ಶಾಸ್ತ್ರೀಯ ಸಂಗೀತಗಾರ ಎಂ ಬಾಲಮುರಳಿಕೃಷ್ಣ ವಿಧಿವಶ

Posted By:
Subscribe to Oneindia Kannada

ಚೆನ್ನೈ, ನವೆಂಬರ್ 22: ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಗಾಯಕ, ವಾಗ್ಗೇಯಕಾರ, ಡಾ. ಮಂಗಳಂಪಲ್ಲಿ ಬಾಲಮುರಳಿ ಕೃಷ್ಣ ಅವರು ಮಂಗಳವಾರ ವಿಧಿವಶರಾಗಿದ್ದಾರೆ. ಚೆನ್ನೈನ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಾಲಮುರಳಿಕೃಷ್ಣ ಅವರು ತಮ್ಮ ಗಾನಸುಧೆ ಹರಿಸಿದ್ದರು. ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಶಂಕರಗುಪ್ತಮ್ ನವರು.

Renowned Carnatic Vocalist M Balamuralikrishna passes away

ಹೊಸ ರಾಗಗಳನ್ನು ರಚಿಸುವ ಮೂಲಕ ಸಂಗೀತ ವಿದ್ವಾನ್ ಎನಿಸಿಕೊಂಡ ಬಾಲಮುರಳಿ ಕೃಷ್ಣ ಅವರು ದೇಶ ವಿದೇಶಗಳಲ್ಲಿ ಸುಮಾರು 20ಸಾವಿರಕ್ಕೂ ಸಂಗೀತ ಕಚೇರಿಗಳನ್ನು ನೀಡಿ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶಾಸ್ತ್ರೀಯ ಗಾಯನವಲ್ಲದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಚಲನಚಿತ್ರಗಳಲ್ಲೂ ಹಾಡಿದ್ದಾರೆ. ಸಂಗೀತಗಾರರಾಗಿ ಪಿಟೀಲು ವಾದನ, ಖಂಜಿರ, ಮೃದಂಗ ಬಾರಿಸುತ್ತಿದ್ದರು.

ಕನ್ನಡದಲ್ಲಿ ಸಂಧ್ಯಾರಾಗ, ಹಂಸಗೀತೆ, ಸುಬ್ಬಾಶಾಸ್ತ್ರಿ, ಮುತ್ತಿನಹಾರ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ. ಇವರ ಗಾಯನ, ಸಂಗೀತ ಸೇವೆಯನ್ನು ಮೆಚ್ಚಿ ಭಾರತ ಸರ್ಕಾರದಿಂದ ಇವರಿಗೆ ಪದ್ಮಭೂಷಣ, ಪದ್ಮವಿಭೂಷಣ, ಕನ್ನಡ ಚಿತ್ರ ಹಂಸಗೀತೆಗಾಗಿ ಶ್ರೇಷ್ಠ ಹಿನ್ನಲೆ ಗಾಯಕ ಪ್ರಶಸ್ತಿ ಲಭಿಸಿದೆ. ಉಳಿದಂತೆ ಕಾಳಿದಾಸ್ ಸನ್ಮಾನ್, ಸಂಗೀತ ಕಲಾನಿಧಿ, ಆಂಧ್ರ ವಿವಿಯಿಂದ ಗೌರವ ಡಿ ಲಿಟ್, ವಿಸ್ಡಮ್ ಮ್ಯಾನ್ ಆಫ್ ದ ಇಯರ್ ಪ್ರಶಸ್ತಿ ಬಂದಿದೆ. ತಿರುಪತಿ ತಿರುಮಲದೇವಸ್ಥಾನ, ಶೃಂಗೇರಿ ಪೀಠ, ಮತ್ತು ನಂಜನಲ್ಲೂರಿನ ಆಂಜನೇಯಸ್ವಾಮಿ ದೇವಸ್ಥಾನದ ಆಸ್ಥಾನ ವಿದ್ವಾನ್ ಪಟ್ಟಕ್ಕೆ ಪಾತ್ರರಾದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Legendary carnatic singer Balamuralikrishna passed away in Chennai on Tuesday. He was 86. The renowned singer was conferred with Padma shree, padma vibhushan and padma bhushan by the Indian government for his contribution to Indian art.
Please Wait while comments are loading...