ಕರುಣಾನಿಧಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ರಾಷ್ಟ್ರಪತಿ ಭೇಟಿ
ಚೆನ್ನೈ, ಆಗಸ್ಟ್ 5: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಭಾನುವಾರ ಮಧ್ಯಾಹ್ನ ಚೆನ್ನೈಗೆ ಭೇಟಿ ನೀಡಿ, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಆರೋಗ್ಯ ವಿಚಾರಿಸಿದರು. ಆಳ್ವಾರ್ ಪೇಟೆಯಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕರುಣಾನಿಧಿ ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಜತೆಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಕೂಡ ಇದ್ದರು. ರಾಷ್ಟ್ರಪತಿಗಳನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಹಾಗೂ ರಾಜ್ಯಸಭಾ ಸದಸ್ಯೆ ಕನಿಮೊಳಿ ಬರಮಾಡಿಕೊಂಡರು. ಹದಿನೈದು ನಿಮಿಷಗಳ ಕಾಲ ರಾಮ್ ನಾಥ್ ಕೋವಿಂದ್ ಆಸ್ಪತ್ರೆಯಲ್ಲಿ ಇದ್ದರು.

ಆಸ್ಪತ್ರೆಯಿಂದ ಹೊರಬಂದ ನಂತರ ತಮ್ಮ ಕಾರನ್ನು ಏರಿದ್ದ ರಾಮ್ ನಾಥ್ ಕೋವಿಂದ್ ಅವರು, ಮತ್ತೆ ಹೊರಬಂದು ಆಸ್ಪತ್ರೆ ಎದುರು ಸೇರಿದ್ದ ಜನರತ್ತ ಕೈ ಬೀಸಿದರು. ಈ ವೇಳೆಯಲ್ಲಿ ರಾಜ್ಯಪಾಲ ಪುರೋಹಿತ್ ಹಾಗೂ ಸಚಿವರಾದ ಡಿ.ಜಯಕುಮಾರ್ ಕೂಡ ಇದ್ದರು. ಈ ಭೇಟಿ ನಂತರ ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿ, ಕರುಣಾನಿಧಿಯವರು ಬೇಗ ಗುಣವಾಗಲಿ ಎಂದು ಹಾರೈಸಲಾಗಿದೆ.












Click it and Unblock the Notifications