• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಭಿನಂದನ್ ಗೆ ಪರಮ ವೀರ ಚಕ್ರ ನೀಡುವಂತೆ ತಮಿಳುನಾಡಿನಿಂದ ಶಿಫಾರಸು

|

ಚೆನ್ನೈ, ಮಾರ್ಚ್ 08: ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್, ಪೈಲಟ್ ಅಭಿನಂದನ್ ವರ್ತಮಾನ್ ಅವರಿಗೆ ದೇಶದ ಅತ್ಯುನ್ನುತ ಸೇನಾ ಪದಕ ಪರಮ ವೀರ ಚಕ್ರ ನೀಡಿ ಗೌರವಿಸುವಂತೆ ತಮಿಳುನಾಡು ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಬಾಲಕೋಟ್ ವೈಮಾನಿಕ ದಾಳಿ ಬಳಿಕ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಅಟ್ಟಿಸಿಕೊಂಡು ದಾಳಿ ನಡೆಸಿದ್ದ ಮಿಗ್ 21 ಬೈಸನ್ ವಿಮಾನದ ಪೈಲಟ್ ಅಭಿನಂದನ್ ಅವರ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಎಫ್ 16 ಹೊಡೆದುರುಳಿಸುವ ಭರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆರೆ ಸಿಕ್ಕಿದ್ದ ಅಭಿನಂದನ್ ಅವರು ಸುಮಾರು 60 ಗಂಟೆಗಳ ಕಾಲ ಶತ್ರು ರಾಷ್ಟ್ರದ ಹಿಡಿತದಲ್ಲಿದ್ದರು.

ಮಿಗ್ 21ರಿಂದ ಜಿಗಿಯುವ ಮುನ್ನ ಅಭಿನಂದನ್ ರೇಡಿಯೋ ಸಂದೇಶವೇನು?

ಆದರೂ, ದೇಶಕ್ಕೆ ಮಾರಕವಾಗಬಲ್ಲ ಯಾವುದೇ ಮಾಹಿತಿಯನ್ನು ಹೊರ ಹಾಕದೆ, ಧೈರ್ಯ ಸಂಯಮ ಮೆರೆದಿದ್ದಾರೆ. ಹೀಗಾಗಿ, ಅವರಿಗೆ ಅತ್ಯುನ್ನತ ಮಿಲಿಟರಿ ಗೌರವ ಸಿಗಬೇಕಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಅಭಿನಂದನ್‌ಗೂ ಬೆಂಗಳೂರಿಗೂ ಅಳಿಯದ ನಂಟು ಇದೆ

ಪರಮ್ ವೀರ್ ಚಕ್ರ ಇಲ್ಲಿ ತನಕ 21 ಬಾರಿ ನೀಡಲಾಗಿದೆ.ಯುನೈಟೆಡ್ ಸ್ಟೇಟ್ಸ್ ನ ಮೆಡಲ್ ಆಫ್ ಹಾನರ್ ಹಾಗೂ ಯುನೈಟೆಡ್ ಕಿಂಗ್ಡಮ್ ನ ವಿಕ್ಟೋರಿಯಾ ಕ್ರಾಸ್ ಗೆ ಸಮಾನದ ಮಿಲಿಟರಿ ಗೌರವ ಇದ್ದಾಗಿದೆ. ಈ ಪೈಕಿ 14 ಮಂದಿ ಹುತಾತ್ಮರಿಗೆ ಹಾಗೂ 16 ಮಂದಿ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಕಾದಾಡಿದ ಯೋಧರಿಗೆ ಲಭಿಸಿದೆ. 21 ಪ್ರಶಸ್ತಿ ವಿಜೇತರ ಪೈಕಿ 20 ಮಂದಿ ಭಾರತೀಯ ಭೂ ಸೇನೆಗೆ ಸೇರಿದ್ದರೆ, ಒಬ್ಬರು(ಫ್ಲೈಯಿಂಗ್ ಆಫೀಸರ್ ನಿರ್ಮಲ್ ಜಿತ್ ಸಿಂಗ್ ಶೆಖೋನ್) ಮಾತ್ರ ಭಾರತೀಯ ವಾಯುಸೇನೆಗೆ ಸೇರಿದವರು.

English summary
Indian Air Force pilot Abhinandan Varthaman, who spent 60 hours in Pakistani captivity after shooting down an intruding Pak F-16 fighter jet last month, should be conferred with the Param Vir Chakra, the country's highest military honour, Tamil Nadu Chief Minister Edappadi K Palaniswami has written to Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X