ಹೊಡಿತಾಳೆ, ಬೈತಾಳೆ ನನ್ಹೆಂಡ್ತಿ ಎಂದ ತಮಿಳು ನಟ!
ಚೆನ್ನೈ, ಜು.02: 'ಹೊಡಿತಾಳೆ, ಬೈತಾಳೆ ನನ್ಹೆಂಡ್ತಿ..ಕೇಳ್ರಪ್ಪೋ ಕೇಳಿ ಈ ಸಂಗ್ತಿ..' ಎಂಬ ಹಾಡು ನೆನಪಿರಬಹುದು. ಈಗ ತಮಿಳು ನಟ ಕೆ ಕೃಷ್ಣಕುಮಾರ್ ಪರಿಸ್ಥಿತಿ ಕೂಡಾ ಹೀಗೆ ಆಗಿದೆ. ನನ್ನ ಹೆಂಡತಿ ಕಾಟ ತಡೆಯುವುದಕ್ಕೆ ಆಗಲ್ಲ, ದಯವಿಟ್ಟು ನನಗೆ ವಿವಾಹ ವಿಚ್ಛೇದನ ಕೊಡಿಸಿ ಎಂದು ಗೋಳಾಡುತ್ತಿದ್ದಾರೆ.
ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಪತ್ನಿ ಹೇಮಲತಾ ರಂಗನಾಥ್ ವಿರುದ್ಧ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಹೊರೆಸಿರುವ ಕೃಷ್ಣಕುಮಾರ್ ಅವರು ವಿವಾಹ ವಿಚ್ಛೇದನ ಅರ್ಜಿ ಹಾಕಿದ್ದಾರೆ. ದೈಹಿಕ, ಮಾನಸಿಕ ಹಿಂಸೆ ತಡೆಯುವುದಕ್ಕೆ ಆಗುತ್ತಿಲ್ಲ ಎಂದು ಅರ್ಜಿಯಲ್ಲಿ ತಮ್ಮ ಗೋಳು ತೋಡಿಕೊಂಡಿದ್ದಾರೆ. [ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]

ತುಂಬಿದ ಕುಟುಂಬವೇ ಸಮಸ್ಯೆ: 2014ರ ಫೆಬ್ರವರಿಯಲ್ಲಿ ಹೇಮಲತಾ ಅವರನ್ನು ಮದುವೆಯಾದೆ. ಅದರೆ, ಮದುವೆಯಾದ ಕೆಲ ತಿಂಗಳಲ್ಲೇ ಆಕೆಗೆ ನಮ್ಮ ತುಂಬಿದ ಕುಟುಂಬದಲ್ಲಿ ಬಾಳಲು ಕಷ್ಟವಾಯಿತು. ಅವಳ ಕಾಟಕ್ಕೆ ತಡೆಯಲಾರದೆ ನಾನು ಬೇರೆ ಮನೆ ಮಾಡಿದೆ. ಅದರೆ, ಅಲ್ಲೂ ತನ್ನ ದಬ್ಬಾಳಿಕೆ ಮುಂದುವರೆಸಿದಳು ಎಂದು ಕೃಷ್ಣಕುಮಾರ್ ಹೇಳಿಕೊಂಡಿದ್ದಾರೆ.
ಪತ್ನಿಯಾಗಿ ಮನೆಯಲ್ಲಿ ಎಂದೂ ನಡೆದುಕೊಳ್ಳಲಿಲ್ಲ. ಬಾಸ್ ರೀತಿ ಆಜ್ಞೆ ಮಾಡುತ್ತಿದ್ದಳು. ದಿನ ನಿತ್ಯ ಜಗಳ ಸಾಮಾನ್ಯವಾಗಿತ್ತು. ನನ್ನ ವೃತ್ತಿ ಬದುಕಿಗೂ ಆಕೆ ಕಂಟಕವಾಗತೊಡಗಿದಳು. ಅನೇಕ ಸಿನಿಮಾಗಳು ಕೈ ತಪ್ಪುವಂತೆ ಮಾಡಿದಳು ಎಂದು ಕೃಷ್ಣ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ಹೇಳಿದ್ದಾರೆ. [ಕಾಮಪಿಶಾಚಿ ಹೆಂಡತಿಯಿಂದ ಸಿಕ್ತು ಮುಕ್ತಿ!]
ಎಷ್ಟೋ ಸಾರಿ, ಶೂಟಿಂಗ್ ಸ್ಥಳದಲ್ಲೇ ರಾತ್ರಿ ಕಳೆದಿದ್ದೇನೆ. ಮನೆಗೆ ಹೋಗಿ ಅವಳ ಮುಖ ನೋಡುವ ಇಷ್ಟವಾಗುತ್ತಿರಲಿಲ್ಲ. ದೈಹಿಕ, ಮಾನಸಿಕ ಹಿಂಸೆಯಿಂದ ತತ್ತರಿಸಿದ್ದೇನೆ ಎಂದಿದ್ದಾರೆ.
ಹೇಮಾರಿಂದ ಪ್ರತ್ಯಾರೋಪ: ಕೃಷ್ಣಕುಮಾರ್ ಅವರ ಪತ್ನಿ ಹೇಮಲತಾ ಕೂಡಾ ನಿರ್ಮಾಪಕರ ಸಮಿತಿಗೆ ದೂರು ನೀಡಿದ್ದಾರೆ. ಕೃಷ್ಣಕುಮಾರ್ ಅವರು ಒಬ್ಬ ಕುಡುಕ, ಮನೆಗೆ ಬಂದರೆ ರಾಕ್ಷಸನಂತೆ ವರ್ತಿಸುತ್ತಾನೆ, ಯಾವುದೋ ಬೇರೆ ಹೆಂಗಸಿನ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ ಎಂಬ ಶಂಕೆಯಿದೆ ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದರು. ಈಗ ಕುಟುಂಬದ ಕದನ ಕೋರ್ಟಿ ಮೆಟ್ಟಿಲೇರಿದೆ.












Click it and Unblock the Notifications