ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪನ್ನಿರ್ ಸೆಲ್ವಂ, ಸ್ಟಾಲಿನ್‌ಗೆ ವಿಐಪಿ ಭದ್ರತೆ ವಾಪಸ್

|
Google Oneindia Kannada News

ಚೆನ್ನೈ, ಜನವರಿ 10 : ಪನ್ನೀರ್ ಸ್ವೆಲ್ವಂ ಮತ್ತು ಎಂ. ಕೆ. ಸ್ಟಾಲಿನ್‌ಗೆ ನೀಡಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇಷ್ಟು ದಿನ ಉಭಯ ನಾಯಕರಿಗೂ ಸಿಎಆರ್‌ಪಿಎಫ್ ಯೋಧರು ಭದ್ರತೆಯನ್ನು ನೀಡುತ್ತಿದ್ದರು.

ಕೇಂದ್ರ ಸರ್ಕಾರ ಭದ್ರತಾ ಸಂಸ್ಥೆಗಳ ವಾರ್ಷಿಕ ಪರಿಶೀಲನೆ ವೇಳೆ ಬೆದರಿಕೆ ಇರುವ ಗಣ್ಯರ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಭದ್ರತಾ ಸಂಸ್ಥೆಗಳು ನೀಡಿದ್ದ ಪಟ್ಟಿಗೆ ಕೇಂದ್ರ ಗೃಹ ಇಲಾಖೆ ಒಪ್ಪಿಗೆ ಸೂಚಿಸಿದೆ. ಆದ್ದರಿಂದ, ಭದ್ರತೆ ಕಡಿತಗೊಂಡಿದೆ.

ಸಚಿನ್ ತೆಂಡೂಲ್ಕರ್ ಭದ್ರತೆ ಹಿಂಪಡೆದ ಠಾಕ್ರೆ, ಮಗನಿಗೆ ಭದ್ರತೆ ಹೆಚ್ಚಳಸಚಿನ್ ತೆಂಡೂಲ್ಕರ್ ಭದ್ರತೆ ಹಿಂಪಡೆದ ಠಾಕ್ರೆ, ಮಗನಿಗೆ ಭದ್ರತೆ ಹೆಚ್ಚಳ

ತಮಿಳುನಾಡು ಉಪ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ಮತ್ತು ಡಿಎಂಕೆ ಅಧ್ಯಕ್ಷ ಎಂ. ಕೆ. ಸ್ಟಾಲಿನ್‌ಗೆ ನೀಡಲಾಗಿದ್ದ ಭದ್ರತೆ ಕಡಿತಗೊಳಿಸಲಾಗಿದೆ. ಇನ್ನು ಮುಂದೆ ಸಿಆರ್‌ಪಿಎಫ್ ಯೋಧರು ಇಬ್ಬರು ಗಣ್ಯರ ಭದ್ರತೆಗೆ ಇರುವುದಿಲ್ಲ.

ಗಾಂಧಿ ಕುಟುಂಬದ ಎಸ್‌ಪಿಜಿ ವಾಪಸ್: ಮಾಜಿ ಪ್ರಧಾನಿ ಮಗ ಹೇಳಿದ ಕಥೆಗಾಂಧಿ ಕುಟುಂಬದ ಎಸ್‌ಪಿಜಿ ವಾಪಸ್: ಮಾಜಿ ಪ್ರಧಾನಿ ಮಗ ಹೇಳಿದ ಕಥೆ

No CRPF Commandos Security For Panneerselvam And Stalin

ಪನ್ನಿರ್ ಸೆಲ್ವಂಗೆ ವೈ ಪ್ಲಸ್ ಮಾದರಿ, ಎಂ. ಕೆ. ಸ್ಟಾಲಿನ್‌ಗೆ ಝೆಡ್ ಪ್ಲಸ್ ಭದ್ರತೆಯನ್ನು ನೀಡಲಾಗುತ್ತದೆ ಎಂದು ಗೃಹ ಇಲಾಖೆ ಹೇಳಿದೆ. ಇಬ್ಬರೂ ನಾಯಕರ ಭದ್ರತೆಯ ಜವಾಬ್ದಾರಿಯನ್ನು ರಾಜ್ಯ ಪೊಲೀಸರು ತೆಗೆದುಕೊಳ್ಳಲಿದ್ದಾರೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?ಗಾಂಧಿ ಕುಟುಂಬದ ಎಸ್‌ಪಿಜಿ ಭದ್ರತೆ ಹಿಂಪಡೆಯಲು ಕಾರಣವೇನು?

ಕೇಂದ್ರ ಸರ್ಕಾರ ಪ್ರತಿವರ್ಷ ಗಣ್ಯರಿಗೆ, ಬೆದರಿಕೆ ಇರುವ ವ್ಯಕ್ತಿಗಳಿಗೆ ನೀಡುವ ಭದ್ರತೆಯ ಪರಾಮರ್ಶೆ ನಡೆಸುತ್ತದೆ. ಆಗ ವಿವಿಧ ಗಣ್ಯರಿಗೆ ನೀಡುವ ಭದ್ರತೆಯಲ್ಲಿ ಕಡಿತವನ್ನು ಸಹ ಮಾಡಲಾಗುತ್ತದೆ.

ಓ. ಪನ್ನಿರ್ ಸೆಲ್ವಂಗೆ ವೈ ಪ್ಲಸ್ ಮಾದರಿ ಭದ್ರತೆಯನ್ನು ನೀಡಲಾಗಿದೆ. ಇದರ ಅನ್ವಯ 11 ಸಿಬ್ಭಂದಿಗಳು ಭದ್ರತೆ ನೀಡುತ್ತಾರೆ. ಇವರಲ್ಲಿ ಒಬ್ಬ ಅಥವ ಇಬ್ಬರು ಕಮಾಂಡೋಗಳು ಇರುತ್ತಾರೆ. ಉಳಿದವರು ರಾಜ್ಯ ಪೊಲೀಸರು ಆಗಿರುತ್ತಾರೆ.

English summary
CRPF commandos security withdraw to Tamil Nadu Deputy Chief Minister O.Panneerselvam and DMK President M.K.Stalin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X