ನಿಮಿಷದಲ್ಲಿ ಪಾಸಾಯ್ತು ಜಲ್ಲಿಕಟ್ಟು ಮಸೂದೆ!

Subscribe to Oneindia Kannada

ಚೆನ್ನೈ, ಜನವರಿ 23: ಜಲ್ಲಿಕಟ್ಟು ಮಸೂದೆಗಾಗಿ ಒತ್ತಾಯಿಸಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಹಿನ್ನಲೆಯಲ್ಲಿ ತಮಿಳುನಾಡು ವಿಧಾನಸಭಾ ಸದಸ್ಯರು ಕ್ಷಣಾರ್ಧದಲ್ಲಿ ಸರ್ವಾನುಮತದಿಂದ ಮಸೂದೆಯನ್ನು ಪಾಸ್ ಮಾಡಿದ್ದಾರೆ.

ಸೋಮವಾರ ತಮಿಳುನಾಡಿನಾದ್ಯಂತ ಪ್ರತಿಭಟನೆಗಳು ಹಿಂಸಾರೂಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಸರಕಾರ ಮಸೂದೆ ಮಂಡಿಸಲು ಹೊರಟಿತ್ತು.

ಸಂಜೆ ವೇಳೆಗೆ ಅಧಿವೇಶನದಲ್ಲಿ ಸ್ವತಃ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಮಸೂದೆ ಮಂಡಿಸಿದರು. ಇದಕ್ಕೆ ಎಲ್ಲಾ ಪಕ್ಷಗಳ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸುತ್ತಿದ್ದಂತೆ ಧ್ವನಿಮತದ ಮೂಲಕ ಮಸೂದೆ ಪಾಸು ಮಾಡಲಾಯಿತು.

 Tamil Nadu Assembly Passed Jallikattu bill

ಸೋಮವಾರ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದ್ದು, ಮಸೂದೆ ಜಾರಿಯಿಂದಾದರೂ ತಣ್ಣಗಾಗುತ್ತಾ ನೋಡಬೇಕಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
After huge protest in the state Tamil Nadu Assembly Passed Jallikattu bill within the few minutes it has been tabled it in the assembly.
Please Wait while comments are loading...