ಡಿಸೆಂಬರ್ 26ರಿಂದ 31ರ ಮಧ್ಯೆ ರಜನಿಯಿಂದ ಬಿಗ್ ನ್ಯೂಸ್!
ಇದೇ ಡಿಸೆಂಬರ್ 26ರಿಂದ 31ರ ಮಧ್ಯೆ ರಜನೀಕಾಂತ್ ತಮ್ಮ ಮುಂದಿನ ನಡೆಯನ್ನು ತಿಳಿಸಲಿದ್ದಾರೆ. ಆ ನಂತರ ಅವರ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಅನುಮಾನಗಳಿರುವುದಿಲ್ಲ ಎಂದು ನಟ ಹಾಗೂ ತಮಿಳಿಗರ ಆರಾಧ್ಯದೈವ ರಜನೀಕಾಂತ್ ರ ಆತ್ಮೀಯ ಸೇಹಿತ ತಮಿಳರುವಿ ಮಣಿಯನ್ ಮಾಹಿತಿ ನೀಡಿದ್ದಾರೆ.
26ರಿಂದ 31ರವರೆಗೆ ಆರು ದಿನಗಳ ಕಾಲ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಈ ಸುದ್ದಿ ಖಚಿತವಾದ ಮೇಲೆ ಹಲವಾರು ಊಹಾಪೋಹಗಳು ರೆಕ್ಕೆ ಬಿಚ್ಚಿಕೊಂಡಿವೆ. ಕಳೆದ ಕೆಲವು ತಿಂಗಳಿಂದ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಹಲವಾರು ವದಂತಿ, ಊಹೆ ಎಲ್ಲ ಹರಿದಾಡುತ್ತಿದೆ. ಸ್ವತಃ ರಜನೀಕಾಂತ್ ಈ ಬಗ್ಗೆ ಸುಳಿವು ನೀಡಿದ್ದಾರೆ.

ಈ ವರ್ಷದ ಕೊನೆಗೆ ರಜನೀಕಾಂತ್ ತಮ್ಮ ರಾಜಕೀಯ ಪಕ್ಷ ಹಾಗೂ ಅದರ ಸ್ಥಾಪನೆ ಮತ್ತಿತರ ವಿಚಾರದ ಬಗ್ಗೆ ಬಹಿರಂಗ ಮಾಡುವ ಎಲ್ಲ ಸಾಧ್ಯತೆ ಇದೆ ಎಂಬುದನ್ನು ಅವರ ಆಪ್ತ ಸ್ನೇಹಿತರೇ ತಿಳಿಸಿರುವುದರಿಂದ ಇದು ಅಧಿಕೃತ ಎಂದೇ ಭಾವಿಸಲಾಗಿದೆ. ಇನ್ನೇನು ಹತ್ತು ದಿನದೊಳಗೆ ಎಲ್ಲವೂ ತಿಳಿಯಲಿದೆ.












Click it and Unblock the Notifications