ರಜನಿ ರಾಜಕೀಯ ಪ್ರವೇಶ, ಡಿ 31ಕ್ಕೆ ಅಧಿಕೃತ ಘೋಷಣೆ

ಚೆನ್ನೈ, ಡಿಸೆಂಬರ್ 26: ರಜನಿಕಾಂತ್ ಅವರ ರಾಜಕೀಯ ಪ್ರವೇಶದ ಬಗೆಗಿನ ಊಹಾಪೋಹಕ್ಕೆ ಡಿಸೆಂಬರ್ 31ರಂದು ತೆರೆ ಬೀಳಲಿದೆ. ಅಂದು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತವಾಗಿ ರಜನಿಕಾಂತ್ ಅವರೇ ಘೋಷಣೆ ಮಾಡಲಿದ್ದಾರೆ.

ಚೆನ್ನೈ ನಲ್ಲಿ ಅಭಿಮಾನಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, 'ಡಿಸೆಂಬರ್ 31 ರಂದು ನನ್ನ ರಾಜಕೀಯ ಪ್ರವೇಶದ ಬಗ್ಗೆ ಘೋಷಿಸಲಿದ್ದೇನೆ' ಎಂದಿದ್ದಾರೆ, ಆದರೆ ಸ್ವಂತ ಪಕ್ಷ ಸ್ಥಾಪಿಸುತ್ತಾರೊ ಅಥವಾ ಯಾವುದಾದರೊ ಪಕ್ಷ ಸೇರುತ್ತಾರೊ ಎಂಬುದರ ಬಗ್ಗೆ ಅವರು ಗುಟ್ಟು ಬಿಟ್ಟುಕೊಟ್ಟಿಲ್ಲ.

ಅಭಿಮಾನಿಗಳೊಂದಿಗಿನ ಸಂವಾದದಲ್ಲಿ ಮನಬಿಚ್ಚಿ ಮಾತನಾಡಿದ ರಜನಿಕಾಂತ್ ನನಗೆ ರಾಜಕೀಯ ಹೊಸದಲ್ಲ, ನಾನು 1990ರಿಂದಲೂ ರಾಜಕೀಯಯನ್ನು ಹತ್ತಿರದಿಂದ ಗಮನಿಸುತ್ತಾ ಬಂದಿದ್ದೇನೆ ಎಂದಿದ್ದಾರೆ.

Rajinikanth will announce his political entry on December 31st

ಸಮರಕ್ಕಿಳಿದ ಮೇಲೆ ಗೆಲ್ಲುವುದೊಂದೇ ಗುರಿ ಎಂದು ಸಿನಿಮಾ ಶೈಲಿಯಲ್ಲಿ ಹೇಳಿದ ರಜನೀಕಾಂತ್ ರಾಜಕೀಯದ ಕಷ್ಟಗಳ ಬಗ್ಗೆಯೂ ಅರಿವಿದೆ ಆದರೆ ಅದನ್ನೆಲ್ಲಾ ಕೂಲಂಕುಷವಾಗಿ ವಿಮರ್ಶಿಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದಿದ್ದಾರೆ.

ಇಷ್ಟು ದಿನ ತಮ್ಮನ್ನು ಎಲ್ಲ ರೀತಿಯಲ್ಲಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ರಜನೀಕಾಂತ್ ಇಂದಿನಿಂದ ಸತತ ಆರು ದಿನಗಳ ಕಾಲ ತಮಿಳುನಾಡಿನ ಬೇರೆ ಬೇರೆ ಕಡೆಗಳಲ್ಲಿ ಅಭಿಮಾನಿಗಳ ಜೊತೆಗೆ ಸಂವಾದ ಮಾಡಲಿದ್ದಾರೆ, ಸಂವಾದದ ಮೂಲಕ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಅಭಿಪ್ರಾಯ ಸಂಗ್ರಹಣೆಯನ್ನೂ ಮಾಡಲಿದ್ದಾರೆ.

ರಜನಿಕಾಂತ್ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂಬ ಸುದ್ದಿ ಎಂಬ ಗಾಳಿ ಸುದ್ದಿ ತಮಿಳುನಾಡಿನಾದ್ಯಂತ ಹಬ್ಬಿದೆ. ರಜನಿಕಾಂತ್ ನ ಓರಗೆಯ ನಟ ಕಮಲಹಾಸನ್ ಈಗಾಗಲೇ ಹೊಸ ಪಕ್ಷ ಸ್ಥಾಪನೆ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+