ತಮಿಳುನಾಡು ರಾಜ್ಯಪಾಲರಿಗೆ ಕಾನೂನು ಸಲಹೆ ಏನು?

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 10: ತಮಿಳುನಾಡಿನಲ್ಲಿ ಗೊಂದಲ ಮುಂದುವರಿದಿದೆ. ಸರಕಾರ ರಚನೆ ವಿಚಾರವಾಗಿ ರಾಜ್ಯಪಾಲರು ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ. ಪನ್ನೀರ್ ಸೆಲ್ವಂ ಹಾಗೂ ಶಶಿಕಲಾ ನಟರಾಜನ್ ಇಬ್ಬರೂ ರಾಜ್ಯಪಾಲರನ್ನು ಭೇಟಿಯಾದ ನಂತರ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿದೆ.

ಈ ವಿಚಾರದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರ ಅಭಿಪ್ರಾಯವನ್ನು ಪಡೆದಿದ್ದಾರೆ. ಸದ್ಯಕ್ಕೆ ಒಪಿಎಸ್ ಹಂಗಾಮಿ ಸಿಎಂ. ತನ್ನ ರಾಜೀನಾಮೆ ಹಿಂಪಡೆಯುವುದಾಗಿ ಅವರು ಹೇಳಿದ್ದಾರೆ. ಆದರೆ ಕಾನೂನು ಅದಕ್ಕೆ ಅವಕಾಶ ನೀಡುವುದಿಲ್ಲ. ಇನ್ನೊಂದು ಕಡೆ ಶಶಿಕಲಾ ಪರವಾಗಿ ಸಂಖ್ಯಾಬಲವಿದೆ. ಸರಕಾರ ರಚನೆಗೆ ಆಕೆ ಅವಕಾಶ ಕೇಳಿದ್ದಾರೆ.[ಮುಖ್ಯಮಂತ್ರಿ ಗಾದಿಗೆ ಶಶಿಕಲಾ ಹಾದಿಯಲ್ಲಿ 3 ಮುಳ್ಳು!]

Sasi vs OPS: Here is the legal advise the Governor got

ಸರಕಾರಕ್ಕೆ ನೀಡಿರುವ ಕಾನೂನು ಸಲಹೆಯು ಮೂಲತಃ ಎಸ್.ಆರ್.ಬೊಮ್ಮಾಯಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿದ ಸೂಚನೆಗಳನ್ನೇ ಅವಲಂಬಿಸಿದೆ. ಆ ತೀರ್ಪಿನ ಮುಖ್ಯ ಹೂರಣ ಏನೆಂದರೆ, ಬಹುಮತವನ್ನು ವಿಧಾನಸಭೆಯಲ್ಲೇ ಸಾಬೀತು ಪಡಿಸಬೇಕು. ಈ ಸನ್ನಿವೇಶದಲ್ಲಿ ರಾಜ್ಯಪಾಲರು ತೀರ್ಮಾನ ಕೈಗೊಳ್ಳಬೇಕಿದೆ.

ಸರಕಾರ ರಚಿಸಲು ಶಶಿಕಲಾ ಆವರಿಗೆ ಆಹ್ವಾನ ನೀಡಬೇಕೋ ಅಥವಾ ಒಪಿಎಸ್ ಬಹುಮತ ಸಾಬೀತಿಗೆ ಅವಕಾಶ ನೀಡಬೇಕಾ? ನಿಯಮಗಳ ಪ್ರಕಾರ ಆಡಳಿತಾರೂಢ ಪಕ್ಷದ ನಾಯಕರನ್ನು ಮುಖ್ಯಮಂತ್ರಿಯಾಗಿ ನೇಮಿಸಬೇಕು. ಒಂದು ವೇಳೆ ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಅಂದ ಪಕ್ಷದಲ್ಲಿ ರಾಜ್ಯಪಾಲರು ತಮ್ಮ ನಿರ್ಧಾರದಂತೆ ಸಿಎಂ ನೇಮಕ ಮಾಡಬಹುದು.[ಕೇಂದ್ರಕ್ಕೆ ವರದಿ ಸಲ್ಲಿಸಿದ ತಮಿಳುನಾಡು ಗವರ್ನರ್ ವಿದ್ಯಾಸಾಗರ್]

Sasi vs OPS: Here is the legal advise the Governor got

ಎರಡೂ ಸನ್ನಿವೇಶದಲ್ಲಿ ನೇಮಕಗೊಂಡ ವ್ಯಕ್ತಿಯು ಒಂದು ತಿಂಗಳೊಳಗೆ ಬಹುಮತ ಸಾಬೀತು ಮಾಡಬೇಕು.

