• search
 • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊವಿಡ್ 19 ರೋಗಿಯ ಶವವನ್ನು ಹೊಂಡದೊಳಗೆ ಎಸೆಯುವ ಕಾರ್ಯಕರ್ತರು

|

ಚೆನ್ನೈ, ಜೂನ್ 7: ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಕೊವಿಡ್ 19ನಿಂದ ಮೃತಪಟ್ಟವರ ಶವವನ್ನು ಹೊಂಡಕ್ಕೆ ಎಸೆಯುವ ಭಯಾನಕ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

   Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | Oneindia Kannada

   ಆ ವಿಡಿಯೋದಲ್ಲಿ ಪಿಪಿಇ ಸ್ಯೂಟ್ ಧರಿಸಿರುವ ನಾಲ್ಕು ಮಂದಿ ಶವವನ್ನು ಆಂಬ್ಯುಲೆನ್ಸ್ ಮೂಲಕ ತಂದು ಹೊಂಡದಲ್ಲಿ ಹಾಕುತ್ತಾರೆ. 30 ಸೆಕೆಂಡ್ ಒಳಗೆ ಆ ಶವವನ್ನು ಹೊಂಡಕ್ಕೆ ಹಾಕುತ್ತಾರೆ.

   ಆಸ್ಪತ್ರೆ ಬಿಲ್ ಕಟ್ಟಿಲ್ಲ ಎಂದು ವೃದ್ಧರನ್ನು ಹೀಗೆ ನಡೆಸಿಕೊಳ್ಳೋದಾ

   ಕೊರೊನಾದಿಂದಾಗಿ ಮೃತಪಟ್ಟಿದ್ದರೆ ಪ್ಲಾಸ್ಟಿಕ್ ಬ್ಯಾಗ್‌ ಒಂದರಲ್ಲಿ ಶವವನ್ನು ಹಾಕಬೇಕಾಗುತ್ತದೆ. ಬೇರೆಯವರಿಗೆ ಸೋಂಕು ಹರಡದಂತೆ ತಡೆಯಬೇಕಾಗುತ್ತದೆ. ಆದರೆ ಆಸ್ಪತ್ರೆ ಸಿಬ್ಬಂದಿ ಸಾಮಾನ್ಯ ಶವದಂತೆ ಬಿಳಿಬಟ್ಟೆಯಲ್ಲಿ ಸುತ್ತಿಕೊಂಡು ಬಂದಿದ್ದರು.

   ಆ ಶವವು ಚೆನ್ನೈ ಮೂಲದವರದ್ದಾಗಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಕೊರೊನಾ ಸೋಂಕಿತರನ್ನು ಈ ರೀತಿ ನಡೆಸಿಕೊಳ್ಳುವುದರಿಂದಲೇ ಕೊರೊನಾ ಸೋಂಕಿತ ಪ್ರಕರಣಗಳು ತಮಿಳಿನಾಡಿನಲ್ಲಿ ಹೆಚ್ಚಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.

   ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದೇನೆ, ಈ ಪ್ರಕರಣದ ಕುರಿತು ತನಿಖೆ ನಡೆಸಲಾಗುವುದು ಎಂದು ಪುದುಚೆರಿ ಕಲೆಕ್ಟರ್ ಅರುಣ್ ತಿಳಿಸಿದ್ದಾರೆ.

   ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ವೈದ್ಯನ ಅಂತ್ಯಕ್ರಿಯೆ ಸಂದರ್ಭದಲ್ಲಿ ಕೆಲವು ಗುಂಪುಗಳು ಬಂದು ಆಂಬ್ಯುಲೆನ್ಸ್ ಮೇಲೆ ಕಲ್ಲೆಸೆದು ಹಲ್ಲೆ ನಡೆಸಿದ್ದರು.

   English summary
   A video of government workers in Puducherry hurriedly throwing the body of a COVID-19 positive man into a pit has caused massive outrage, prompting the administration to order a probe into the incident.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X