ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ತಾಸಿನ ಶಸ್ತ್ರಚಿಕಿತ್ಸೆ ತಡೆದುಕೊಂಡ ಸಿದ್ದಗಂಗಾ ಶ್ರೀಗಳು

|
Google Oneindia Kannada News

ಚೆನ್ನೈ, ಡಿಸೆಂಬರ್ 08: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀಗಳ ಆರೋಗ್ಯ ಸ್ಥಿರವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಹೇಳಿದೆ.

ಶ್ರೀಗಳ ಆರೋಗ್ಯದ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಆಸ್ಪತ್ರೆಯು ಶ್ರೀಗಳಿಗೆ ಮಾಡಲಾದ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ವಿಧಾನ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದೆ.

Siddaganga Seers tolerated 4 hours operation in rela hospital

ಇಂದು ಬೆಳಿಗ್ಗೆ ಶ್ರೀಗಳಿಗೆ ನಾಲ್ಕು ತಾಸುಗಳ ಸುದೀರ್ಘ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶ್ರೀಗಳ ಯಕೃತ್‌ ಮತ್ತು ಪಿತ್ತನಾಳಗಳ ಸೋಂಕಿಗೆ ಸಂಬಂಧಿಸಿದಂತೆ ಈ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಮುಂಚೆ ಹಾಕಲಾಗಿದ್ದ ಕೆಲವು ಪ್ಲಾಸ್ಟಿಕ್ ಮತ್ತು ಗಾಜಿನ ಸ್ಟಂಟ್‌ಗಳನ್ನು ತೆಗೆಯಾಗಿದೆ.

ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಯಶಸ್ವೀ ಶಸ್ತ್ರಚಿಕಿತ್ಸೆ, ಶ್ರೀಗಳು ಕ್ಷೇಮಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಯಶಸ್ವೀ ಶಸ್ತ್ರಚಿಕಿತ್ಸೆ, ಶ್ರೀಗಳು ಕ್ಷೇಮ

ಪಿತ್ತನಾಳ, ಸಣ್ಣಕರುಳು ಮತ್ತು ಯಕೃತ್‌ಗೆ ಬೈಪಾಸ್‌ ಮಾಡುವ ಶಸ್ತ್ರಚಿಕಿತ್ಸೆ ಸಹ ಇದೇ ಸಮಯದಲ್ಲಿ ಮಾಡಲಾಗಿದೆ. ಆಸ್ಪತ್ರೆಯ ಪ್ರಕಾರ ನಾಲ್ಕು ಗಂಟೆ ಅವಧಿಯ ಈ ಶಸ್ತ್ರಚಿಕಿತ್ಸೆಯನ್ನು ಸ್ವಾಮೀಜಿಗಳು ಸುಲಭವಾಗಿ ಸಹಿಸಿಕೊಂಡಿದ್ದಾರೆ.

ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?ಚೆನ್ನೈಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದಗಂಗಾ ಶ್ರೀ ಈಗ ಹೇಗಿದ್ದಾರೆ?

ಮಧ್ಯಾಹ್ನ 3:30ಕ್ಕೆ ಹೊರಬಂದ ಆಸ್ಪತ್ರೆಯ ಪತ್ರಿಕಾ ಪ್ರಕಟಣೆ ಪ್ರಕಾರ ಶ್ರೀಗಳು ಎದ್ದಿದ್ದು, ಅರಿವಳಿಕೆ ಪ್ರಭಾವದಿಂದ ಸಂಪೂರ್ಣ ಹೊರಬಂದಿದ್ದಾರೆ. ಪ್ರಸ್ತುತ ಸ್ವಾಮೀಜಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಎಚ್ಚರವಹಿಸಲಾಗುತ್ತಿದೆ ಎಂದು ಆಸ್ಪತ್ರೆ ಹೇಳಿದೆ.

ಚೆನ್ನೈ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಬೇಡವೆಂದು ನಡೆದೇ ಸಾಗಿದ ಶ್ರೀ ಚೆನ್ನೈ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಬೇಡವೆಂದು ನಡೆದೇ ಸಾಗಿದ ಶ್ರೀ

ಸುತ್ತೂರು ಶ್ರೀಗಳು ಮತ್ತಿತರೆ ಮಠದ ಸ್ವಾಮೀಜಿ ಅವರುಗಳು ಇಂದು ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳನ್ನು ಮಾತನಾಡಿಸಿದರು. ಅವರ ಭೇಟಿಯ ವೇಳೆ ಶ್ರೀಗಳು ಮಾಮೂಲಿನಂತೆಯೇ ಗೆಲುವಾಗಿ ಮಾತನಾಡಿದ್ದಾರೆ.

English summary
Siddaganga Seer tolerated four hours operation said Rela hospital Chennai. They said Siddaganga Seer is doing good, He is out from anesthesia effect. Seer is closely observed in the intensive care unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X