ತಮಿಳುನಾಡು ಬಂದ್ ಎಫೆಕ್ಟ್: ಬಸ್ ಇಲ್ಲ, ತರಕಾರಿ ದುಬಾರಿ
ಚೆನ್ನೈ, ಮಾ. 28: ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಯೋಜನೆಯನ್ನು ವಿರೋಧಿಸಿ ಕರೆಕೊಟ್ಟಿರುವ ತಮಿಳುನಾಡು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ತಮಿಳುನಾಡು, ಕರ್ನಾಟಕ ನಡುವಿನ ಬಸ್ ಸಂಚಾರ ಶನಿವಾರ ಬೆಳಗ್ಗೆಯಿಂದಲೇ ಸ್ಥಗಿತಗೊಂಡಿದೆ.
ತಾಂಜಾವೂರು ಸೇರಿದಂತೆ ಅನೇಕ ಕಡೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿದೆ. ಅಲ್ಲದೇ ಗಡಿ ಭಾಗದ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ['ಮೇಕೆದಾಟುವಿನಲ್ಲಿ ಕರ್ನಾಟಕ ಅಣೆಕಟ್ಟು ಕಟ್ಟಲು ಬಿಡೋಲ್ಲ']

ಬಂದ್ ನಿಟ್ಟಿನಲ್ಲಿ ಇಂದು ತಮಿಳುನಾಡಿನಿಂದ ಯಾವುದೇ ಬಸ್ ರಾಜ್ಯಕ್ಕೆ ಬಂದಿಲ್ಲ. ಕರ್ನಾಟಕದಿಂದಲೂ ಯಾವುದೇ ಬಸ್ ತಮಿಳುನಾಡಿಗೆ ಸಂಚರಿಸುವುದಿಲ್ಲ ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರತಿನಿತ್ಯ ಉಭಯ ರಾಜ್ಯಗಳ ನಡುವೆ 150 ಬಸ್ ಗಳು ಸಂಚರಿಸುತ್ತವೆ. ಆದರೆ ಬಂದ್ ಪ್ರಯಾಣಿಕರಿಗೆ ಮಾರಕವಾಗಿ ಪರಿಣಮಿಸಿದೆ. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್]
ಶನಿವಾರ ಸಂಜೆ 6 ಗಂಟೆ ನಂತರ ಪರಿಸ್ಥಿತಿಯನ್ನು ನೋಡಿಕೊಂಡು ಬಸ್ ಸಂಚಾರ ಪುನಾರಂಭ ಮಾಡಲಾಗುವುದು ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಬಂದ್ ಪರಿಣಾಮ ಬೆಂಗಳೂರಿಗೂ ತಟ್ಟಿದ್ದು ತರಕಾರಿ ಮತ್ತು ಹೂವಿನ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. [ಮೇಕೆದಾಟು ಯೋಜನೆಗೆ ಮತ್ತೆ ತಮಿಳುನಾಡು ಅಡ್ಡಗಾಲು]

ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ತಮಿಳುನಾಡಿನ ರೈತ ಪರ ಸಂಘಟನೆಳು ಕರೆ ನೀಡಿರುವ ಬಂದ್ ಗೆ ಎಐಎಡಿಎಂಕೆ, ಕಾಂಗ್ರೆಸ್ ಸೇರಿ ವಿವಿಧ ಪಕ್ಷಗಳು ಬೆಂಬಲ ಸೂಚಿಸಿವೆ.












Click it and Unblock the Notifications