'ಕಾವೇರಿ'ದ ಹೋರಾಟ: ಪೊಲೀಸರ ಮೇಲಿನ ದಾಳಿ ಖಂಡನೀಯ ಎಂದ ರಜನಿ

Subscribe to Oneindia Kannada
   ಚೆನ್ನೈ ನಲ್ಲಿ ಕಾವೇರಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಮಾತನಾಡಿದ ರಜಿನಿಕಾಂತ್ | Oneindia Kannada

   ಚೆನ್ನೈ, ಏಪ್ರಿಲ್ 11: ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಮಂಗಳವಾರ ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದ ಹೊರಗೆ ನಡೆದ ಘರ್ಷಣೆಯಲ್ಲಿ ಪೊಲೀಸರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ.

   ಇದೂ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಘಟನೆಯನ್ನು ತಮಿಳು ಸೂಪರಸ್ಟಾರ್ ರಜನಿಕಾಂತ್ ಟ್ಟಿಟ್ಟರ್ ನಲ್ಲಿ ಖಂಡಿಸಿದ್ದಾರೆ.

   ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಪಟ್ಟು; ಪ್ರತಿಭಟನೆಗಿಳಿದ ರಜನಿ, ಕಮಲ್

   "ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಕೆಟ್ಟ ಮುಖ ಎಂದರೆ ಕರ್ತವ್ಯದಲ್ಲಿರುವ ಸಮವಸ್ತ್ರಧಾರಿ ಪೊಲೀಸರ ಮೇಲೆ ಹಲ್ಲೆ ನಡೆಸುವುದು. ಈ ರೀತಿಯ ಹಿಂಸಾಚಾರವು ನಮ್ಮ ದೇಶಕ್ಕೆ ತೀವ್ರ ಅಪಾಯವನ್ನು ಉಂಟು ಮಾಡುತ್ತದೆ. ಇದನ್ನು ತಕ್ಷಣವೇ ನಿಭಾಯಿಸಬೇಕಾಗಿದೆ. ಪೊಲೀಸ್ ಸಿಬ್ಬಂದಿ ಮೇಲೆ ದಾಳಿಯ ಅಪರಾಧಿಯನ್ನು ಶಿಕ್ಷಿಸಲು ನಮಗೆ ಹೆಚ್ಚು ಕಟ್ಟುನಿಟ್ಟಿನ ಕಾನೂನು ಬೇಕು," ಎಂದು ರಜನಿಕಾಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಹಾಗೆ ನೋಡಿದರೆ ಇಂಥಹದ್ದೊಂದು ಘಟನೆಗೆ ರಜನಿಕಾಂತ್ ರೆ ಪರೋಕ್ಷ ಕಾರಣವಾಗಿದ್ದಾರೆ. ಕಾವೇರಿ ಹೋರಾಟದ ಹಿನ್ನಲೆಯಲ್ಲಿ ಪ್ರತಿಭಟನೆಗೆ ಇಳಿದಿದ್ದ ರಜನಿಕಾಂತ್ ಚೆನ್ನೈನಲ್ಲಿ ಐಪಿಎಲ್ ಪಂದ್ಯಗಳು ನಡೆಯಬಾರದು ಎಂದು ಗುಡುಗಿದ್ದರು. ನಂತರ ಕಪ್ಪು ಪಟ್ಟಿ ಧರಿಸಿ ಆಡಬೇಕು ಎಂದು ಹೇಳಿದ್ದರು.

   ಕಮಲ್ ನಂತರ ಕಾವೇರಿ ಬಗ್ಗೆ ರಜನಿಕಾಂತ್ ಟ್ವೀಟ್!

   Rajini says attack on police is un acceptable

   ಇದನ್ನೇ ಸೂಚನೆಯಂತೆ ಪರಿಗಣಿಸಿದ ತಮಿಳಿಗರು ಮಂಗಳವಾರ ಇಲ್ಲಿನ ಸ್ಟೇಡಿಯಂ ಸುತ್ತ ಪ್ರತಿಭಟನೆಗೆ ಇಳಿದಿದ್ದರು. ಈ ವೇಳೆ ಚಪ್ಪಲಿ ಮತ್ತು ಕಲ್ಲು ತೂರಾಟಕ್ಕೆ ಯತ್ನಿಸಿದ್ದರು. ಇವರನ್ನು ಚದುರಿಸಲು ಪೊಲೀಸರು ಮುಂದಾದಾಗ ಘರ್ಷಣೆ ಸಂಭವಿಸಿತ್ತು.

   ಈ ಸಂದರ್ಭ ಹೋರಾಟಗಾರರು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದರು. ಈ ಸಂಬಂಧ 21 ನಾಮ್ ತಮಿಲರ್ ಕಚ್ಚಿ ಕಾರ್ಯಕರ್ತರನ್ನು ಬಂಧಿಸಿ ಪುಝಲ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "The worst form of violence in law and order situation is attack on uniformed personnel on duty.This form of violence has to be tackled immediately as it poses grave danger to our country," said Rajinikanth after protesters attacked police outside cricket stadium in Chennai.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