ತಮಿಳು ನಟಿ ಪೌಲಿನ್ ಜೆಸ್ಸಿಕಾ ಸಾವು: ಆತ್ಮಹತ್ಯೆ ಪತ್ರ ಪತ್ತೆ, ಚುರುಕುಗೊಂಡ ತನಿಖೆ

ಚೆನ್ನೈ, ಸೆ.20: ಖ್ಯಾತ ತಮಿಳು ನಟಿ ಪೌಲಿನ್ ಜೆಸ್ಸಿಕಾ ಸೆಪ್ಟೆಂಬರ್ 18 ರಂದು ಚೆನ್ನೈನ ವಿರುಗಂಬಕ್ಕಂ ಮಲ್ಲಿಕಾ ಅವೆನ್ಯೂದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ದೀಪಾ ಎಂದು ಜನಪ್ರಿಯರಾಗಿದ್ದ 29 ವರ್ಷದ ನಟಿ ಆಂಧ್ರಪ್ರದೇಶದ ಮೂಲದವರು.

ಇತ್ತೀಚೆಗಷ್ಟೇ ಬಿಡುಗಡೆಯಾದ ತಮಿಳಿನ ವೈತಾ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಲ್ಲದೆ, ಅವರು ಹಲವು ತಮಿಳು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಜನಪ್ರಿಯ ನಟಿ ಸೆಪ್ಟೆಂಬರ್ 18 ರ ಭಾನುವಾರದಂದು ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಈ ಅಪಾರ್ಟ್‌ಮೆಂಟ್‌ನಲ್ಲಿ ದೀಪಾ ಒಬ್ಬರೇ ವಾಸವಿದ್ದರು. ಆಕೆಯ ಸಂಬಂಧಿಕರು ಕರೆ ಮಾಡಿದರೂ ಫೋನ್ ಎತ್ತದೇ ಇದ್ದಾಗ ದೀಪಾ ಅವರ ಸ್ನೇಹಿತ ಪ್ರಭಾಕರನ್ ಮನೆಗೆ ಬಂದು ನೋಡಿದ್ದಾರೆ. ಈ ವೇಳೆ ಆಕೆ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಬಳಿಕ ನಟಿಯ ಸಹೋದರ ಚಿತ್ತೂರಿನಿಂದ ಚೆನ್ನೈ ತಲುಪಿ ಪೊಲೀಸರಿಗೆ ದೂರು ನೀಡಿದ್ದಾರೆ.

Tamil actress Pauline Jessica was found dead in her rented flat

ಚೆನ್ನೈನ ಕೊಯಾಂಬೆಡು ಪೊಲೀಸರು ನಟಿಯ ಸಾವಿನ ಬಗ್ಗೆ ನೆರೆಹೊರೆಯವರಿಂದ ಮಾಹಿತಿ ಪಡೆದಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಿಲ್ಪಾಕ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ, ನಟಿಯ ಸಂಬಂಧಿಕರಿಗೆ ತಿಳಿಸಿ, ಮೃತ ದೇಹವನ್ನು ಆಂಧ್ರಪ್ರದೇಶಕ್ಕೆ ಕಳುಹಿಸಲಾಗಿದೆ.

"ಜನಪ್ರಿಯ ನಟಿ ಪಾಲಿನ್ ಜೆಸ್ಸಿಕಾ ಅವರ ಆತ್ಮಹತ್ಯೆ ಕುರಿತು ನಾವು ಎಲ್ಲಾ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಇದಕ್ಕಾಗಿ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಪೌಲಿನ್ ಅವರ ನಿವಾಸಕ್ಕೆ ಯಾರು ಬಂದಿದ್ದಾರೆಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ದಿನ ಆಕೆ ತನ್ನ ಅಪಾರ್ಟ್ಮೆಂಟ್‌ಗೆ ಆಟೋದಲ್ಲಿ ಬಂದಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದೆ.

Tamil actress Pauline Jessica was found dead in her rented flat

ಇದು ಆತ್ಮಹತ್ಯೆ ಪ್ರಕರಣವೋ ಅಥವಾ ಯಾರಾದರೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರೋ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯಾ ಟಿಪ್ಪಣಿ ಪತ್ತೆಯಾಗಿದೆ, ಅದರಲ್ಲಿ ನಟಿ ತನ್ನ ಸಾವಿಗೆ ವಿಫಲ ಸಂಬಂಧವೇ ಪ್ರಮುಖ ಕಾರಣ ಎಂದು ಉಲ್ಲೇಖಿಸಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ಆತನ ಸಾವಿಗೆ ಯಾರೂ ಕಾರಣರಲ್ಲ ಎಂದು ಬರೆದುಕೊಂಡಿದ್ದಾರೆ.

ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+