ಡಿಫೆನ್ಸ್ ಎಕ್ಸ್ ಪೋದಲ್ಲಿ ಮೋದಿ ಭಾಷಣ: ಮುಖ್ಯಾಂಶಗಳು

Recommended Video

      Defence Expo 2018 : ನರೇಂದ್ರ ಮೋದಿಯವರ ಭಾಷಣದ ಮುಖ್ಯಾಂಶಗಳು | Oneindia Kannada

      ಚೆನ್ನೈ, ಏಪ್ರಿಲ್ 12: ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಡಿಫೆನ್ಸ್ ಎಕ್ಸ್ ಪೋ ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ಎಕ್ಸ್ ಪೋದಲ್ಲಿ 670 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ. ಇವರಲ್ಲಿ 150 ವಿದೇಶಿ ಕಂಪನಿಗಳಾಗಿವೆ.

      ಈ ಎಕ್ಸ್ ಪೋ ಉದ್ದೇಶಿಸಿ ಮೋದಿ ಸುದೀರ್ಘ ಭಾಷಣ ಮಾಡಿದರು. ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

      PM Modi address at Defence Expo 2018: Highlights

      • ಕಾಂಚೀಪುರಂನ ಈ ಐತಿಹಾಸಿಕ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ತಮಿಳುನಾಡಿನ ಜನರು ನೆರೆದಿರುವುದನ್ನು ನೋಡಲು ನಾನು ಸಂತೋಷಪಡುತ್ತಿದ್ದೇನೆ.
      • ಪ್ರಧಾನಿ ಕೇಂದ್ರ ರಕ್ಷಣಾ ಸಚಿವಾಲಯದ ಪ್ರಯತ್ನಗಳನ್ನು ಶ್ಲಾಘಿಸಿದರು. 500 ಭಾರತೀಯ ಮತ್ತು 150 ಕ್ಕಿಂತಲೂ ಹೆಚ್ಚಿನ ವಿದೇಶಿ ಕಂಪೆನಿಗಳು ಈ ಎಕ್ಸ್ ಪೋದಲ್ಲಿ ಪಾಲ್ಗೊಂಡಿವೆ ಎಂದು ಅವರು ಹೇಳಿದರು.
      • ಭಾರತದ ರಕ್ಷಣಾ ಉತ್ಪಾದನೆಯ ಸಾಮರ್ಥ್ಯವನ್ನು ಮೊದಲ ಬಾರಿಗೆ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತಿದೆ.
      • ಇಂದು ನಾವು ಅಂತರ್ ಸಂಪರ್ಕಿತ ಜಗತ್ತಿನಲ್ಲಿ ವಾಸಿಸುತ್ತೇದ್ದೇವೆ. ಹಾಗಾಗಿ ಮೇಕ್ ಇನ್ ಇಂಡಿಯಾ ಮತ್ತು ಭಾರತಕ್ಕಾಗಿ ಉತ್ಪಾದನೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
      • ಭಾರತವು ಅದ್ಭುತವಾದ ಕಡಲತೀರದವನ್ನು ಹೊಂದಿದ ದೇಶವಾಗಿದೆ ಮತ್ತು ತಮಿಳುನಾಡು ಈ ಪರಂಪರೆಯ ಮುಂಚೂಣಿಯಲ್ಲಿದೆ.
      • ಭಾರತ ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳತ್ತ ನೋಡುತ್ತಿತ್ತು. ಈಗ ದೇಶೀಯ ರಕ್ಷಣಾ ಉದ್ಯಮದ ಬೆಳವಣಿಗೆಯನ್ನು ಉತ್ತೇಜಿಸಲು ಹಲವಾರು ನಿರ್ದಿಷ್ಟ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
