ರಾಜ್ಯಪಾಲರ ಮುಂದೆ ಸರ್ಕಾರ ರಚಿಸುವ ಪ್ರಸ್ತಾವನೆಯಿಟ್ಟ ಶಶಿಕಲಾ
ಕುತೂಹಲ ಘಟ್ಟಕ್ಕೆ ಬಂದು ನಿಂತಿರುವ ತಮಿಳುನಾಡು ರಾಜಕೀಯ; ರಾಜ್ಯಪಾಲರ ಅಂಗಳದಲ್ಲಿ ಚೆಂಡು; ರಾಜ್ಯಪಾಲರಿಂದ ಮುಂದಿನ ನಡೆ ಬಗ್ಗೆ ಎಲ್ಲರ ಗಮನ
ಚೆನ್ನೈ, ಫೆಬ್ರವರಿ 9: ಶತಾಯ ಗತಾಯ ತಮಿಳುನಾಡು ಮುಖ್ಯಮಂತ್ರಿ ಗಾದಿಗೇರುವ ಪ್ರಯತ್ನದಲ್ಲಿರುವ ಎಐಡಿಎಂಕೆ ಪಕ್ಷದ ಮಹಾ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು, ಗುರುವಾರ ಸಂಜೆ ತಮಿಳುನಾಡಿನ ರಾಜ್ಯಪಾಲರಾದ ಸಿ. ವಿದ್ಯಾಸಾಗರ್ ರಾವ್ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅವಕಾಶವನ್ನು ಕೊಡಬೇಕೆಂದು ಮನವಿ ಸಲ್ಲಿಸಿದರು.
ಈ ವೇಳೆ, ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮನ್ನು ಬೆಂಬಲಿಸಿರುವ ಎಐಡಿಎಂಕೆಯ 120ಕ್ಕೂ ಹೆಚ್ಚು ಶಾಸಕರ ಪಟ್ಟಿಯನ್ನು ರಾಜ್ಯಪಾಲರಿಗೆ ಹಸ್ತಾಂತರಿಸಿದ ಅವರು, ಬಹುಮತ ತಮಗೇ ಇದ್ದು, ಸರ್ಕಾರ ರಚನೆಗೆ ಅವಕಾಶ ನೀಡಬೇಕೆಂದು ಕೋರಿದರು.

ಇದಕ್ಕೂ ಮುನ್ನ ಅವರು, ಜಯಲಲಿತಾ ಅವರ ಸಮಾಧಿ ಬಳಿಗೆ ಹೋಗಿ ಹೂಗುಚ್ಛ ಅರ್ಪಿಸಿ, ಅಲ್ಲಿಂದ ರಾಜ್ಯಪಾಲರ ಭವನಕ್ಕೆ ತೆರಳಿದ್ದರು.












Click it and Unblock the Notifications