• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿಯನ್ನು ಏಕೆ ತಬ್ಬಿಕೊಂಡೆ: ರಾಹುಲ್ ಗಾಂಧಿ ಕೊಟ್ಟರು ಕಾರಣ

|
   ಮೋದಿಯನ್ನ ತಬ್ಬಿಕೊಂಡಿದ್ಯಾಕೆ ಎಂದು ಕಾರಣ ಬಯಲು ಮಾಡಿದ ರಾಹುಲ್ ಗಾಂಧಿ | Oneindia Kannada

   ಚೆನ್ನೈ, ಮಾರ್ಚ್‌ 13: ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರನ್ನು ತಬ್ಬಿಕೊಂಡಿದ್ದು ಯಾರಿಗೆ ತಾನೇ ನೆನಪಿಲ್ಲ ಹೇಳಿ, ಈ ದಶಕದ ಟಾಪ್ ಹತ್ತು ರಾಜಕೀಯ ಘಟನೆಗಳಲ್ಲಿ ಒಂದದು.

   ಪಾರ್ಲಿಮೆಂಟ್‌ನಲ್ಲಿ ಭಾಷಣ ಮಾಡುತ್ತಿದ್ದ ರಾಹುಲ್ ಗಾಂಧಿ ಹಠಾತ್ತನೆ ನಾನು ಮೋದಿಯನ್ನು ತಬ್ಬಿಕೊಳ್ಳುತ್ತೇನೆ ಎಂದು ಘೋಷಿಸಿ ಏಕ್‌ಧಂ ಆಡಳಿತ ಪಕ್ಷದ ಸ್ಟಾಂಡ್‌ ಕಡೆ ಹೋಗಿ ಅಲ್ಲಿ ಕುಳಿತಿದ್ದ ಮೋದಿ ಅವರನ್ನು ತಬ್ಬಿಕೊಂಡಿದ್ದರು. ಮಾರನೇಯ ದಿನ ಎಲ್ಲ ಪತ್ರಿಕೆಗಳಲ್ಲೂ, ಟಿವಿಗಳ ಚರ್ಚೆಯಲ್ಲೂ ಅದೇ ಸುದ್ದಿ.

   ಮಹಿಳೆಯರು ಪುರುಷರಿಗಿಂತಲೂ ಬುದ್ಧಿವಂತರು: ರಾಹುಲ್ ಗಾಂಧಿ

   ಆ ಘಟನೆ ಆದ ನಂತರ ತಾವು ಅಂದು ಏಕೆ ಹಾಗೆ ಹಠಾತ್ತನೆ ಹೋಗಿ ಮೋದಿ ಅವರನ್ನು ತಬ್ಬಿಕೊಂಡೆ ಎಂದು ರಾಹುಲ್ ಅವರು ಎಲ್ಲಿಯೂ ಹೇಳಿರಲಿಲ್ಲ. ಆದರೆ ಇಂದು ಆ ಘಟನೆಯ ಬಗ್ಗೆ ವಿಸ್ತೃತವಾಗಿ ಅವರು ಮಾತನಾಡಿದ್ದಾರೆ.

   ಚೆನ್ನೈನ ಸ್ಟೆಲ್ಲಾ ಮೇರೀಸ್ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಹುಲ್ ಅವರು ವಿದ್ಯಾರ್ಥಿನಿಯರ ಪ್ರಶ್ನೆಗೆ ಉತ್ತರಿಸಿದರು, ಕೊನೆಯ ಪ್ರಶ್ನೆಯೂ ಮುಗಿಯಿತು. ಆದರೆ ಅಷ್ಟರಲ್ಲಿ ವಿದ್ಯಾರ್ಥಿಯೊಬ್ಬಾಕೆ ತಾನು ರಾಹುಲ್ ಅವರಿಗೆ ಪ್ರಶ್ನೆ ಕೇಳಬೇಕೆಂದು ಮನವಿ ಮಾಡಿದ್ದರಿಂದ ಆಕೆಗೆ ಅವಕಾಶ ನೀಡಲಾಯಿತು. ಮೈಕು ಪಡೆದ ಆ ವಿದ್ಯಾರ್ಥಿನಿ, ನೀವು ಏಕೆ ಮೋದಿ ಅವರನ್ನು ತಬ್ಬಿಕೊಂಡಿರಿ? ಎಂದಳು. ಸಭಾಂಗಣದಲ್ಲಿ ಕರತಾಡನಗಳ ಸುರಿಮಳೆಯೇ ಆಯಿತು. ಪ್ರಶ್ನೆ ಕೇಳಿ ಮುಗುಳುನಕ್ಕ ರಾಹುಲ್ ಉತ್ತರ ಪ್ರಾರಂಭಿಸಿದರು.

