ಗಜ ಅವಾಂತರ: ತಮಿಳುನಾಡಿಗೆ ಸಾವಿರ ಕೋಟಿ ಪರಿಹಾರ ಘೋಷಣೆ

ಚೆನ್ನೈ, ನವೆಂಬರ್ 20: ಗಜ ಚಂಡಮಾರುತ ತಮಿಳುನಾಡಿನಲ್ಲಿ ಭಾರಿ ಅವಾಂತರವನ್ನು ಸೃಷ್ಟಿಸಿದ್ದು, ಪ್ರದೇಶಗಳ ಪುನರ್ ನಿರ್ಮಾಣ ಮಾಡಲು ತಮಿಳುನಾಡು ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಒಂದು ಸಾವಿರ ಕೋಟಿ ಪರಿಹಾರ ಘೋಷಿಸಿದ್ದಾರೆ.

ಇದುವರೆಗೂ ಚಂಡಮಾರುತದಿಂದಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಸಾವಿರ ಮತ್ತು ಬಟ್ಟೆ ಮತ್ತು ಪಾತ್ರೆಗಳ ಖರೀದಿಗಾಗಿ 3800 ರೂ ಹಣವನ್ನು ಬಿಡುಗಡೆ ಮಾಡಲಾಗಿದೆ. ಹಾನಿಗೊಳಗಾದ ದೋಣಿ ಮಾಲಿಕರಿಗೆ 5 ಸಾವಿರ ರೂ ಗಳನ್ನು ಮಂಜೂರು ಮಾಡಲಾಗಿದೆ.

ಸರ್ಕಾರಿ ಪರಿಹಾರ ಕೇಂದ್ರಗಳಲ್ಲಿ 2.51 ಲಕ್ಷ ಜನರಿಗೆ ತಮಿಳುನಾಡು ಮೂದ ಆವಿನ್ ಹಾಲು ಪೂರೈಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕೇಂದ್ರದ ವಿಕೋಪ ಪರಿಹಾರ ನಿಧಿಯಿಂದ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಮತ್ತ ಪುನರ್ ಸ್ಥಾಪನೆ ಕಾರ್ಯಕ್ಕಾಗಿ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಜಾನುವಾರು, ಕೋಳಿ ಮತ್ತ ಹಾನಿಗೊಳಗಾದ ಬೆಳೆಗಾಗಿಯೇ ಪರಿಹಾರವನ್ನು ಘೋಷಿಸಲಾಗಿದ್ದು, ಇದಕ್ಕೂ ಮುನ್ನ ಸಿಎಂ ಪಳನಿಸ್ವಾಮಿ ಮೃತರ ಕುಟುಂಬಕ್ಕೆ 10 ಲಕ್ಷಪರಿಹಾರ ಘೋಷಿಸಿದ್ದಾರೆ.

Tamil Nadu CM Edappadi K Palaniswami visits cyclone-hit areas

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ತಮಿಳುನಾಡಿನ ಕರಾವಳಿ ಪ್ರದೇಶಗಳಾದ ನಾಗಪಟ್ಟಣಂ, ವೇದಾರಣ್ಯಂ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದುವರೆಗೂ 46 ಮಂದಿ ಮೃತಪಟ್ಟಿದ್ದಾರೆ. 82,102 ಕೃಷಿ ಭೂಮಿ ನಾಶವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+