      • ನಾವು 2 ಡಿಫೆನ್ಸ್ ಕೈಗಾರಿಕಾ ಕಾರಿಡಾರ್ಗಳನ್ನು ಸ್ಥಾಪಿಸಲು ಬದ್ಧರಾಗಿದ್ದೇವೆ. ಉತ್ತರ ಪ್ರದೇಶದಲ್ಲಿ ಒಂದು ಮತ್ತು ತಮಿಳುನಾಡಿನಲ್ಲಿ ಒಂದು ಡಿಫೆನ್ಸ್ ಕೈಗಾರಿಕಾ ಕಾರಿಡಾರ್ಗಳನ್ನು ನಿರ್ಮಿಸಲಿದ್ದೇವೆ.
      • 'ಇನ್ನೋವೇಶನ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್' ಯೋಜನೆಯನ್ನು ನಾವು ಪ್ರಾರಂಭಿಸಿದ್ದೇವೆ. ರಕ್ಷಣಾ ವಲಯದಲ್ಲಿನ ಸ್ಟಾರ್ಟ್ ಅಪ್ ಗಳಿಗೆ ಪ್ರಾರಂಭದ ಹಂತದಲ್ಲಿ ಅವಶ್ಯಕವಾದ ಮೂಲಭೂತ ಸೌಕರ್ಯವನ್ನು ಒದಗಿಸಲು ದೇಶದಾದ್ಯಂತ ರಕ್ಷಣಾ ಇನ್ನೋವೇಶನ್ ಕೇಂದ್ರಗಳನ್ನು ಇದು ಸ್ಥಾಪಿಸುತ್ತದೆ.
      • ಅದೊಂದು ಸಮಯ ಇತ್ತು, ರಕ್ಷಣಾ ಸನ್ನದ್ಧತೆಯ ನಿರ್ಣಾಯಕ ಘಟ್ಟದಲ್ಲಿ ರಾಜಕೀಯ ನೀತಿಗಳು ಅವುಗಳನ್ನು ತುಳಿದು ಬಿಡುತ್ತಿದ್ದವು. ಅಂತಹ ಸೋಮಾರಿತನ, ಅಸಮರ್ಥತೆ ಅಥವಾ ಬಹುಶಃ ಕೆಲವು ಗುಪ್ತ ಅಜೆಂಡಾಗಳ ದೇಶಕ್ಕೆ ಮಾರಕವಾಗಬಹುದು ಎಂಬುದನ್ನು ನಾವು ನೋಡಿದ್ದೇವೆ. ಇದು ಈಗ ಇಲ್ಲ. ಇನ್ನು ಮುಂದೆ, ಮತ್ತೆ ಎಂದೆಂದಿಗೂ ಇದು ಇರುವದಿಲ್ಲ.
      • ಭಾರತೀಯ ಸೈನಿಕರಿಗೆ ಬುಲೆಟ್-ಪ್ರೂಫ್ ಜಾಕೆಟ್ಗಳನ್ನು ಒದಗಿಸುವ ಸಮಸ್ಯೆಯನ್ನು ವರ್ಷಗಳವರೆಗೆ ಹಾಗೇ ಇಡಲಾಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಭಾರತದಲ್ಲಿ ರಕ್ಷಣಾ ಉತ್ಪಾದನೆಗೆ ಉತ್ತೇಜನ ನೀಡುವ ಒಪ್ಪಂದದೊಂದಿಗೆ ನಾವು ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿದ್ದು ಜಾರಿಗೊಳಿಸುವ ತೀರ್ಮಾನಕ್ಕೆ ಬಂದಿದ್ದೇವೆ.
      • ಯುದ್ಧ ವಿಮಾನಗಳ ಖರೀದಿಯ ದೀರ್ಘಾವಧಿಯ ಪ್ರಕ್ರಿಯೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರಲಿಲ್ಲ ಎಂಬುದು ನಿಮಗೆ ನೆನಪಿರಬಹುದು. ನಮ್ಮ ತಕ್ಷಣದ ನಿರ್ಣಾಯಕ ಅವಶ್ಯಕತೆಗಳನ್ನು ಪೂರೈಸಲು ನಾವು ಧೈರ್ಯದ ಕ್ರಮವನ್ನು ತೆಗೆದುಕೊಂಡಿದ್ದೇವೆ. ಆದರೆ 110 ಯುದ್ಧ ವಿಮಾನಗಳ ಖರೀದಿಯಲ್ಲಿ ಹೊಸ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ.
      • ಮೇ 2014 ರಲ್ಲಿ ಒಟ್ಟು 577 ಮಿಲಿಯನ್ ಡಾಲರ್ ಮೌಲ್ಯದ 118 ರಫ್ತುಗಳಿಗೆ ಅನುಮತಿ ನೀಡಲಾಗಿತ್ತು. ನಾಲ್ಕು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ನಾವು ಒಟ್ಟು 1.3 ಶತಕೋಟಿ ಡಾಲರ್ಗಳಷ್ಟು ಮೌಲ್ಯದ 794 ರಫ್ತು ಅನುಮತಿಗಳನ್ನು ನಾವು ನೀಡಿದ್ದೇವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+