ಚೆನ್ನೈ, ಕರುಣಾನಿಧಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ
ಚೆನ್ನೈ, ಡಿಸೆಂಬರ್ 17: ಬೆಳಗಾವಿಗೆ ಆಗಮಿಸುತ್ತಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ದ್ರಾವಿಡ ಮುನ್ನೇತ್ರ ಕಳಗಂನ (ಡಿಎಂಕೆ) ಅಧ್ಯಕ್ಷ ಕರಣಾನಿಧಿ ಅನಾರೋಗ್ಯ ಹಿನ್ನೆಲೆ ಚೆನ್ನೈಗೆ ಭೇಟಿ ನೀಡಿ ಕರುಣಾನಿಧಿ ಅವರ ಆರೋಗ್ಯವನ್ನು ವಿಚಾರಿಸಿದರು.
ರಾಹುಲ್ ಗಾಂಧಿಯವರು ಶನಿವಾರ ಬೆಳಗ್ಗೆ ಚನ್ನೈಗೆ ಆಗಮಿಸಿ ಕಾವೇರಿ ಆಸ್ಪತ್ರೆಗೆ ಭೇಟಿ ನೀಡಿದರು. ನಂತರ ಕರುಣಾನಿಧಿ ಅವರೊಂದಿಗೆ ಆರೋಗ್ಯದ ಕುರಿತಾಗಿ ಯೋಗಕ್ಷೇಮ ವಿಚಾರಿಸಿ, ನಿಮ್ಮ ಆರೋಗ್ಯ ಬಹುಬೇಗ ಸರಿಹೋಗಲಿ ಎಂದು ಆಶಿಸುತ್ತೇನೆ, ಕಾಂಗ್ರೆಸ್ ಅಧ್ಯಕ್ಷರೂ ನಿಮ್ಮ ಆರೋಗ್ಯದ ಬಗ್ಗೆ ವಿಚಾರಿಸಿಲು ಹೇಳಿದ್ದಾರೆ. ವೈದ್ಯರು ನಿಮ್ಮನ್ನು ಬಹುಬೇಗ ಗುಣಮುಖರನ್ನಾಗಿ ಮಾಡುತ್ತಾರೆ ಎಂದು ಹೇಳಿದರು. ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡರು.[ಡಿಎಂಕೆ ಮುಖ್ಯಸ್ಥ ಕರುಣಾ ನಿಧಿ ಮತ್ತೆ ಆಸ್ಪತ್ರೆಗೆ ದಾಖಲು]

ಕರ್ನಾಟಕ ಕಾಂಗ್ರೆಸ್ಸಿನಿಂದ ಇಂದಿರಾ ಗಾಂಧಿಯವರ ಜನ್ಮಶತಮಾನೋತ್ಸವ ವರ್ಷದ ಆಚರಣೆ ನಿಮಿತ್ತ ಬೆಳಗಾವಿಯ ಸಮಾವೇಶಕ್ಕೆ ತೆರಳುತ್ತಿರುವುದಾಗಿ ತಿಳಿಸಿದರು.[ಬೆಳಗಾವಿಯಲ್ಲಿಂದು ರಾಹುಲ್ ಕಾಂಗ್ರೆಸ್ ಸಮಾವೇಶ]

ರಾಹುಲ್ ಗಾಂಧಿ ಚೆನ್ನೈಗೆ ಎರಡನೇ ಬಾರಿಗೆ ಆಗಮಿಸುತ್ತಿದ್ದು, ಜಯಲಲಿತಾ ಅವರು ಅಪೋಲೋ ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ಆಗಮಿಸಿದ್ದರು. ಅದರೆ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಒಳಪ್ರವೇಶಿಸಲು ಅನುಮತಿ ನೀಡಿರಲಿಲ್ಲ ಹೀಗಾಗಿ ಅವರು ಜಯಾ ಅವರನ್ನು ಭೇಟಿ ಮಾಡಲು ಆಗಿರಲಿಲ್ಲ.












Click it and Unblock the Notifications