ಪನ್ನೀರ್‌ಗೆ ಕಣ್ಣೀರು ಗ್ಯಾರಂಟಿ! ಚಿನ್ನಮ್ಮ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ!

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 04 : ನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ತಮಿಳುನಾಡಿನಲ್ಲಿ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ನಡೆದಿದ್ದು, ಓ ಪನ್ನೀರ್ ಸೆಲ್ವಂ ಅವರನ್ನು ಪದಚ್ಯುತಿಗೊಳಿಸಲು ಸರ್ವಸಿದ್ಧತೆಗಳು ನಡೆದಿದ್ದು, ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸುವುದು ಹೆಚ್ಚುಕಡಿಮೆ ಖಚಿತವಾಗಿದೆ. [ಶಶಿಕಲಾ ಮುಖ್ಯಮಂತ್ರಿಯಾಗಬೇಕಂತೆ! ಅಯ್ಯೋ ಪಾಪ ಪನ್ನೀರ್!]

Sasikala Natarajan to be the next cm of Tamil Nadu

ಇದನ್ನು ಅಂತಿಮಗೊಳಿಸಲು ಭಾನುವಾರ ಚೆನ್ನೈನಲ್ಲಿ ಎಐಎಡಿಎಂಕೆಯ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಶಶಿಕಲಾ ಅವರು ಮುಂದಿನ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಿಸುವುದು ಬಾಕಿಯಿದೆ. [ಪನ್ನೀರ್ ಸೆಲ್ವಂ ಎಂಬ ಆಸಾಮಿಯ ಸ್ವಾಮಿನಿಷ್ಠೆಯ ಪರಾಕಾಷ್ಠೆ]

ನವಮಿಯ ನಂತರ ಫೆಬ್ರವರಿ 6ನೇ ತಾರೀಖಿನಂದು ಪ್ರಮಾಣ ವಚನ ಸ್ವೀಕರಿಸಲು ಮುಹೂರ್ತವನ್ನು ಹುಡುಕಲಾಗಿದೆ. ಸೋಮವಾರ ಪದಗ್ರಹಣ ಮಾಡಲು ಪ್ರಶಸ್ತವಾದ ಸಮಯ ಎಂದು ಜ್ಯೋತಿಷಿಗಳು ಶಶಿಕಲಾಗೆ ಹೇಳಿದ್ದಾರೆ. [ತಮಿಳುನಾಡಿನಲ್ಲಿ 'ಚಿನ್ನಮ್ಮ' ಶಶಿಕಲಾ ನಟರಾಜನ್ ಯುಗಾರಂಭ!]

ಶಶಿಕಲಾ ಪ್ರಮಾಣ ವಚನ ಸ್ವೀಕರಿಸುವ ದಿನದಂದು ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ದೇವಸ್ಥಾನ ಸೇರಿದಂತೆ ಎಲ್ಲ ಶಿವನ ದೇವಸ್ಥಾನಗಳಲ್ಲಿ ಕುಂಭಾಭಿಷೇಕ ನಡೆಸಬೇಕೆಂದು ಆದೇಶ ಕೂಡ ಹೊರಡಿಸಲಾಗಿದೆ.

Sasikala Natarajan to be the next cm of Tamil Nadu

ಪದಚ್ಯುತಿ ಖಚಿತವಾಗುತ್ತಿದ್ದಂತೆ ಒಂದು ಪ್ರತಿಭಟನೆಯನ್ನೂ ಓ ಪನ್ನೀರ್ ಸೆಲ್ವಂ ಅವರು ಮಾಡದಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಮುಖ್ಯಮಂತ್ರಿ ಪಟ್ಟವನ್ನು ಇಷ್ಟು ಸುಲಭವಾಗಿ ಯಾರಾದರೂ ಬಿಟ್ಟುಕೊಡುತ್ತಾರಾ?

ದುರಾದೃಷ್ಟವಂತ ಮುಖ್ಯಮಂತ್ರಿಗಳ ಸಾಲಿನಲ್ಲಿ ಮೊದಲ ಸ್ಥಾನ ಗಳಿಸುವ ಓ ಪನ್ನೀರ್ ಸೆಲ್ವಂ ಅವರು ಮೂರನೇ ಬಾರಿ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ. ಹಿಂದೆ ಎರಡು ಬಾರಿ ಜಯಲಲಿತಾ ಅವರಿಗೆ ಮುಖ್ಯಮಂತ್ರಿ ಪದವಿಯನ್ನು ಪನ್ನೀರ್ ಬಿಟ್ಟುಕೊಟ್ಟಿದ್ದರು. [ಚಿನ್ನಮ್ಮ ತಮಿಳ್ನಾಡಿನ ಕಿಂಗ್ ಮೇಕರ್ ಆಗಿದ್ದು ಹೇಗೆ?]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sasikala Natarajan to be the next cm of Tamil Nadu. In an expected development O Panneerselvam will have to step down to make way for Sasikala. She will be taking oath on 9th of February.
Please Wait while comments are loading...