ಟೆಕ್ಕಿ ಸ್ವಾತಿ ಹತ್ಯೆ: ಕಾಲ್ ರೆಕಾರ್ಡ್ ನಲ್ಲಿದೆಯೇ ರಹಸ್ಯ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಜುಲೈ 01: ಇನ್ಫೋಸಿಸ್ ನ ಉದ್ಯೋಗಿ ಸ್ವಾತಿ ಕೊಲೆ ಕೇಸ್ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆದರೆ, ಪೊಲೀಸರಿಗೆ ಕೊಲೆಯ ಸರಿಯಾದ ಜಾಡು ಸಿಗುತ್ತಿಲ್ಲ. ಈ ನಡುವೆ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಫೋನ್ ಕಾಲ್ ರೆಕಾರ್ಡ್ ಈ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ನಿಚ್ಚಳವಾಗಿದೆ.

ಇನ್ಫೋಸಿಸ್ ಮಹಿಳಾ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿಯೊಂದು ಗುರುವಾರ ಸಂಜೆ ಹೊರಬಿದ್ದಿತ್ತು. ಸ್ವಾತಿ ಅವರ ಸಹೋದ್ಯೋಗಿಯನ್ನು ಪೊಲೀಸರು ಪ್ರಶ್ನಿಸಿದಾಗ, ಜೂನ್ 9 ಮತ್ತು 10 ರಂದು ಶಂಕಿತ ವ್ಯಕ್ತಿಯೊಬ್ಬ ಸ್ವಾತಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಎಂಬ ಮಾಹಿತಿ ಸಿಕ್ಕಿತ್ತು.[ಚೆನ್ನೈ: ಇನ್ಫೋಸಿಸ್ ಮಹಿಳಾ ಉದ್ಯೋಗಿ ಬರ್ಬರ ಹತ್ಯೆ]

ಆದರೆ, ಘಟನೆಯ ಪ್ರತ್ಯಕ್ಷದರ್ಶಿ ತಮಿಳರಸನ್ ಹೇಳಿಕೆ ಪ್ರಕಾರ, ಕೊಲೆಯಾಗುವುದಕ್ಕೂ ಎರಡು ವಾರ ಮೊದಲು ಸ್ವಾತಿಗೆ ಬೇರೊಬ್ಬ ವ್ಯಕ್ತಿ ಕಪಾಳಮೋಕ್ಷ ಮಾಡಿದ್ದನಂತೆ. ಸಿಸಿಟಿವಿಯಲ್ಲಿ ಕಂಡಿರುವ ವ್ಯಕ್ತಿಯನ್ನೇ ಹತ್ಯೆ ಮಾಡಿದವ ಹೋಲುತ್ತಾನೆ ಎಂದು ಪೊಲೀಸರಿಗೆ ತಮಿಳರಸನ್ ಹೇಳಿದ್ದಾನೆ. [ಹತ್ಯೆಯಾದ ಇನ್ಫಿ ಸ್ವಾತಿಗೆ ಮತ್ತೊಬ್ಬ ಕಪಾಳಮೋಕ್ಷ ಮಾಡಿದ್ದ!]

 Swathi murder case- Police seek enhanced image of suspect from Hyderabad lab

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ: ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಶಂಕಿತ ವ್ಯಕ್ತಿಯ ಸ್ಕೆಚ್ ರೆಡಿ ಮಾಡಿರುವ ಪೊಲೀಸರು, ಕೊಲೆಗಾರರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಹೈದರಾಬಾದಿನ ಲ್ಯಾಬಿಗೆ ಚಿತ್ರವನ್ನು ಕಳಿಸಲಾಗಿದೆ. [ತಮಿಳುನಾಡಿನಲ್ಲಿ ಕನ್ನಡದಲ್ಲಿ ಮಾತಾಡಿದ್ರೆ 1,000 ರು ದಂಡ!]

ಕಾಲ್ ರೆಕಾರ್ಡ್ಸ್ ಬಗ್ಗೆ :
ಸ್ವಾತಿಯ ಮೊಬೈಲ್ ಫೋನ್ ಕರೆ ವಿವರಗಳಲ್ಲಿ ಕೊಲೆಗಾರ ಬಗ್ಗೆ ಯಾವುದಾದರೂ ಸುಳಿವು ಇರಬಹುದು ಎಂಬ ನಂಬಿಕೆ ಪೊಲೀಸರಿಗೆ ಹುಟ್ಟುಕೊಂಡಿದೆ. ಇಲ್ಲಿ ತನಕ ಸುಮಾರು 100 ಫೋನ್ ಕರೆಗಳನ್ನು ಡಿಕೋಡ್ ಮಾಡಲಾಗಿದೆ. ಮುಖ್ಯವಾಗಿ ನುಂಗಂಬಾಕ್ಕಂ ರೈಲ್ವೆ ನಿಲ್ದಾಣದ ಸುತ್ತ ಮುತ್ತಲಿನ ಟವರ್ ನಿಂದ ಘಟನೆ ನಡೆದ ದಿನ ಎಷ್ಟು ಕರೆ ಗಳು ಬಂದಿವೆ ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ.

ಚೂಲೈಮೆಡು ಹೈ ರಸ್ತೆಯಲ್ಲಿ ಶಂಕಿತ ವ್ಯಕ್ತಿ ಸಂಚರಿಸುವುದರನ್ನು ಟ್ರೇಸ್ ಮಾಡಿದ ಪೊಲೀಸರು ತಕ್ಷಣವೇ ಅಲ್ಲಿಗೆ ಧಾವಿಸಿದ್ದಾರೆ. ಆದರೆ, ಅಲ್ಲಿ ಯಾರು ಕಂಡು ಬಂದಿಲ್ಲ.ಆದರೆ, ಆರೋಪಿ ಈಗಲೂ ಚೆನ್ನೈನಲ್ಲೇ ಎಲ್ಲೋ ಅಡಗಿರುವ ಅನುಮಾನಗಳು ಬಲವಾಗುತ್ತಿದೆ. ಆದರೆ, ಶಂಕಿತನ ರೇಖಾಚಿತ್ರ ಎಲ್ಲೆಡೆ ಪ್ರದರ್ಶನಕ್ಕಿಟ್ಟಿದ್ದರೂ ಯಾರೊಬ್ಬರು ಇನ್ನೂ ಮಾಹಿತಿ ನೀಡಲು ಮುಂದೆ ಬಂದಿಲ್ಲ.[ಸ್ವಾತಿಯ ಗೆಳತಿ ಬಿಚ್ಚಿಟ್ಟ ಆಘಾತಕಾರಿ ಮಾಹಿತಿ]

ಹೀಗಾಗಿ, ಸ್ಪಷ್ಟವಾದ ಚಿತ್ರಕ್ಕಾಗಿ ಹೈದರಾಬಾದ್ ಲ್ಯಾಬಿಗೆ ಮೊರೆ ಹೋಗಲಾಗಿದ್ದು, ಮತ್ತೊಮ್ಮೆ ಶಂಕಿತನ ಸ್ಕೆಚ್ ಬಿಡುಗಡೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರು ಸುಲಭವಾಗಿ ಗುರುತಿಸಬಹುದು ಎಂದು ಚೆನ್ನೈ ಪೊಲೀಸರು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The police investigating the Swathi murder case have sought for an enhanced image of the person who may have committed the murder. Based on CCTV footage which is not very clear, the police had prepared an image, but since there were no calls from anyone identifying the killer it has been decided that the image would be enhanced.
Please Wait while comments are loading...