ಧಾರ್ಮಿಕ ಕಾರ್ಯಕ್ರಮಗಳಿಲ್ಲ; ಆನೆ ಸಾಕಿದವರಿಗೆ ಸಂಕಷ್ಟ

ಚೆನ್ನೈ, ಜುಲೈ 31 : ಕೇಂದ್ರ ಗೃಹ ಇಲಾಖೆ ಅನ್ ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಿದೆ. ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಿಲ್ಲ. ಇದರಿಂದಾಗಿ ಆನೆ ಸಾಕಿದವರು ಸಂಕಷ್ಟಕ್ಕೆ ಈಡಾಗಿದ್ದಾರೆ.

ಕೋವಿಡ್ 19 ಪರಿಸ್ಥಿತಿ ಆನೆ ಸಾಕುವವರಿಗೆ ಸಂಕಷ್ಟ ತಂದಿದೆ. ಯಾವುದೇ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳು ನಡೆಯದ ಹಿನ್ನಲೆಯಲ್ಲಿ ಆನೆಯನ್ನು ಸಾಕುವುದು ನಷ್ಟಕ್ಕೆ ಕಾರಣವಾಗಿದೆ.

ತಮಿಳುನಾಡಿನ ಮಧುರೈನ ರಂಗನ್ ಎರಡು ಆನೆಗಳನ್ನು ಸಾಕಿದ್ದಾರೆ. ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳಿಗೆ ಅವುಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ, ಈಗ ಯಾವುದೇ ಕಾರ್ಯಕ್ರಮಗಳಿಲ್ಲ.

No Religious Function Big Loss For Elephant Owners

"ನನ್ನ ಎರಡು ಆನೆಗಳನ್ನು ದೇವಾಲಯ ಕಾರ್ಯಕ್ರಮ, ವಿವಾಹ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲಾಗುತ್ತಿತ್ತು. ಅವುಗಳ ಆದಾಯದಿಂದಲೇ ಸಾಕುತ್ತಿದ್ದೆವು. ಈಗ ನಮಗೆ ನಷ್ಟವಾಗುತ್ತಿದೆ" ಎಂದು ರಂಗನ್ ಹೇಳಿದ್ದಾರೆ.

No Religious Function Big Loss For Elephant Owners

ದೊಡ್ಡ ಧಾರ್ಮಿಕ ಕಾರ್ಯಕ್ರಮ, ಸಮಾವೇಶ, ರಾಜಕೀಯ ಕಾರ್ಯಮಗಳಲ್ಲಿ ಹೆಚ್ಚು ಜನರು ಸೇರುತ್ತಾರೆ. ಆದ್ದರಿಂದ, ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಸರ್ಕಾರ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಿಲ್ಲ.

ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿ ಅನ್ವಯ ಆಗಸ್ಟ್ 31ರ ಹೆಚ್ಚು ಜನರು ಸೇರುವ ಯಾವುದೇ ಧಾರ್ಮಿಕ, ಮನೋರಂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತಿಲ್ಲ. ಆದ್ದರಿಂದ, ಇನ್ನೂ ಒಂದು ತಿಂಗಳು ಆನೆ ಸಾಕಿದವರು ನಷ್ಟ ಅನುಭವಿಸಬೇಕು.

ಕೊರೊನಾ ವೈರಸ್ ಸೋಂಕಿತರು ಹೆಚ್ಚು ಇರುವ ರಾಜ್ಯಗಳಲ್ಲಿ ತಮಿಳುನಾಡು 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,39,978. ಇದುವರೆಗೂ 3,841 ಜನರು ಮೃತಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+