ಎಐಎಡಿಎಂಕೆಯಿಂದ ಶಶಿಕಲಾ ನಟರಾಜನ್ ಉಚ್ಚಾಟನೆ

Posted By:
Subscribe to Oneindia Kannada
Sasikala Natarajan

ಚೆನ್ನೈ, ಸೆ. 12: ಎಐಎಡಿಎಂಕೆ ಅಧಿನಾಯಕಿಯಾಗಿ ಮೆರೆದಿದ್ದ ಶಶಿಕಲಾ ನಟರಾಜನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇಲ್ಲಿನ ವಾನಗರಮ್ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ನಡೆದ ಎಐಎಡಿಎಂಕೆ ಪ್ರಧಾನ ಸಭೆಯಲ್ಲಿ ವಿ. ಶಶಿಕಲಾ ನಟರಾಜನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಒಮ್ಮತದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ, ಸಚಿವರು, ಶಾಸಕರು ಸೇರಿದಂತೆ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ಈ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Sasikala Natarajan, TTV Dinakaran booted out of AIADMK

ಇದಲ್ಲದೆ, ಒಪಿಎಸ್ ಹಾಗೂ ಇಪಿಎಸ್ ಉಭಯ ಬಣಗಳು ಒಗ್ಗೂಡಿರುವ ಕಾರಣ 'ಎರಡು ಎಲೆ' ಚಿಹ್ನೆಯನ್ನು ಮರಳಿ ಕೊಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ.

ವಿಶೇಷವೆಂದರೆ, ಶಶಿಕಲಾ, ದಿನಕರನ್ ಬಣದಲ್ಲಿದ್ದ ಕೆಲ ಶಾಸಕರೂ ಇಂದಿನ ಜನರಲ್ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಶಶಿಕಲಾ ಹಾಗೂ ದಿನಕರನ್ ಅವರನ್ನು ಉಚ್ಚಾಟಿಸಿರುವುದರಿಂಡ ಎಐಎಡಿಎಂಕೆ ಪಕ್ಷದ ಸಂಪೂರ್ಣ ಅಧಿಕಾರವನ್ನು ಕಳೆದುಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a stunning development, members of the AIADMK have unanimously ousted general secretary VK Sasikala and her nephew TTV Dhinakaran from the party today(Sep 12)
Please Wait while comments are loading...