ಪತಿಯ ಅವ್ಯವಹಾರ ಪತ್ತೆ, ವಿಮಾನದಲ್ಲಿ ಪತ್ನಿ ಹಲ್ಲಾಗುಲ್ಲಾ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 07: ವಿಮಾನದಲ್ಲಿ ನಿದ್ದೆ ಹೋಗಿದ್ದ ಪತಿಯ ಫೋನ್ ಅನ್ನು ಅನ್ ಲಾಕ್ ಮಾಡಿದ ಪತ್ನಿ, ಪತಿಯ ಅನೈತಿಕ ಸಂಬಂಧದ ಬಗ್ಗೆ ತಿಳಿದು ವಿಮಾನದಲ್ಲಿಯೇ ಗಲಾಟೆ ಆರಂಭಿಸಿದ ವಿಚಿತ್ರ ಘಟನೆ ಕತಾರ್ ಏರ್ ವೇಸ್ ನಲ್ಲಿ ನಡೆದಿದೆ.

ವಿಮಾನಯಾನ ಸಂದರ್ಭದಲ್ಲಿ ಕನ್ನಡದಲ್ಲಿ ಘೋಷಣೆ ಕೇಳಿ ಬರಲಿ

ದೊಹಾದಿಂದ ಬಾಲಿಗೆ ಹೊರಟಿದ್ದ ಕತಾರ್ ಏರ್ ವೇಸ್ ನ QR-962 ವಿಮಾನ ಭಾರತದಲ್ಲಿ ನಿಲ್ಲದೆ, ಸೀದಾ ಬಾಲಿಗೆ ಹೋಗಬೇಕಿತ್ತು. ಆದರೆ ದಂಪತಿಯ ವಿಚಿತ್ರ ವರ್ತನೆಯಿಂದಾಗಿ ಸಹಪ್ರಯಾಣಿಕರಿಗೆ ತೊಂದರೆ ಉಂಟಾಗಬಾರದೆಂದು ವಿಮಾನವನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಸಿ, ದಂಪತಿ ಮತ್ತು ಅವರ ಮಗುವನ್ನು ವಿಮಾನದಿಂದ ಆಚೆಕಳಿಸಲಾಯಿತು!

Strange incident: Qatar airways offload a couple in Chennai

ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ದೊಹಾದಿಂದ ಇರಾನಿ ದಂಪತಿ ಮತ್ತು ಅವರ ಮಗು ಬಾಲಿಗೆಂದು ಹೊರಟಿದ್ದಾರೆ. ವಿಮಾನದಲ್ಲಿ ಪತಿ ನಿದ್ದೆ ಹೋಗಿದ್ದಾನೆ. ಈ ಸಮಯದಲ್ಲಿ ಪತಿಯ ಫಿಂಗರ್ ಪ್ರಿಂಟ್ ಅನ್ನು ಸ್ಕ್ಯಾನ್ ಮಾಡಿ ಆತನ ಸ್ಮಾರ್ಟ್ ಫೋನ್ ಅನ್ನು ಅನ್ ಲಾಕ್ ಮಾಡಿದ ಆತನ ಪತ್ನಿ, ಪತಿಯ 'ರಹಸ್ಯ ವ್ಯವಹಾರ'ಗಳನ್ನೆಲ್ಲ ಪತ್ತೆ ಮಾಡಿದ್ದಾಳೆ.

ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ

ಪತಿ ತನಗೆ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿಯುತ್ತಿದ್ದಂತೆಯೇ ವಿಮಾನದಲ್ಲಿಯೇ ಜಗಳ ಆರಂಭಿಸಿದ್ದಾಳೆ. ಪತ್ನಿಯ ಅನಿರೀಕ್ಷಿತ ವರ್ತನೆಯಿಂದ ದಿಗ್ಭ್ರಮೆಗೊಂಡ ಪತಿ ಆಕೆಯನ್ನು ಸಂತೈಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ ದಂಪತಿಗಳ ಕಲಹ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ವಿಮಾನದಲ್ಲಿದ್ದ ಗಗನಸಖಿಯರು, ಇತರೆ ಸಿಬ್ಬಂದಿಗಳು ಅವರ ಜಗಳವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಕಲಹ ನಿಯಂತ್ರಣಕ್ಕೆ ಬರುವ ಬದಲು, ಮಹಿಳೆ ವಿಮಾನಯಾನ ಸಿಬ್ಬಂದಿಗಳನ್ನೂ ಅವಾಚ್ಯ ಶಬ್ದಗಳಲ್ಲಿ ನಿಂದಿಸಿದ್ದಾರೆ.

ಪರಿಸ್ಥಿತಿ ಮಿತಿಮೀರಿದಾಗ ಬೇರೆ ದಾರಿ ಕಾಣದೆ ವಿಮಾನವನ್ನು ಭಾರತದ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಸಿ, ದಂಪತಿ ಮತ್ತು ಮಗುವನ್ನು ವಿಮಾನದಿಂದ ಆಚೆ ಕಳಿಸಿ, ನಂತರ ವಿಮಾನ ಬಾಲಿಯತ್ತ ಪ್ರಯಾಣ ಬೆಳೆಸಿದೆ. ಸದ್ಯಕ್ಕೆ ಭಾರತದ ವೀಸಾ ಸಹ ಇವರ ಬಳಿ ಇಲ್ಲ. "ಸಹಪ್ರಯಾಣಿಕರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಬೇಕಾಯ್ತು. ಅವರ ವೈಯಕ್ತಿಕ ವಿಷಯಗಳ ಬಗ್ಗೆ ನಾವೆಂದಿಗೂ ಮಾತನಾಡುವುದಿಲ್ಲ. ಅದು ಸೌಜನ್ಯವಲ್ಲ" ಎಂದು ಕತಾರ್ ಏರ್ ವೇಸ್ ಆಡಳಿತ ಮಂಡಳಿ ತಿಳಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a strange incident Qatar Airways officails offloaded a couple and their child in Chennai. The Flight headed to Bali.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