• search
  • Live TV
ಚೆನ್ನೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅವಹೇಳನಾಕಾರಿ ವಿಡಿಯೋ: ನಿವೃತ್ತ ನ್ಯಾಯಮೂರ್ತಿ ಕರ್ಣನ್‌ಗೆ ಷರತ್ತುಬದ್ಧ ಜಾಮೀನು

|

ಚೆನ್ನೈ, ಮಾರ್ಚ್ 23: ನ್ಯಾಯಾಧೀಶರು ಮತ್ತು ಮಹಿಳೆಯರ ಕುರಿತು ಅವಹೇಳನಾಕಾರಿ ಹೇಳಿಕೆಗಳ ವಿಡಿಯೊ ಬಿಡುಗಡೆ ಮಾಡಿದ್ದಕ್ಕಾಗಿ ಬಂಧನಕ್ಕೆ ಒಳಗಾಗಿದ್ದ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಅವರಿಗೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ.

ನ್ಯಾ. ಕರ್ಣನ್ ಅವರು ಸಲ್ಲಿಸಿದ್ದ ಎರಡನೆಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಅವರಿಗೆ ಜಾಮೀನು ಮಂಜೂರು ಮಾಡಿತು. ತಮ್ಮನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅವರು ಕಳೆದ ತಿಂಗಳು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿತ್ತು.

ಮದ್ರಾಸ್ ಹೈಕೋರ್ಟ್ ನಿವೃತ್ತ ಜಡ್ಜ್ ಸಿಎಸ್ ಕರ್ಣನ್ ಬಂಧನ

50,000 ರೂ ವೈಯಕ್ತಿಕ ಬಾಂಡ್ ಮತ್ತು ಎರಡು ಶ್ಯೂರಿಟಿಗಳ ಷರತ್ತಿನೊಂದಿಗೆ ನ್ಯಾಯಮೂರ್ತಿ ವಿ. ಭಾರತಿದಾಸನ್ ಜಾಮೀನು ನೀಡಿದರು. ನ್ಯಾಯಮೂರ್ತಿಗಳು, ಅವರ ಕುಟುಂಬದವರು, ಸಿಬ್ಬಂದಿ, ವಕೀಲರು, ನ್ಯಾಯಾಂಗ ಮತ್ತು ಇತರರ ವಿರುದ್ಧ ಹೇಳಿಕೆಗಳನ್ನು ನೀಡಬಾರದು ಹಾಗೂ ಯಾವುದೇ ದೂರುಗಳನ್ನು ನೀಡುವುದರಿಂದ ಅಥವಾ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಪ್ರಕಟಿಸುವುದರಿಂದ ದೂರ ಇರಬೇಕು ಎಂದು ಸಹ ಅವರಿಗೆ ಷರತ್ತು ವಿಧಿಸಲಾಗಿದೆ.

ಅಗತ್ಯವಿದ್ದ ಸಂದರ್ಭಗಳಲ್ಲಿ ತನಿಖಾ ಸಂಸ್ಥೆ ಮುಂದೆ ಹಾಜರಾಗಿ ತನಿಖೆಗೆ ಸಹಕರಿಸಬೇಕು ಎಂದು ನ್ಯಾಯಾಲಯವು ಕರ್ಣನ್ ಅವರಿಗೆ ಸೂಚನೆ ನೀಡಿದೆ.

ನ್ಯಾ. ಸಿಎಸ್ ಕರ್ಣನ್ ಅವರು ತಮ್ಮ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಬೆದರಿಸಲು ತಮ್ಮ ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತನಿಖಾಧಿಕಾರಿಗಳು, ಪ್ರಕರಣದ ವಿಚಾರಣೆ ಮಾಡುತ್ತಿರುವ ನ್ಯಾಯಮೂರ್ತಿಗಳ ವಿರುದ್ಧ ಕರ್ಣನ್ ಮಾಡಿರುವ ಯಾವುದೇ ದೂರನ್ನು ಪರಿಗಣಿಸದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಆಯೋಗ ಹಾಗೂ ತಮಿಳುನಾಡು ರಾಜ್ಯ ಮಾನವಹಕ್ಕುಗಳ ಆಯೋಗಗಳನ್ನು ನಿರ್ಬಂಧಿಸಿ ಮದ್ರಾಸ್ ಹೈಕೋರ್ಟ್ ಸೋಮವಾರ ಮಧ್ಯಂತರ ಆದೇಶ ಹೊರಡಿಸಿತ್ತು.

English summary
Madras High Court granted a conditional bail to Justice CS Karnan, who was arrested for making derogatory remarks against judges and women.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X