಾ ದೇಸೀಯ ಬಾಂಬ್ ತಯಾರಿಸುತ್ತಿದ್ದರೋ ಎಂಬುದು ತನಿಖೆ ಬಳಿಕ ಹೊರಬರಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+