ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮತಿ ಇಲ್ಲದೆ ಯಾತ್ರೆ: ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಬಂಧನ

|
Google Oneindia Kannada News

ಚೆನ್ನೈ, ನವೆಂಬರ್ 6: ಪೊಲೀಸರ ಅನುಮತಿ ಇಲ್ಲದೆ 'ವೆಟ್ರಿ ವೇಲ್ ಯಾತ್ರಾ' ಆಯೋಜಿಸಿದ್ದಕ್ಕಾಗಿ ತಮಿಳು ನಾಡು ಬಿಜೆಪಿ ರಾಜ್ಯ ಅಧ್ಯಕ್ಷ ಎಲ್ ಮುರುಗನ್ ಮತ್ತು ಸುಮಾರು ನೂರು ಮಂದಿ ಪಕ್ಷದ ಸದಸ್ಯರನ್ನು ಶುಕ್ರವಾರ ಬಂಧಿಸಲಾಗಿದೆ. ಪಕ್ಷದ ಚಟುವಟಿಕೆಯನ್ನು ತಡೆಯಲು ಮುಂದಾದ ಸಂದರ್ಭದಲ್ಲಿ ಈ ಬಂಧನ ಮಾಡಲಾಗಿದೆ.

ನವೆಂಬರ್ 6ರಿಂದ ಡಿಸೆಂಬರ್ 6ರವರೆಗೆ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಆದರೆ ರಾಜ್ಯದಲ್ಲಿನ ಕೋವಿಡ್ 19 ಪರಿಸ್ಥಿತಿಯನ್ನು ಗಮನಿಸಿ ಈ ಯಾತ್ರೆಗೆ ಅನುಮತಿ ನೀಡಲಾಗುತ್ತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಗುರುವಾರ ಮಾಹಿತಿ ನೀಡಿತ್ತು.

ಆನ್ಲೈನ್ ಜೂಜು ನಿಷೇಧಕ್ಕೆ ಮುಂದಾದ ತಮಿಳುನಾಡು ಆನ್ಲೈನ್ ಜೂಜು ನಿಷೇಧಕ್ಕೆ ಮುಂದಾದ ತಮಿಳುನಾಡು

ಚೆನ್ನೈ ಪಕ್ಕದ ತಿರುವಳ್ಳೂರ್ ಜಿಲ್ಲೆಯ ತಿರುತ್ತನಿ ಮುರುಗನ್ ದೇವಸ್ಥಾನದಿಂದ ಆಯೋಜಿಸಿದ್ದ ಯಾತ್ರೆಯು ತನ್ನ ಹಕ್ಕು ಎಂದು ಬಿಜೆಪಿ ಪ್ರತಿಪಾದಿಸಿದೆ. 'ನನಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ. ಆರಾಧನೆಯು ನನ್ನ ಸಂವಿಧಾನ ಬದ್ಧ ಹಕ್ಕು' ಎಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುವ ಮುನ್ನ ಮುರುಗನ್ ಹೇಳಿದ್ದರು.

Tamil Nadu BJP Chief Murugan Arrested After Launching Vetri Vel Yatra

ಚೆನ್ನೈ-ತಿರುವಳ್ಳುರ್ ಗಡಿಭಾಗದಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತರ ವಾಹನಗಳನ್ನು ತಡೆದರು. ಮುರುಗನ್ ಮತ್ತು ಕೆಲವೇ ಮಂದಿ ಮುಂದೆ ಸಾಗಲು ಅನುಮತಿ ನೀಡಿದರು. ತಿರುವಳ್ಳೂರ್‌ನಲ್ಲಿನ ಕಾರ್ಯಕ್ರಮದೊಂದಿಗೆ ನಂಟು ಹೊಂದಿರುವ ಯಾವುದೇ ವ್ಯಕ್ತಿಯನ್ನು ಬಂಧಿಸಲಾಗುವುದು ಪೊಲೀಸರು ಹೇಳಿದ್ದರು. ಬಳಿಕ ಮುರುಗನ್ ಹಾಗೂ ಇತರರನ್ನು ಬಂಧಿಸಲಾಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ: ನಟ ಕಮಲ ಹಾಸನ್ ಸ್ಪರ್ಧೆ ಖಚಿತತಮಿಳುನಾಡು ವಿಧಾನಸಭೆ ಚುನಾವಣೆ: ನಟ ಕಮಲ ಹಾಸನ್ ಸ್ಪರ್ಧೆ ಖಚಿತ

ಇದು ಆಡಳಿತಾರೂಢ ಎಐಎಡಿಎಂಕೆ ಸರ್ಕಾರವು 2019ರ ಲೋಕಸಭೆ ಚುನಾವಣೆ ಸಮೀಪದಲ್ಲಿ ಮೈತ್ರಿ ಕಡಿದುಕೊಂಡ ಬಳಿಕ ಮಾಜಿ ಮಿತ್ರಪಕ್ಷ ಬಿಜೆಪಿಯ ಚಟುವಟಿಕೆಯನ್ನು ಹತ್ತಿಕ್ಕುತ್ತಿರುವುದು ಇದು ಮೂರನೇ ಬಾರಿಯಾಗಿದೆ.

English summary
Tamil Nadu police has arrested state BJP chief L Murugan and around 100 party workers after launching Vetri Vel Yatra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X