ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಕ್ಕಟ್ಟಿನ ನಡುವೆ ಪನ್ನೀರ್ ಸೆಲ್ವಂರಿಂದ ಭಾವನಾತ್ಮಕ ನಿರ್ಧಾರ!

ತಮಿಳುನಾಡಿನಲ್ಲಿ ಸಿಎಂ ಪಟ್ಟ ಯಾರ ಪಾಲಾಗಲಿದೆ ಎಂಬ ಕುತೂಹಲ ಕ್ಷಣಕ್ಷಣ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಏನದು ಮುಂದೆ ಓದಿ...

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಫೆಬ್ರವರಿ 11: ತಮಿಳುನಾಡಿನಲ್ಲಿ ಸಿಎಂ ಪಟ್ಟ ಯಾರ ಪಾಲಾಗಲಿದೆ ಎಂಬ ಕುತೂಹಲ ಕ್ಷಣಕ್ಷಣ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ತಮಿಳರ ಪಾಲಿನ ಅಮ್ಮ ದಿವಂಗತ ಜೆ ಜಯಲಲಿತಾ ಅವರು ನೆಲೆಸಿದ್ದ 'ವೇದಾ ನಿಲಯಂ' ಬಂಗಲೆಯನ್ನು ಸ್ಮಾರಕವಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಈ ನಿಟ್ಟಿಯಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ಪನ್ನೀರ್ ಸೆಲ್ವಂ ಆರಂಭಿಸಿದ್ದಾರೆ.[ಶಶಿ ಮುಖ್ಯಮಂತ್ರಿಯಾಗದಂತೆ ತಡೆದಿದ್ದಕ್ಕೆ ನಿಜವಾದ ಕಾರಣ]

ಇಷ್ಟಕ್ಕೂ ಓ ಪನ್ನೀರ್ ಸೆಲ್ವಂ ಅವರು ಜಯಾ ಅವರಿದ್ದ ಪೋಯಸ್ ಗಾರ್ಡನ್ ನ 'ವೇದಾ ನಿಲಯಂ' ಬಗ್ಗೆ ಕಾಳಜಿ ವಹಿಸುವುದರಲ್ಲೂ ಅಪ್ಪಟ ರಾಜಕೀಯ ತಂತ್ರ ಅಡಗಿದೆ. ತಮಿಳರ ಪಾಲಿನ ಅಮ್ಮ ನೆಲೆಸಿದ್ದ ಈ ಮನೆ ತಮಿಳರಿಗೆ ದೇಗುಲದಷ್ಟೇ ಪವಿತ್ರವಾಗಿದೆ. ಭಾವನಾತ್ಮಕವಾಗಿ ಹತ್ತಿರವಾಗಿದೆ.[ಎಐಎಡಿಎಂಕೆ ಮುಖ್ಯಸ್ಥೆ ಶಶಿಕಲಾ ನಟರಾಜನ್ ವ್ಯಕ್ತಿಚಿತ್ರ]

OPS launches signature campaign to turn Jaya's home into memorial

ಈಗ ಪನ್ನೀರ್ ಸೆಲ್ವಂ ಅವರ ಮುಖ್ಯಮಂತ್ರಿ ಗಾದಿಗೆ ಅಡ್ಡಗಾಲು ಹಾಕಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರು ಇದೇ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. [ಪನ್ನೀರ್ ಸೆಲ್ವಂ ವ್ಯಕ್ತಿಚಿತ್ರ]

ಜಯಾ ಅವರ ಆಪ್ತ ಸಖಿಯಾಗಿ ಹತ್ತಿರವಾದ ಬಳಿಕ ಇದೇ ಮನೆಯಲ್ಲಿ ಶಶಿಕಲಾ ನೆಲೆಸಿದ್ದಾರೆ. ಈಗ ಈ ಮನೆಯನ್ನು ಸ್ಮಾರಕವಾಗಿ ಪರಿವರ್ತಿಸುವ ಮೂಲಕ ಶಶಿಕಲಾ ಅವರನ್ನು ಮನೆಯಿಂದ ಹೊರ ಹಾಕುವ ಉದ್ದೇಶ ಪನ್ನೀರ್ ಸೆಲ್ವಂ ಅವರದ್ದಾಗಿದೆ.

ಈ ನಡುವೆ ಸಚಿವ ಕೆ ಪಾಂಡ್ಯರಾಜನ್ ಅವರು ಪನ್ನೀರ್ ಸೆಲ್ವಂ ಬಣಕ್ಕೆ ಬಂದಿದ್ದಾರೆ. ನನ್ನ ಕ್ಷೇತ್ರದ ಮತದಾರರ ಆಶಯದಂತೆ ನಾನು ನಿರ್ಧಾರ ಕೈಗೊಂಡಿದ್ದೇನೆ. ಅಮ್ಮ ಅವರ ಕನಸನ್ನು ನಾವು ನನಸು ಮಾಡಬೇಕಿದೆ. ಎಐಎಡಿಎಂಕೆಯಲ್ಲಿನ ಒಗ್ಗಟ್ಟು ಉಳಿಯಬೇಕಿದೆ ಎಂದಿದ್ದಾರೆ.

ರೆಸಾರ್ಟ್ ನಲ್ಲಿರುವ ಶಾಸಕರನ್ನು ಪೊಲೀಸರು ವಿಚಾರಣೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ. ಯಾರೂ ಕೂಡಾ ಬಲವಂತವಾಗಿ ಇಲ್ಲಿಗೆ ಬಂದಿಲ್ಲ ಎಂದು ತಿಳಿದು ಬಂದಿದೆ. ಶಶಿಕಲಾ ನಟರಾಜನ್ ಅವರು ರಾಜ್ಯಪಾಲ ವಿದ್ಯಾಸಾಗರ್ ಅವರಿಗೆ ಪತ್ರ ಬರೆದು ಸರ್ಕಾರ ರಚನೆಗೆ ಆಹ್ವಾನ ನೀಡುವಂತೆ ಕೋರಿದ್ದಾರೆ. ಸದ್ಯ ರೆಸಾರ್ಟ್ ನಲ್ಲಿ ಶಾಸಕರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಲಿದ್ದಾರೆ.

English summary
Tamil Nadu Chief Minister O Panneerselvam has launched a signature campaign to turn Jayalalithaa's residence into a memorial. OPS has indicated that Jayalalithaa's residence Veda Nilayam at Poes Garden in Chennai would be turned into a memorial.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X