ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಷ್ಟ್ರೇ, ಶಾಲಾ ಮಕ್ಕಳ ಗಲ್ಲ ಗಿಂಜ್ತೀರಾ? ಹುಷಾರ್!

|
Google Oneindia Kannada News

ಚೆನ್ನೈ, ಅ.30 : ವಿದ್ಯಾರ್ಥಿ ಕೆನ್ನೆ ಚಿವುಟಿದ್ದ ಶಿಕ್ಷಕಿಯೊಬ್ಬರು 50 ಸಾವಿರ ರೂ.ದಂಡ ಪಾವತಿ ಮಾಡಬೇಕಾಗಿದೆ. ಅಚ್ಚರಿಯಾದರೂ ಇದು ಸತ್ಯ. ಚೆನ್ನೈನಲ್ಲಿ ವಿದ್ಯಾರ್ಥಿ ಕೆನ್ನೆ ಚಿವುಟಿದ್ದ ಶಿಕ್ಷಕಿಗೆ ದಂಡ ವಿಧಿಸಿ ಹೈಕೋರ್ಟ್ ಅದೇಶ ನೀಡಿದೆ.

ಚೆನ್ನೈನ ಕೇಸರಿ ಮಾಧ್ಯಮಿಕ ಪ್ರೌಢಶಾಲೆಯಲ್ಲಿ ಮೆಹರುನ್ನೀಸಾ ಎಂಬ ಶಿಕ್ಷಕಿ ವಿದ್ಯಾರ್ಥಿಯ ಕೆನ್ನೆಯನ್ನು ಚಿವುಟಿದ್ದರು. 2012ರಲ್ಲಿ ಮೇ ನಲ್ಲಿ ಈ ಘಟನೆ ನಡೆದಿತ್ತು. ಮಗುವಿನ ತಾಯಿ ಈ ಕುರಿತು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು. ಆಯೋಗ ಶಿಕ್ಷಕಿಗೆ 1000 ರೂ. ದಂಡ ವಿಧಿಸಿ ಆದೇಶ ನೀಡಿತ್ತು. [ಮಕ್ಕಳ ಮುಂದೆ ಬಾಲ್ಯದ ರಹಸ್ಯ ಬಿಚ್ಚಿಟ್ಟ ಮೋದಿ]

Chennai

ಪ್ರಕರಣದ ನಂತರ ಮಗನನ್ನು ಬೇರೆ ಶಾಲೆಗೆ ಸೇರಿಸಲು ಇಚ್ಛಿಸಿದ ತಾಯಿ ಶಾಲೆಗೆ ಹೋಗಿ ಟಿಸಿ ಕೇಳಿದ್ದಾರೆ. ಟಿಸಿ ಕೊಡಲು ಶಾಲೆಯ ಆಡಳಿತ ಮಂಡಳಿಯವರು ವಿಳಂಬ ಮಾಡಿದ್ದಾರೆ. ಇದನ್ನು ಪ್ರಶ್ನಿಸಿ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. [ಕುದುರೆ ಏರಿ ಕಾಲೇಜಿಗೆ ಬರುವ ಕುಡ್ಲದ ಕುವರ!]

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಸಂಜಯ್ ಕೃಷ್ಣ ಕೌಲ್ ಮತ್ತು ಎಂ. ಸತ್ಯನಾರಾಯಣ ಅವರಿದ್ದ ಪೀಠ ಗುರುವಾರ ತೀರ್ಪು ನೀಡಿದ್ದು, 50 ಸಾವಿರ ರೂ. ದಂಡ ಪಾವತಿ ಮಾಡುವಂತೆ ಆದೇಶ ನೀಡಿದೆ.

ವಿದ್ಯಾರ್ಥಿಯ ತಾಯಿ ಸ್ಥಳೀಯ ಕೋರ್ಟ್‌ನಲ್ಲಿ ಶಿಕ್ಷಕ್ಷಿ ವಿರುದ್ಧ ಖಾಸಗಿ ದೂರನ್ನು ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ದಂಡ ಶುಲ್ಕವನ್ನು ಸ್ಥಳೀಯ ಕೋರ್ಟ್‌ನಲ್ಲಿ ಪಾವತಿ ಮಾಡುವಂತೆ ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ. ಶಾಲಾ ಮಕ್ಕಳ ಗಲ್ಲ ಗಿಂಜ್ತೀರಾ?

English summary
Pinch a student's cheeks, and pay a fine of Rs 50,000. A woman teacher learn this lesson in Chennai on Thursday. Mehrunnisa, a teacher at Kesari Higher Secondary School was accused in 2012 of pinching her student's cheeks to punish him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X