ಆತ್ಮಹತ್ಯೆಗೆ ಯತ್ನಿಸಿದವನು ಬದುಕಿದ, ಅಕೆ ಸತ್ತುಹೋದಳು

Posted By:
Subscribe to Oneindia Kannada

ಚೆನ್ನೈ, ಆಗಸ್ಟ್ 30: ದುರದೃಷ್ಟ ಹೇಗಿರುತ್ತದೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಅತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ವೃದ್ಧ ಮಹಿಳೆ ಮೇಲೆ ಬಿದ್ದು ಆಕೆ ಮೃತಪಟ್ಟರೆ, ಆತ್ಮಹತ್ಯೆಗೆ ಯತ್ನಿಸಿದವನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಘಟನೆ ನಡೆದಿದ್ದು ಚೆನ್ನೈನ ಅಶೋಕ ನಗರ್ ನಲ್ಲಿ. ಮೂರಂತಸ್ತಿನ ಕಟ್ಟಡದ ಮೇಲಿಂದ ಹಾರಿದ ವ್ಯಕ್ತಿ, ಮನೆಯ ಹೊರಗೆ ಮಲಗಿದ್ದ 70 ವರ್ಷದ ವೃದ್ಧೆಯ ಮೇಲೆ ಬಿದ್ದು, ಆಕೆ ಪ್ರಾಣ ಬಿಟ್ಟಿದ್ದಾರೆ.

ಸೆಲ್ವಂ ಆಟೋರಿಕ್ಷಾ ಡ್ರೈವರ್. ಹೆಂಡತಿ ಜತೆಗೆ ಜಗಳವಾಡಿ, ಆತ್ಮಹತ್ಯೆ ಮಾಡಿಕೊಳ್ಳೋಣ ಅಂತ ಕಟ್ಟಡದ ಮೇಲಿಂದ ಜಿಗಿದಿದ್ದಾನೆ. ಆದರೆ ಮನೆ ಹೊರಗೆ ತಮ್ಮಷ್ಟಕ್ಕೆ ಮಲಗಿದ್ದ ಶಾರದಾ ಅವರ ಮೇಲೆ ಬಿದ್ದಿದ್ದಾನೆ. ಆಕೆಯ ಕೂಗಾಟ, ಅಳು ಕೇಳಿದ ಅಕ್ಕಪಕ್ಕದವರು ಬಂದು ನೋಡಿದರೆ, ಇಬ್ಬರ ಸ್ಥಿತಿಯೂ ಗಂಭೀರವಾಗಿತ್ತು. ತಕ್ಷಣವೇ ಆಸ್ಪತ್ರೆಗೆ ಸಾಗಿಸಿದ್ದಾರೆ.[ಆ 30: ಕರ್ನಾಟಕ-ತಮಿಳುನಾಡು ನಡುವೆ ಬಸ್ ಸಂಚಾರ ಸ್ಥಗಿತ]

Man Attempting Suicide Falls On Her, She died

ತಲೆಗೆ, ಕಾಲಿಗೆ ಗಂಭೀರವಾಗಿ ಗಾಯವಾದ ಸೆಲ್ವಂಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಶಾರದಾ ಅವರು ಮೃತಪಟ್ಟಿದ್ದಾರೆ. ಕುಮಾರನ್ ನಗರ್ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
a 70-year-old woman was killed in Chennai when a man attempting suicide jumped off the terrace of a third-storey building and fell on her accidentally.
Please Wait while comments are loading...