ಶಶಿಕಲಾರಿಂದ ಕೋಟಿ ಕೋಟಿ ರು. ಆಫರ್: ಪನ್ನೀರ್ ಆಪ್ತನ ಆರೋಪ
ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನಲ್ಲಿ ಅಧಿಕಾರಕ್ಕಾಗಿ ಎಐಎಡಿಎಂಕೆಯ ಶಶಿಕಲಾ, ಪನ್ನೀರ್ ಸೆಲ್ವಂ ಬಣಗಳ ನಡುವೆ ತಿಕ್ಕಾಟ ಆರಂಭವಾಗಿದ್ದಾಗ ತಮಗೆ ಕೋಟಿಗಟ್ಟಲೆ ಹಣದ ಆಮಿಷ ತೋರಿಸಲಾಗಿತ್ತು ಎಂದು ಎಐಎಡಿಎಂಕೆ ಶಾಸಕ ಸರವಣ.
ಚೆನ್ನೈ, ಜೂನ್ 13: ಎಐಎಡಿಎಂಕೆ ನಾಯಕಿ ಶಶಿಕಲಾ ಅವರಿಂದ ತಮಗೆ ಕೋಟಿ ಕೋಟಿ ರು.ಗಳ ಆಫರ್ ಬಂದಿತ್ತು ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರ ಆಪ್ತ ಹಾಗೂ ಶಾಸಕ ಎಸ್ಎಸ್ ಸರವಣ ಅವರು ಆರೋಪಿಸಿದ್ದಾರೆ.
ತಮಿಳುನಾಡಿನಲ್ಲಿ ಅಧಿಕಾರ ಗದ್ದುಗೆಗಾಗಿ ಆಡಳಿತಾರೂಢ ಎಐಎಡಿಎಂಕೆಯ ಎರಡು ಬಣಗಳ ನಡುವೆ ಕೆಲವು ತಿಂಗಳುಗಳ ಹಿಂದೆ ನಡೆದ ಹಗ್ಗ ಜಗ್ಗಾಟದ ಸಂದರ್ಭದಲ್ಲಿ ಶಶಿಕಲಾ ಬಣವು ಪನ್ನೀರ್ ಸೆಲ್ವಂ ಅವರ ಬಣದಲ್ಲಿದ್ದ ಶಾಸಕರನ್ನು ಸೆಳೆಯಲು ಪ್ರಯತ್ನಿಸಿದ್ದರು. ಆಗ, ತಮಗೆ ಕೋಟ್ಯಾನುಕೋಟಿ ರು.ಗಳ ಆಮಿಷವನ್ನು ಒಡ್ಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಈ ಆರೋಪಕ್ಕೆ ಸ್ಪಂದಿಸಿರುವ ಮಾಜಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ, ಈ ಬಗ್ಗೆ ಸಾಕ್ಷ್ಯಾಧಾರಗಳನ್ನು ನೀಡುವಂತೆ ಸರವಣ ಅವರನ್ನು ಆಗ್ರಹಿಸಿದ್ದಾರೆ.












Click it and Unblock the Notifications