ಬೊಮ್ಮಾಯಿ ತೀರ್ಪಿನಲ್ಲಿ ಏನು ಹೇಳಲಾಗಿದೆ?
ಯಾವುದೇ ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ವಿಫಲವಾದಾಗ ಏನು ಮಾಡಬೇಕು ಎಂಬ ಬಗ್ಗೆ ಸಂವಿಧಾನದ ಪರಿಚ್ಛೇದ 356ರಲ್ಲಿ ಉಲ್ಲೇಖವಿದೆ. ರಾಷ್ಟ್ರಪತಿ ಆಡಳಿತ ಹೇರಿಕೆ ಬಗ್ಗೆ ಇದರಲ್ಲಿ ವಿವರಗಳಿವೆ. ಆದರೆ ಈ ಪರಿಚ್ಛೇದದಲ್ಲಿ ಹೇಳಿದ ವಿಚಾರಗಳ ದುರುಪಯೋಗ ಆಗಿರುವುದರಿಂದ ಸುಪ್ರೀಂ ಕೋರ್ಟ್ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಿದೆ.

ವಿಧಾನಸಭೆಯಲ್ಲೇ ಬಹುಮತ ಸಾಬೀತು ಮಾಡಬೇಕು.

ಕೇಂದ್ರವು ರಾಜ್ಯಕ್ಕೆ ಎಚ್ಚರಿಕೆ ನೀಡಿ, ಅದಕ್ಕೆ ವಾರದೊಳಗೆ ರಾಜ್ಯದಿಂದ ಉತ್ತರ ನೀಡಬೇಕು.

Sasi vs OPS: Here is the legal advise the Governor got

ಈ ವಿಚಾರದಲ್ಲಿ ರಾಜ್ಯಪಾಲರು ರಾಷ್ಟ್ರಪತಿಗೆ ಮಾಡುವ ಸಲಹೆಯನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ. ಆದರೆ ರಾಷ್ಟ್ರಪತಿ ನಿರ್ಧಾರ ಕೈಗೊಳ್ಳುವುದಕ್ಕೆ ಕಾರಣಗಳ ಬಗ್ಗೆ ಪ್ರಶ್ನಿಸಬಹುದು. ನ್ಯಾಯಾಂಗದ ಮಧ್ಯಪ್ರವೇಶಕ್ಕೆ ಮೂರು ಪ್ರಶ್ನೆಗಳಿವೆ: ನಿರ್ಧಾರದ ಹಿಂದೆ ಕಾರಣಗಳಿವೆಯೆ? ಆ ಕಾರಣಗಳು ಸಮಂಜಸವಾಗಿದೆಯೇ? ಅಧಿಕಾರ ದುರುಪಯೋಗ ಅಗಿದೆಯೇ? ಎಂದು ಪ್ರಶ್ನಿಸಬಹುದು.[ರಾಜ್ಯಪಾಲರ ಭೇಟಿ ನಂತರ ಧರ್ಮಕ್ಕೆ ಗೆಲುವೆಂದ ಪನ್ನೀರ್ ಸೆಲ್ವಂ]

ಒಂದು ವೇಳೆ ಪರಿಚ್ಛೇದ 356ರ ಸರಿಯಾದ ಬಳಕೆ ಅಗಲಿಲ್ಲ ಎಂದಾಗ ಅದಕ್ಕೆ ಕೋರ್ಟ್ ಪರಿಹಾರ ಸೂಚಿಸುತ್ತದೆ.

ಪರಿಚ್ಛೇದ 356(3) ಅಡಿ ರಾಷ್ಟ್ರಪತಿ ಅಧಿಕಾರದ ಮೇಲೆ ಕೆಲ ಮಿತಿ ಇದೆ. ಆದ್ದರಿಂದ ರಾಜ್ಯಪಾಲರ ಶಿಫಾರಸಿಗೆ ಸಂಸತ್ ನಲ್ಲಿ ಒಪ್ಪಿಗೆ ಸಿಕ್ಕುವ ತನಕ ರಾಷ್ಟ್ರಪತಿಗಳು ವಿಧಾನಸಭೆ ವಿಸರ್ಜನೆ ಮಾಡುವಂತಿಲ್ಲ

ಪರಿಚ್ಛೇದ 356 ಸಮರ್ಥಿಸುವುದು ರಾಜ್ಯದಲ್ಲಿ ಸಾಂವಿಧಾನ ವ್ಯವಸ್ಥೆ ಕುಸಿದಾಗ ಮಾತ್ರವೇ ಹೊರತು ಆಡಳಿತ ಯಂತ್ರ ಕುಸಿದಾಗ ಅಲ್ಲ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The turmoil in Tamil Nadu continues with the Governor yet to take a decision on the future of the government. After both O Panneerselvam and Sasikala Nataraja meeting the Governor a report was sent to the centre. The Governor is also believed to have sought a legal opinion on how to proceed with the matter.
Please Wait while comments are loading...