ಮೈಸೂರು ಕೋರ್ಟ್ ಸ್ಫೋಟ ಪ್ರಕರಣ, ಇನ್ನಿಬ್ಬರು ಉಗ್ರರ ಬಂಧನ

By: ಅನುಷಾ ರವಿ
Subscribe to Oneindia Kannada

ಮೈಸೂರು, ನವೆಂಬರ್ 29: ಮೈಸೂರು ಕೋರ್ಟಿನ ಬಳಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಇನ್ನಿಬ್ಬರು ಶಂಕಿತರನ್ನು ಮಂಗಳವಾರ ಬಂಧಿಸಿದೆ. ಬಂಧಿತರನ್ನು ಷಂಶುದ್ದೀನ್ ಹಾಗೂ ಮೊಹಮ್ಮದ್ ಅಯೂಬ್ ಎಂದು ಗುರುತಿಸಲಾಗಿದೆ. ಇಬ್ಬರೂ ಕೂಡಾ ಮದುರೈನಲ್ಲೇ ಸಿಕ್ಕಿಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತಂಡ ಒಟ್ಟು 5 ಮಂದಿಯನ್ನು ಬಂಧಿಸಿದೆ.

ಮೈಸೂರು ಸೇರಿದಂತೆ ಹಲವಾರು ಕೋರ್ಟ್ ಆವರಣಗಳಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರನ್ನು ಮದುರೈನಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಹಾಗೂ ತಮಿಳುನಾಡು ಪೊಲೀಸರು ಸೋಮವಾರ ಬಂಧಿಸಿದ್ದರು.

ಬಂಧಿತ ಕರೀಮ್, ಅಯೂಬ್ ಹಾಗೂ ಅಬ್ಬಾಸ್ ಅಲಿ ಹಾಗೂ ಮಂಗಳವಾರ ಬಂಧಿತರಾದ 25 ವರ್ಷ ವಯಸ್ಸಿನ ಷಂಶುದ್ದೀನ್ ಹಾಗೂ ಅಯೂಬ್ ರನ್ನು ಸ್ಥಳೀಯ ನ್ಯಾಯಲಯಕ್ಕೆ ಹಾಜರು ಪಡಿಸಲಾಗುವುದು ನಂತರ ಹೆಚ್ಚಿನ ವಿಚಾರಣೆಗಾಗಿ ಮೈಸೂರಿಗೆ ಕರೆದೊಯ್ಯಲಾಗುವುದು ಎಂದು ತಿಳಿದು ಬಂದಿದೆ. [ಕೇರಳದ ಮಲ್ಲಪ್ಪುರಂನಲ್ಲಿ ಸ್ಫೋಟ, ಎನ್ ಐಎನಿಂದ ತನಿಖೆ]

Mysuru blast- 2 more from Base Movement secured by NIA

ಬಂಧಿತರ ವಿವರ:
* ಷಂಶುದ್ದೀನ್ (25) ಬಿನ್ ಸಿಕಂದರ್, ನೆಲ್ಪೆಟೈ, ಮದುರೈ ನಿವಾಸಿ
* ಮೊಹಮ್ಮದ್ ಅಯೂಬ್ (25), ಬಿನ್ ಮೊಹಮ್ಮದ್ ಧಸ್ಲಿ, ಕೈಪತೂರ್, ಮದುರೈ ನಿವಾಸಿ

ಎನ್ ಐಎ ತನಿಖೆಯಿಂದ ಇದು Base Movement ಸಂಘಟನೆಯ ಕೃತ್ಯ ಎಂದು ತಕ್ಷಣಕ್ಕೆ ತಿಳಿದು ಬಂದಿದೆ. ಚಿತ್ತೂರು, ಕೊಲ್ಲಂ ಕೋರ್ಟ್ ಆವರಣದಲ್ಲಿ ಸಿಕ್ಕ ಪತ್ರದಲ್ಲಿ ಭಾರತದ ಭೂಪಟ, ಮೃತ ಉಗ್ರ ಒಸಾಮಾ ಬಿನ್ ಲಾಡೆನ್ ಚಿತ್ರವಿದೆ. ಪತ್ರದ ಕೆಳಗೆ Base Movement ಸಹಿ ಇತ್ತು.

ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿ ಬಳಿ ಸ್ಫೋಟಕ್ಕೂ ಇದೇ ಸಂಘಟನೆ ಕಾರಣ. ಆದರೆ, ಆ ಘಟನೆ ನಂತರ ಸಂಘಟನೆಯ ಹೆಸರು ಬದಲಾಯಿಸಿಕೊಳ್ಳಲಾಗಿದ್ದು, ಅಲ್ ಉಮ್ಮಾ ಸಂಘಟನೆಯೇ ಈಗ ಬೇಸ್ ಮೂವ್ ಮೆಂಟ್ ಎಂದಾಗಿದೆ ಎಂಬ ಮಾಹಿತಿ ಸಿಕ್ಕಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The NIA on Tuesday arrested two more accused in the Mysuru blast case. Shamsudeen and Mohammed Ayub, both aged 25 were arrested from Madurai. NIA has so far arrested 5 people in connection with the Mysuru Court complex blast case.
Please Wait while comments are loading...