ಬರಲಿದೆ! ತಮಿಳುನಾಡಲ್ಲಿ 'ಅಮ್ಮ' ವೀಕೆಂಡ್ ಬಜಾರ್

Posted By:
Subscribe to Oneindia Kannada

ಚೆನ್ನೈ, ಜೂನ್ 08: ತಮಿಳುನಾಡಿನಲ್ಲಿ ಐತಿಹಾಸಿಕ ವಿಜಯ ದಾಖಲಿಸಿ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ 'ಪುರಚ್ಚಿ ತಲೈವಿ' ಜಯಲಲಿತಾ ಅವರು ಮತ್ತೆ ತಮ್ಮ 'ಅಮ್ಮ ಬ್ರ್ಯಾಂಡ್' ಬೆಳೆಸಲು ಮುಂದಾಗಿದ್ದಾರೆ. ಸ್ವ ಸಹಾಯ ಸಂಘಗಳಿಗೆ ನೆರವಾಗಲು ವಾರಾಂತ್ಯಗಳಲ್ಲಿ 'ಅಮ್ಮ ಬಜಾರ್' ಆರಂಭಿಸಲು ಚಿಂತನೆ ನಡೆಸಲಾಗಿದೆ.

ಸೂಪರ್ ಮಾರ್ಕೆಟ್ ಮಾದರಿಯಲ್ಲೇ ಇರುವ ಅಮ್ಮಾ ಬಜಾರ್ ಸದ್ಯಕ್ಕೆ ವಾರಾಂತ್ಯಕ್ಕೆ ಸೀಮಿತವಾಗಿದ್ದು, ಗ್ರೇಟರ್ ಚೆನ್ನೈ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸಲಿದೆ. ಸರ್ಕಾರಿ ಸಂಸ್ಥೆಗಳು ತಯಾರಿಸುವ ವಿವಿಧ ಉತ್ಪನ್ನಗಳು, ಸ್ವ-ಸಹಾಯ ಸಂಸ್ಥೆಗಳ ಉತ್ಪನ್ನಕ್ಕೆ ಅಮ್ಮಾ ಬಜಾರ್ ಮಾರುಕಟ್ಟೆ ಒದಗಿಸಲಿದೆ. [ತಮಿಳರ ಪಾಲಿಗೆ ಅನ್ನಪೂರ್ಣೆಯಾದ ಜಯಾ ಅಮ್ಮ]

Tamil Nadu AIADMK Government proposed Amma Bazaars

ಎಲ್ಲೆಲ್ಲಿ?: ಮಿಂಟ್ ಫ್ಲೈಓವರ್, ಅರಂಬಕ್ಕಂ ಹಾಗೂ ಕೊಟ್ಟುರ್ ಪುರಂನಲ್ಲಿ ಮಾರುಕಟ್ಟೆ ಆರಂಭಗೊಳ್ಳಲಿದೆ. ಚೆನ್ನೈನ ಮೂರು ಪ್ರಮುಖ ತಾಣಗಳಲ್ಲಿ ಅಮ್ಮಾ ಬಜಾರ್ ನಿರ್ವಿುಸಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಪ್ರದೇಶಗಳಲ್ಲಿ ಅಮ್ಮ ಬಜಾರ್ ಕಾಣಬಹುದು.ಮುಂದಿನ ಹಂತದಲ್ಲಿ 200ಕ್ಕೂ ಅಧಿಕ ಅಮ್ಮಾ ಬಜಾರ್ ತಮಿಳುನಾಡಿನಲ್ಲಿ ತೆರೆದುಕೊಳ್ಳಲಿದೆ.[ಬೆಂಗಳೂರಿಗೆ ಬಂತು ಜಯಲಲಿತಾ ಅಮ್ಮಾ ಕ್ಯಾಂಟೀನ್!]

ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನ ಮತ್ತು ಸೇವೆ ಒದಗಿಸುವುದು ಅಮ್ಮಾ ಬಜಾರ್ ನ ಉದ್ದೇಶವಾಗಿದೆ. ಅಮ್ಮಾ ಬ್ರಾಂಡ್​ನ ವಿವಿಧ ಉತ್ಪನ್ನಗಳು, ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ. ದಿನಬಳಕೆಯ ಸುಮಾರು 650 ವಸ್ತುಗಳು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗುತ್ತದೆ.
ಕ್ಯಾಂಟೀನ್, ಕುಡಿಯುವ ನೀರು, ಸಿಮೆಂಟ್, ಉಪ್ಪು, ಸಕ್ಕರೆ, ಮನೆ ಸೇರಿದಂತೆ ಅನೇಕ ಪದಾರ್ಥಗಳ ಮೇಲೆ ಅಮ್ಮಾ ಬ್ರ್ಯಾಂಡ್ ನೇಮ್ ಕಾಣಬಹುದು. ಬಜೆಟ್ ನಲ್ಲಿ 9 ಸಾವಿರ ಕೋಟಿ ರು ಖೋತಾ ಎಂದು ತೋರಿಸಿದರೂ ಈ ಜನಪ್ರಿಯ ಯೋಜನೆಗಳಿಗೆ ಸಬ್ಸಿಡಿ ರೂಪದಲ್ಲಿ ಹಣ ಎಲ್ಲಿಂದ ಒದಗಿಸುತ್ತಾರೆ ಎಂದು ಡಿಎಂಕೆ ನಾಯಕ ಸ್ಟಾಲಿನ್ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tamil Nadu AIADMK Government proposed Amma Bazaars. “Amma Bazaars” — weekly markets that plan to sell products manufactured by government-aided groups and self-help organisations.
Please Wait while comments are loading...