ಲತಾ ರಜನಿಕಾಂತ್ ಒಡೆತನದ ಶಾಲೆ ಬಂದ್

Posted By:
Subscribe to Oneindia Kannada

ಚೆನ್ನೈ, ಆಗಸ್ಟ್ 16: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಲತಾ ಅವರ ಒಡೆತನದ ಆಶ್ರಮ ಶಾಲೆಗಳು ಮತ್ತೆ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿವೆ. ಆಶ್ರಮ ಶಾಲೆಗೆ ಬೀಗ ಮುದ್ರೆ ಹಾಕಲಾಗಿದೆ ಎಂಬ ಸುದ್ದಿ ಬಂದಿದೆ.

ಕಟ್ಟಡದ ಬಾಡಿಗೆದಾರರು ಸರಿಯಾಗಿ ಬಾಡಿಗೆ ಕಟ್ಟದ ಕಾರಣ ಪಾಲಿಕೆಯವರು ಶಾಲೆಗೆ ಬೀಗ ಹಾಕಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ವರದಿಯನ್ನು ಶಾಲಾ ಮಂಡಳಿ ಅಲ್ಲಗೆಳೆದಿದೆ.

ಸಮಾರು 10 ಕೋಟಿ ರು ಗೂ ಅಧಿಕ ಬಾಡಿಗೆ ಮೊತ್ತ ಬಾಕಿ ಉಳಿಸಿಕೊಂಡಿದ್ದರಿಂದ ಶಾಲೆಗೆ ಬೀಗ ಬಿದ್ದಿದೆ. ಗಿಂಡಿ ಪ್ರದೇಶದಲ್ಲಿರುವ ಶಾಲೆಯ ವಿದ್ಯಾರ್ಥಿಗಳನ್ನು ವೆಲಚ್ಚೆರಿ ವಲಯದಲ್ಲಿರುವ ಮತ್ತೊಂದು ಶಾಲೆಗೆ ವರ್ಗಾಯಿಸಲಾಗಿದೆ.

Latha Rajinikanth

ಕಳೆದ ಡಿಸೆಂಬರ್ ನಲ್ಲಿ ಈ ಶಾಲೆಯ ಶಿಕ್ಷಕ ವರ್ಗದವರು ಸಂಬಳ ಸಿಗುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೂ ಮುನ್ನ ಶಾಲಾ ವಾಹನ ಚಾಲಕರು ಪ್ರತಿಭಟನೆ ಮಾಡಿದ್ದರು.

ಆಶ್ರಮ ಸಮೂಹ ವಿದ್ಯಾಸಂಸ್ಥೆ ಅಲ್ಲದೆ ಶಿಶುವಿಹಾರ ಮಾದರಿಯಲ್ಲಿ ಆನಂದವನ ಎಂಬ ಶಾಲೆಯನ್ನು ಲತಾ ಅವರು ನಡೆಸುತ್ತಿದ್ದಾರೆ. 1996ರಿಂದ ಶಿಕ್ಷಣ ಕ್ಷೇತ್ರದಲ್ಲಿರುವ ಲತಾ ಅವರಿಗೆ 2011ರಲ್ಲಿ ಭೂ ಕಬಳಿಕೆ ಆರೋಪದ ಮೇಲೆ ಶಾಲಾ ಕಟ್ಟಡ ಮಾಲೀಕರೊಬ್ಬರು ನೋಟಿಸ್ ಜಾರಿ ಮಾಡಿದ್ದರು. ನಂತರ ಮೆಟ್ರಿಕ್ಯುಲೇಷನ್ ಶಾಲೆಯ ನಿಯಮ ಪಾಲಿಸದೆ ನವೀಕರಣಕ್ಕೆ ಮುಂದಾಗಿದ್ದಕ್ಕೆ ಆಕ್ಷೇಪಿಸಿ ಸಿವಿಲ್ ಕೇಸ್ ಹಾಕಲಾಗಿತ್ತು.

2008ರಲ್ಲಿ 4.52 ಲಕ್ಷ ರು ಪ್ರತಿ ತಿಂಗಳಿಗೆ ಎಂಬ ದರದಂತೆ 30 ವರ್ಷಕ್ಕೆ ಬೋಗ್ಯಕ್ಕೆ ಒಪ್ಪಂದ ಮಾಡಿಕೊಂಡಿದ್ದ ವೆಂಕಟೇಶ್ವರಲು ಅವರು ಬಾಡಿಗೆ ಸಿಗದ ಕಾರಣ ಕಟ್ಟಡವನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Latha Rajinikanth, the wife of superstar Rajini and well known educationist for years now in trouble. Ashram School and new venture Anandavana is facing financial crunch and forced to shut down. But, School authorities denied the reports.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X