'ವಿಶ್ರಾಂತಿಗೆ ನಮ್ಮ ಮನೆಗೆ ಬನ್ನಿ', ಕರುಣಾನಿಧಿಗೆ ಮೋದಿ ಆಹ್ವಾನ

Subscribe to Oneindia Kannada

ಚೆನ್ನೈ, ನವೆಂಬರ್ 6: ಇಂದು ಪ್ರಧಾನಿ ನರೇಂದ್ರ ಮೋದಿ ಚೆನ್ನೈನಲ್ಲಿರುವ ತಮಿಳುನಾಡಿನ ಮೇರು ರಾಜಕಾರಣಿ, ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ನಿವಾಸಕ್ಕೆ ಭೇಟಿ ನೀಡಿದರು. ಭೇಟಿ ವೇಳೆ ಪ್ರಧಾನಿ ಮೋದಿ ತಮ್ಮ ದೆಹಲಿ ನಿವಾಸಕ್ಕೆ ಆಗಮಿಸಿ ಒಂದಷ್ಟು ವಿಶ್ರಾಂತಿ ಪಡೆಯುವಂತೆ ಕರುಣಾನಿಧಿಯವರಿಗೆ ಆಹ್ವಾನ ನೀಡಿದ್ದಾರೆ.

ಭಾರತದಲ್ಲಿ ರಾಜಕೀಯ ಬಿಟ್ಟು ಇನ್ನೂ ಬೇಕಾದಷ್ಟಿದೆ : ಮೋದಿ

ದಿನತಂತಿ ಪತ್ರಿಕೆಯ 75ನೇ ವರ್ಷಾಚರಣೆಯಲ್ಲಿ ಪಾಲ್ಗೊಳ್ಳಲು ಚೆನ್ನೈಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಕರುಣಾನಿಧಿ ನಿವಾಸಕ್ಕೆ ತೆರಳಿದರು.

ಕರುಣಾನಿಧಿ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿಯವರನ್ನು ಮನೆಯ ದ್ವಾರದ ಬಳಿ ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟಾಲಿನ್ ಸ್ವಾಗತಿಸಿದರು. ನಂತರ ಮನೆ ಒಳಗೆ ಹೋಗಿ ಕರುಣಾನಿಧಿಯವರ ಕೈಕುಲುಕಿ ಮೋದಿ ಆರೋಗ್ಯ ವಿಚಾರಿಸಿದರು. ಭೇಟಿ ವೇಳೆ ಮಗಳು ಹಾಗೂ ಮಾಜಿ ಕೇಂದ್ರ ಸಚಿವೆ ಕನ್ನಿಮೋಳಿ, ರಾಜ್ಯಪಾಲರು ಹಾಜರಿದ್ದರು.

20 ನಿಮಿಷಗಳ ಭೇಟಿ

ಕರುಣಾನಿಧಿಯವರ ಜತೆ ಪ್ರಧಾನಿ ಮೋದಿ ಸುಮಾರು 20 ನಿಮಿಷಗಳ ಮಾತುಕತೆ ನಡೆಸಿದರು. ಇದೊಂದು ಸೌಜನ್ಯದ ಭೇಟಿ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ. ಮಾತುಕತೆಯ ವಿವರಗಳು ತಿಳಿದು ಬಂದಲ್ಲ.

ನಂತರ ಪ್ರಧಾನಿ ಹಾಗೂ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ ಸ್ಟಾಲಿನ್ ಮನೆಯಿಂದ ಜತೆಯಾಗಿ ಹೊರಗೆ ಬಂದು ನೆರೆದವರತ್ತ ಕೈಬೀಸಿದರು. ಬಳಿಕ ಕರುಣಾನಿಧಿ ನಿವಾಸದಿಂದ ಪ್ರಧಾನಿ ನಿರ್ಗಮಿಸಿದ್ದಾರೆ.