   ತಬ್ಬಿಕೊಂಡಂದಕ್ಕೆ ಕಾರಣ ಕೊಟ್ಟ ರಾಹುಲ್

   ತಬ್ಬಿಕೊಂಡಂದಕ್ಕೆ ಕಾರಣ ಕೊಟ್ಟ ರಾಹುಲ್

   'ನನಗೆ ಮೋದಿ ಅವರನ್ನು ಕಂಡರೆ ವಿಪರೀತ ಪ್ರೀತಿ, ಆದರೆ ಅವರಿಗೆ ನನ್ನ ಮೇಲೆ ಎಂತಹುದ್ದೋ ದ್ವೇಷ, ನನ್ನ ಮುತ್ತಾತ ಸರಿ ಇಲ್ಲ, ನನ್ನ ಅಜ್ಜಿ ಒಳ್ಳೆಯ ವ್ಯಕ್ತಿ ಅಲ್ಲ, ನನ್ನ ತಾಯಿ-ತಂದೆ ಅವರುಗಳ ಬಗ್ಗೆಯೂ ಅವರಿಗೆ ಒಳ್ಳೆಯ ಅಭಿಪ್ರಾಯವಿಲ್ಲ ಅವರ ವಿರುದ್ಧವೂ ಮೋದಿ ದ್ವೇಷ ಕಾರುತ್ತಿರುತ್ತಾರೆ ಆದರೆ ನನಗೆ ಅವರೆಂದರೆ ಬಹುಳ ಪ್ರೀತಿ ಹಾಗಾಗಿ ನಾನು ಅವರನ್ನು ತಬ್ಬಿಕೊಂಡೆ ಎಂದು ರಾಹುಲ್ ಹೇಳಿದರು.

   ಮೋದಿ ಅವರಿಗೆ ಸಿಗಬೇಕಾದ ಪ್ರೀತಿ ಸಿಕ್ಕಿಲ್ಲ: ರಾಹುಲ್

   ಮೋದಿ ಅವರಿಗೆ ಸಿಗಬೇಕಾದ ಪ್ರೀತಿ ಸಿಕ್ಕಿಲ್ಲ: ರಾಹುಲ್

   ರಾಹುಲ್ ಅವರು ಇಷ್ಟು ಹೇಳಿ ಮುಗಿಸುತ್ತಿದ್ದಂತೆ ವಿದ್ಯಾರ್ಥಿನಿಯರೆಲ್ಲಾ ಜೋರಾಗಿ ಕೂಗಿ, ಚಪ್ಪಾಳೆ ಭಾರಿಸಿ ಸಂತಸ ವ್ಯಕ್ತಪಡಿಸಿದರು. ರಾಹುಲ್ ಮತ್ತೆ ಮುಂದೆ ಮಾತನಾಡಿ, ಮೋದಿ ಅವರಿಗೆ ಸರಿಯಾಗಿ ಪ್ರೀತಿ ದೊರೆತಿಲ್ಲ, ಜಗತ್ತಿನ ಸುಂದರತೆಯನ್ನು ಅವರು ನೋಡಲು ಸಾಧ್ಯವಾಗಿಲ್ಲ, ಹಾಗಾಗಿ ಅವರಲ್ಲಿ ದ್ವೇಷ ಹುಟ್ಟಿಬಿಟ್ಟಿದೆ ಅದನ್ನು ಕಳೆಯಬೇಕೆಂಬ ಕಾರಣದಿಂದ ನಾನು ಅವರನ್ನು ತಬ್ಬಿಕೊಂಡೆ ಎಂದರು.

