• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತರಕಾರಿ ಖರೀದಿಸಿದ್ರೆ ವೈರಸ್ ಫ್ರೀ: ಈ ಮಾರುಕಟ್ಟೆಗೆ ಹೋದ್ರೆ ಕೊರೊನಾ ಪಕ್ಕಾ!

|

ಚೆನ್ನೈ, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿನಿಂದ ನಲುಗಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯ ರಾಜಧಾನಿ ಚೆನ್ನೈನಲ್ಲಿರುವ ಒಂದೇ ಒಂದು ಸೂಪರ್ ಮಾರ್ಕೆಟ್ ನಿಂದಾಗಿ ಶರವೇಗದಲ್ಲಿ ಕೊವಿಡ್-19 ಹರಡುತ್ತಿದೆ.

ತಮಿಳುನಾಡಿನ ಕುದ್ದಾಲೂರು ಪ್ರದೇಶದಲ್ಲೇ ಕನಿಷ್ಠ 122 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಸೋಮವಾರ ಪತ್ತೆಯಾದ ಸೋಂಕಿತ ಪ್ರಕರಣಗಳ ಪೈಕಿ ಬಹುಪಾಲು ಮಂದಿಗೆ ಕೊಯಂಬೀಡು ಪ್ರದೇಶದ ಮಾರುಕಟ್ಟೆಯಲ್ಲಿಯೇ ಸೋಂಕು ತಗಲಿರುವುದು ಗೊತ್ತಾಗಿದೆ.

ಕೊರೊನಾ ವೈರಸ್ 'ಸಾಂಕ್ರಾಮಿಕ ಪಿಡುಗು' ಎಂದು ಘೋಷಿಸಲು ಕಾರಣವೇನು?

65 ಎಕರೆ ಪ್ರದೇಶದಲ್ಲಿರುವ ಕೊಯಂಬೀಡು ಮಾರುಕಟ್ಟೆಯು ತಮಿಳುನಾಡಿನಲ್ಲಿ ಅತ್ಯಂತ ಪ್ರಸಿದ್ಧ ಮಾರುಕಟ್ಟೆಯಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಜನರು ಇದೇ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಸರಕುಗಳ ಮಾರಾಟ ಮತ್ತು ಖರೀದಿಗೆ ತೆರಳುತ್ತಾರೆ. ಇದೊಂದು ಮಾರುಕಟ್ಟೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳು ಗ್ರೀನ್ ಝೋನ್ ನಿಂದ ರೆಡ್ ಹಾಗೂ ಆರೆಂಜ್ ಝೋನ್ ಗಳಾಗಿ ಬದಲಾಗಿವೆ.

ಕೊರೊನಾ ವೈರಸ್ ಕೇಂದ್ರವಾದ ಚೆನ್ನೈನ ಮಾರುಕಟ್ಟೆ

ಕೊರೊನಾ ವೈರಸ್ ಕೇಂದ್ರವಾದ ಚೆನ್ನೈನ ಮಾರುಕಟ್ಟೆ

ಚೆನ್ನೈನಲ್ಲಿರುವ ಕೊಯಂಬೀಡು ಮಾರುಕಟ್ಟೆಯು ಕೊರೊನಾ ವೈರಸ್ ಹರಡುವಿಕೆಯ ಕೇಂದ್ರ ಸ್ಥಾನವಾಗಿದೆ. ಕುದ್ದಾಲೂರ್ ನಿಂದ ದಿಂದಿಗಲ್ ಗೆ ತೆರಳಿದ ಸಾಕಷ್ಟು ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಇನ್ನೂ, 450ಕ್ಕೂ ಅಧಿಕ ಮಂದಿಯ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿ ತಪಾಸಣೆಗೆ ಕಳುಹಿಸಿದ್ದು, ವರದಿಗಳು ಬರಬೇಕಿದೆ.

ಕೊಯಂಬೀಡು ಮಾರುಕಟ್ಟೆಗೆ ತೆರಳಿದ 82 ಮಂದಿಗೆ ಸೋಂಕು

ಕೊಯಂಬೀಡು ಮಾರುಕಟ್ಟೆಗೆ ತೆರಳಿದ 82 ಮಂದಿಗೆ ಸೋಂಕು

ಸೋಮವಾರ ಕೊಯಂಬೀಡು ಮಾರುಕಟ್ಟೆಗೆ ಭೇಟಿ ನೀಡಿದ ವಿಲ್ಲುಪುರಂ ಮೂಲದ 49 ಮಂದಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ಭಾನುವಾರ ಇದೇ ಮಾರುಕಟ್ಟೆಗೆ ತೆರಳಿದ್ದ 33 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು.

ರೆಡ್ ಝೋನ್ ಗಳಾಗಿ ಬದಲಾದ ಆರೆಂಜ್ ಝೋನ್!

ರೆಡ್ ಝೋನ್ ಗಳಾಗಿ ಬದಲಾದ ಆರೆಂಜ್ ಝೋನ್!

ಕೊಯಂಬೀಡು ಮಾರುಕಟ್ಟೆ ಲಿಂಕ್ ನಿಂದಾಗಿ ಕಿತ್ತಳೆ ವಲಯದಲ್ಲಿದ್ದ ತಮಿಳುನಾಡಿದ ಮೂರು ಜಿಲ್ಲೆಗಳು ಕೆಂಪು ವಲಯಗಳಾಗಿ ಬದಲಾಗಿವೆ. ತಮಿಳುನಾಡಿನ ಕುದ್ದಾಲೂರು, ಟೆಂಕಾಸಿ ಹಾಗೂ ದಿಂಡಿಗಲ್ ಜಿಲ್ಲೆಗಳನ್ನು ಕಿತ್ತಳೆ ವಲಯದಿಂದ ಕೆಂಪು ವಲಯಕ್ಕೆ ಸೇರಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಕೆಂಪು ವಲಯಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.

ಚೆನ್ನೈನ ಈ ಮಾರುಕಟ್ಟೆಗೆ ಹೋಗಿದ್ರೆ ತಪಾಸಣೆ ಮಾಡಿಸಿಕೊಳ್ಳಿ

ಚೆನ್ನೈನ ಈ ಮಾರುಕಟ್ಟೆಗೆ ಹೋಗಿದ್ರೆ ತಪಾಸಣೆ ಮಾಡಿಸಿಕೊಳ್ಳಿ

ಚೆೆನ್ನೈನಲ್ಲಿ ಇರುವ ಕೊಯಂಬೀಡು ಮಾರುಕಟ್ಟೆಗೆ ಒಮ್ಮೆ ಭೇಟಿ ನೀಡಿದವರೂ ಕೂಡಾ ಎಚ್ಚರಿಕೆ ವಹಿಸಬೇಕು. ಕಡ್ಡಾಯವಾಗಿ ಕೊರೊನಾ ವೈರಸ್ ಸೋಂಕು ತಪಾಸಣೆಗೆ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು. ಆಯಾ ಜಿಲ್ಲಾಡಳಿತಗಳು ವೈದ್ಯಕೀಯ ತಪಾಸಣೆಗೆ ಅಗತ್ಯ ವ್ಯವಸ್ಥೆಯನ್ನು ಕಲ್ಪಿಸಿವೆ ಎಂದು ತಿಳಿದು ಬಂದಿದೆ.

English summary
Tamil Nadu Based Market Is Super Spreader Of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X