ಭಾರತದಲ್ಲಿ ರಾಜಕೀಯ ಬಿಟ್ಟು ಇನ್ನೂ ಬೇಕಾದಷ್ಟಿದೆ : ಮೋದಿ

Posted By: Gururaj
Subscribe to Oneindia Kannada

ಚೆನ್ನೈ, ನವೆಂಬರ್ 6 : 'ಇಂದು ದಿನಪತ್ರಿಕೆಗಳು ಕೇವಲ ಸುದ್ದಿಯನ್ನು ಮಾತ್ರ ನೀಡುತ್ತಿಲ್ಲ. ನಮ್ಮ ಚಿಂತನೆಯನ್ನು ವಿಸ್ತರಿಸುತ್ತಿವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ ಪ್ರವಾಸದಲ್ಲಿದ್ದಾರೆ. ದಿನತಂತಿ ಪತ್ರಿಕೆಯ 70ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Modi addresses platinum anniversary celebration of Dina Thanthi

ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 'ಮಾಧ್ಯಮಗಳು ಸಮಾಜವನ್ನು ಪರಿವರ್ತನೆ ಮಾಡುತ್ತವೆ. ಆದ್ದರಿಂದ, ಅವುಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ' ಎಂದು ಹೇಳುತ್ತೇವೆ ಎಂದರು.

'ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಮಾಧ್ಯಮಗಳು ಉಳಿಸಿಕೊಳ್ಳಬೇಕು. ಮಾಧ್ಯಮ ಸಂಸ್ಥೆಗಳ ನಡುವಿನ ಆರೋಗ್ಯಕರ ಸ್ಪರ್ಧೆ ಪ್ರಜಾಪ್ರಭುತ್ವಕ್ಕೆ ಉತ್ತಮವಾದದ್ದು' ಎಂದು ಹೇಳಿದರು.

ಮೋದಿ ಭಾಷಣದ ಮುಖ್ಯಾಂಶಗಳು

* ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂದು ಮಹಾತ್ಮಾ ಗಾಂಧಿ ಹೇಳಿದ್ದಾರೆ. ನಿಜವಾಗಿಯೂ ಅದು ಶಕ್ತಿಶಾಲಿಯಾದದ್ದು. ಆದರೆ, ಆ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳುವುದು ಅಪರಾಧ

* ಇಂದು ಬಹಳಷ್ಟು ಮಾಧ್ಯಮ ಸಂಸ್ಥೆಗಳು ರಾಜಕೀಯದ ಸುತ್ತ ಸುತ್ತುತ್ತಿವೆ. ಭಾರತ ಕೇವಲ ರಾಜಕಾರಣಕ್ಕೆ ಸೀಮಿತವಾಗಿಲ್ಲ

* 125 ಕೋಟಿ ಜನರನ್ನು ಸೇರಿಸಿ ಭಾರತ ನಿರ್ಮಾಣವಾಗಿದೆ. ಜನರ ಸಾಧನೆಗಳ ಬಗ್ಗೆ ಮಾಧ್ಯಮಗಳು ಗಮನ ಕೇಂದ್ರಿಕರಿಸಿದರೆ ಸಂತಸವಾಗುತ್ತದೆ

* ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟವಾಗುವ ಪ್ರತಿಕೆಗಳ ಮಹತ್ವ ಹಿಂದಿಗಿಂತಲೂ ಈಗ ಹೆಚ್ಚಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister of Narendra Modi in Chennai, Tamil Nadu. Modi addresses platinum anniversary celebration of Dina Thanthi.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