ಸರ್ಕಾರ ರಚನೆ ಕಸರತ್ತು ಆರಂಭಿಸಿದ ಎ ಪಳನಿಸ್ವಾಮಿ

Posted By:
Subscribe to Oneindia Kannada

ಚೆನ್ನೈ, ಫೆಬ್ರವರಿ 14: ಅಕ್ರಮ ಆಸ್ತಿ ಪ್ರಕರಣದಲ್ಲಿ ಅಪರಾಧಿ ಎನಿಸಿದ್ದರಿಂದ ಶಶಿಕಲಾ ನಟರಾಜನ್ ಅವರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗುವ ಕನಸು ನುಚ್ಚು ನೂರಾಗಿದೆ. ಆದರೂ ಅವರು ಶಾಸಕರ ಬೆಂಬಲ ಹಾಗೂ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದಾರೆ. ಓ ಪನ್ನೀರ್ ಸೆಲ್ವಂ ಉಚ್ಚಾಟಿಸಿ ಎಡಪ್ಪಡಿ ಪಳನಿಸ್ವಾಮಿ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಎಡಪ್ಪಾಡಿ ಪಳನಿಸ್ವಾಮಿ ಅವರಿಗೆ ಶಾಸಕರ ಬೆಂಬಲವಿರುವುದರಿಂದ ಸರ್ಕಾರ ರಚಿಸಲು ಅನುಮತಿ ಕೋರಲು ರಾಜ್ಯಪಾಲರನ್ನು ಭೇಟಿಯಾಗಲು ಕಾಲಾವಕಾಶ ಕೇಳಿದ್ದಾರೆ. [ಶಶಿಕಲಾ ಮುಂದಿರುವ ಅಂತಿಮ 4 ಆಯ್ಕೆ]

ಬಹುಮತ ಸಾಬೀತು ಪಡಿಸಲು ಬೇಕಾದ ಶಾಸಕರ ಬಲ(119) ಇರುವುದರಿಂದ ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ರಾಜ್ಯಪಾಲ(ಹಂಗಾಮಿ) ವಿದ್ಯಾಸಾಗರ್ ರಾವ್ ಅವರನ್ನು ಪಳನಿ ಸ್ವಾಮಿ ಕೋರಲಿದ್ದಾರೆ.[ಅಕ್ರಮ ಆಸ್ತಿ ಪ್ರಕರಣ : ತೀರ್ಪಿನ ಸಂಪೂರ್ಣ ಅಪ್ಡೇಟ್]

ಸುಪ್ರೀಂಕೋರ್ಟಿನಲ್ಲಿ ಅಕ್ರಮ ಆಸ್ತಿ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆ ಕೆಲ ಕಾಲ ದುಃಖಿತರಾಗಿದ್ದ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ನಂತರ ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಶಾಸಕಾಂಗ ಸಭೆ ನಡೆಸಿದರು.

Panneerselvam EXPELLED from AIADMK; Edappadi new party chief

ಈ ಸಭೆಯಲ್ಲಿ ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಓ ಪನ್ನೀರ್ ಸೆಲ್ವಂತನ್ನು ವಜಾಗೊಳಿಸಲಾಯಿತು. ನಂತರ ಸೇಲಂ ಮೂಲದ ಹಿರಿಯ ನಾಯಕ, ಸಚಿವ ಎಡಪ್ಪಡಿ ಪಳನಿಸ್ವಾಮಿ ಅವರನ್ನು ನೂತನ ಶಾಸಕಾಂಗ ಪಕ್ಷದ ನಾಯಕ ಹಾಗೂ ನಿಯೋಜಿತ ಸಿಎಂ ಎಂದು ಘೋಷಿಸಲಾಯಿತು.

ರಮೇಶ್ ಮುತ್ತುಸ್ವಾಮಿ ಅವರ ಅಣ್ಣಾ ಡಿಎಂಕೆ ಪಕ್ಷದ ನಾಯಕ ಪಳನಿಸ್ವಾಮಿ ಅವರು ಹೆದ್ದಾರಿ ಹಾಗೂ ಬಂದರು ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಮಿಳುನಾಡಿನ ಅಸೆಂಬ್ಲಿ ಬಲಾಬಲ: 234
ಎಐಎಡಿಎಂಕೆ : 135
ಡಿಎಂಕೆ: 89
ಕಾಂಗ್ರೆಸ್ : 8
ಇತರೆ : 1
ಜಯಲಲಿತಾ ನಿಧನದಿಂದ 1 ಸ್ಥಾನ ತೆರವು
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tamil Nadu Chief Minister O Panneerselvam has been expelled from the primary membership of the party, while senior leader and minister Edappadi Palaniswamy has been elected as the new leader of the AIADMK legislature party.
Please Wait while comments are loading...