ದೆಹಲಿಗೆ ಆಹ್ವಾನಿಸಿದ ಮೋದಿ

ದೆಹಲಿಗೆ ಆಹ್ವಾನಿಸಿದ ಮೋದಿ

ಭೇಟಿ ವೇಳೆ ಪ್ರಧಾನಿ ಮೋದಿ ಕರುಣಾನಿಧಿಯವರಿಗೆ ದೆಹಲಿಗೆ ಬಂದು ತಮ್ಮ ನಿವಾಸದಲ್ಲಿ ಒಂದಷ್ಟು ಸಮಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಡಿಎಂಕೆ ಕಾರ್ಯಕರ್ತರು ಪ್ರಧಾನಿಯವರ ಮೇಲೆ ಆಗಾಗ ಕೆಂಡಕಾರುತ್ತಿದ್ದರೂ ಮೋದಿ ಸೌಜನ್ಯದಿಂದ 93 ವರ್ಷದ ಕರುಣಾನಿಧಿಯವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಾರೆ.

ಕರುಣಾನಿಧಿ ಕುಟುಂಬದಿಂದ ಆಹ್ವಾನ

ಕರುಣಾನಿಧಿ ಕುಟುಂಬದಿಂದ ಆಹ್ವಾನ

ಕರುಣಾನಿಧಿಯವರನ್ನು ಭೇಟಿಯಾಗುವಂತೆ ಸ್ವತಃ ಅವರ ಕುಟುಂಬಸ್ಥರೇ ಪ್ರಧಾನಿಯವರನ್ನು ಆಹ್ವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಭೇಟಿ ಸಮಯ ನಿಗದಿಯಾಗಿದ್ದ ಸಂದರ್ಭ ಸ್ಟಾಲಿನ್ ವಿದೇಶದಲ್ಲಿದ್ದರು ಎಂದು ಗೊತ್ತಾಗಿದೆ. ಪ್ರಧಾನಿ ಬರುತ್ತಿರುವುದು ಗೊತ್ತಾಗಿ ಸ್ಟಾಲಿನ್ ಚೆನ್ನೈಗೆ ವಾಪಾಸಾಗಿದ್ದರು.

ಪ್ರಧಾನಿ ಮೋದಿ ತಮಿಳುನಾಡಿನ ಎಐಎಡಿಎಂಕೆ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ಗೊತ್ತಿರದ ವಿಷಯವೇನಲ್ಲ. ಹೀಗಿದ್ದೂ ಉಭಯ ನಾಯಕರು ಭೇಟಿಯಾಗಿದ್ದಾರೆ.

2ಜಿ ಪ್ರಕರಣದ ತೀರ್ಪು ಮತ್ತು ಭೇಟಿ

2ಜಿ ಪ್ರಕರಣದ ತೀರ್ಪು ಮತ್ತು ಭೇಟಿ

ಇನ್ನೇನು 2ಜಿ ಹಗರಣದ ತೀರ್ಪು ಹೊರ ಬೀಳಲಿದೆ. ಇದರಲ್ಲಿ ಕರುಣಾನಿಧಿ ಪುತ್ರಿ ಕನ್ನಿಮೋಳಿಯೂ ಆರೋಪಿಯಾಗಿದ್ದಾರೆ. ಈ ಹಿನ್ನಲೆಯಲ್ಲಿಯೂ ಭೇಟಿಯನ್ನು ಕುತೂಹಲದಿಂದ ನೋಡಲಾಗುತ್ತಿದೆ.

ದಿನತಂತಿ ಕಾರ್ಯಕ್ರಮದಲ್ಲಿ ಮೋದಿ

ದಿನತಂತಿ ಕಾರ್ಯಕ್ರಮದಲ್ಲಿ ಮೋದಿ

ಚೆನ್ನೈನಲ್ಲಿ ದಿನತಂತಿ ಪತ್ರಿಕೆಯ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹಾಗೂ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಚೆನ್ನೈಗೆ ಆಗಮಿಸಿದ್ದರು. ದಿನತಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕರುಣಾನಿಧಿ ನಿವಾಸಕ್ಕೆ ತೆರಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
PM Narendra Modi met former Tamil Nadu CM M Karunanidhi at his residence in Chennai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