   ಮೋದಿಯನ್ನು ಅಪ್ಪಿಕೊಂಡು ಸದನಕ್ಕೆ ಹಿಂದು ಧರ್ಮದ ಪಾಠ ಮಾಡಿದ ರಾಹುಲ್

   2014ರಲ್ಲಿ ಸೋತದ್ದರಿಂದ ನಾನು ಸಾಕಷ್ಟು ಕಲಿತೆ: ರಾಹುಲ್

   2014ರಲ್ಲಿ ಸೋತದ್ದರಿಂದ ನಾನು ಸಾಕಷ್ಟು ಕಲಿತೆ: ರಾಹುಲ್

   2014 ರ ಲೋಕಸಭೆ ಚುನಾವಣೆಯಲ್ಲಿ ನಾವು ಧಾರುಣವಾಗಿ ಸೋತೆವು, ಅದು ಬೇಸರದ ವಿಷಯ ಆದರೆ ನನಗೆ ಅದರಲ್ಲೂ ಕೆಲವು ಧನಾತ್ಮಕ ವಿಷಯಗಳು ಕಂಡಿತು. ಸಾಕಷ್ಟು ಕಲಿಯಲು ನನಗೆ ಸಿಕ್ಕಿತು. ಮೋದಿ ಅವರಿಂದಲೂ ನಾನು ಸಾಕಷ್ಟು ಕಲಿತೆ, ನಿಮಗೆ ಕಲಿಸಿದ ವ್ಯಕ್ತಿಯನ್ನು ನೀವು ದ್ವೇಷಿಸಲು ಸಾಧ್ಯವೇ ಎಂದು ರಾಹುಲ್ ಪ್ರಶ್ನಿಸಿದರು. ವಿದ್ಯಾರ್ಥಿನಿಯರಿಂದ ಮತ್ತೆ ಭಾರಿ ಕರತಾಡನ.

   ಪ್ರೀತಿಯೇ ಈ ದೇಶದ ಮೂಲ ಪ್ರಕೃತಿ: ರಾಹುಲ್

   ಪ್ರೀತಿಯೇ ಈ ದೇಶದ ಮೂಲ ಪ್ರಕೃತಿ: ರಾಹುಲ್

   ಯಾರು ನಮ್ಮನ್ನು ದ್ವೇಷಿಸುತ್ತಾರೋ ಅವರ ಬಗ್ಗೆ ಮರುಕಪಡಿ, ಅವರ ಅವಸ್ಥೆಯನ್ನು ಕಂಡು ಕರಗಿರಿ, ನಾನೂ ಹಾಗೆಯೇ ಮಾಡಿದೆ. ಯಾರು ನಿಮ್ಮ ಕಡೆಗೆ ದ್ವೇಷವನ್ನು ಒಗೆಯುತ್ತಾರೆ ಆ ದ್ವೇಷವನ್ನು ಎತ್ತಿಟ್ಟುಕೊಳ್ಳಿ ಅವರ ಕಡೆಗೆ ಪ್ರೀತಿಯೊಂದನ್ನು ಮಾತ್ರವೇ ಹರಿಸಿರಿ. ಈ ದೇಶದ ಭಾವವೇ ಪ್ರೀತಿ, ಈ ದೇಶದ ಮೂಲ ಪ್ರಕೃತಿಯೇ ಪ್ರೀತಿ ಎಂದು ರಾಹುಲ್ ಕಾವ್ಯಮಯವಾಗಿ ಭಾಷಣ ಮಾಡಿದರು.

   ರಾಹುಲ್ -ಮೋದಿ ಅಪ್ಪುಗೆ ಕಂಡು ಅವಾಕ್ಕಾದ ಟ್ವೀಟ್ ಲೋಕ

   ಅವಕಾಶದಿಂದ ವಂಚಿತರಾಗಬೇಡಿ: ರಾಹುಲ್

   ಅವಕಾಶದಿಂದ ವಂಚಿತರಾಗಬೇಡಿ: ರಾಹುಲ್

   ಸಂವಾದಕ್ಕೆ ತೆರೆ ಎಳೆಯುವ ಮುನ್ನಾ ಕಾಲೇಜಿನ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ ರಾಹುಲ್, ನೀವು ಮಹಿಳೆಯರು ಎಂಬ ಕಾರಣಕ್ಕೆ ಯಾರಾದರೂ ನಿಮ್ಮ ಅವಕಾಶಗಳನ್ನು ಕಿತ್ತುಕೊಳ್ಳಲು ಬಂದರೆ ಒಪ್ಪಿಕೊಳ್ಳಬೇಡಿ. ನಾನು ಮಹಿಳೆ ಹಾಗಾಗಿ ಈ ಕಾರ್ಯವನ್ನು ನಾನು ಶಕ್ತವಾಗಿ ಮಾಡಬಲ್ಲೆ ಎಂದು ಸಮಾಜಕ್ಕೆ ಹೇಳಿ ಎಂದರು ರಾಹುಲ್.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Rahul Gandhi today explains why he hugged prime minister Narendra Modi in parliament. He said i really have love for Modi so i hugged him, i wanted remove his hatred for me and my entire family.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more