ಜೈಲು ಸೇರಬೇಕಿದ್ದ ಸರವಣ ಭವನ ಮಾಲೀಕನಿಗೆ ತೀವ್ರ ಹೃದಯಾಘಾತ
ಚೆನ್ನೈ, ಜುಲೈ 16: ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಸೇರಬೇಕಿದ್ದ ಖ್ಯಾತ ಸರವಣ ಭವನ ಹೊಟೆಲ್ ಮಾಲೀಕ ಪಿ.ರಾಜಗೋಪಾಲ್‌ಗೆ ನಿನ್ನೆ ತೀವೃ ಹೃದಯಾಘಾತವಾಗಿದೆ.
ತನ್ನ ಸಂಸ್ಥೆಯ ಉದ್ಯೋಗಿಯ ಮಗಳ ಗಂಡನನ್ನು 2001 ರಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಪಿ.ರಾಜಗೋಪಾಲ್ ಅಪರಾಧಿಯೆಂದು ನ್ಯಾಯಾಲಯವು ತೀರ್ಪು ನೀಡಿತ್ತು, ಆದರೆ ಪಿ.ರಾಜಗೋಪಾಲ್ ಪೊಲೀಸರಿಗೆ ಶರಣಾಗಿರಲಿಲ್ಲ.
ಜುಲೈ 8 ರಂದು ಪಿ.ರಾಜಗೋಪಾಲ್ ಅವರು ಮ್ಯಾಜಿಸ್ಟ್ರೇಟ್‌ರ ಮುಂದೆ ಶರಣಾಗಿದ್ದರು, ಆದರೆ ಅಂದೇ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆ ಸೇರಿದ್ದರು. ನ್ಯಾಯಾಲಯಕ್ಕೆ ಕೂಡ ಅವರು ಆಂಬುಲೆನ್ಸ್‌ನಲ್ಲಿಯೇ ಬಂದಿದ್ದರು.

ಪಿ.ರಾಜಗೋಪಾಲ್ ಅವರ ವಕೀಲರು ಹೇಳುವಂತೆ, ಪಿ.ರಾಜಗೋಪಾಲ್ ಅವರಿಗೆ ಕಳೆದ ಶನಿವಾರ ತೀವ್ರ ಹೃದಯಾಘಾತವಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಈಗಾಗಲೇ ಕಿಡ್ನಿ ಮತ್ತು ಡಯಾಬಿಟಿಸ್ ಸಮಸ್ಯೆ ಇದ್ದು, ಕಣ್ಣುಗಳು ಮಂಜಾಗಿವೆ. ಪಿ.ರಾಜಗೋಪಾಲ್ ಅವರು ಪ್ರಸ್ತುತ ಸ್ಟಾನ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications