ವೈರಲ್ ಫೋಟೋ; ಕೇಶ ವಿನ್ಯಾಸದಿಂದಲೇ ಎಲ್ಲರ ಗಮನ ಸೆಳೆದ ಆನೆ!

ಚೆನ್ನೈ, ಜುಲೈ 07 : ಕೇರಳದ ಆನೆಯೊಂದರ ಹತ್ಯೆ ಪ್ರಕರಣದ ಇಂಟರ್‌ನೆಟ್‌ನಲ್ಲಿ ಸಂಚಲನಕ್ಕೆ ಕಾರಣವಾಗಿತ್ತು. ಈಗ ತಮಿಳುನಾಡಿನ ಆನೆಯೊಂದು ವಿಶೇಷ ಕಾರಣಕ್ಕೆ ಸುದ್ದಿಯಲ್ಲಿದೆ. ಎರಡು ದಿನದಿಂದ ಆನೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತಿರುವರೂರ್ ಜಿಲ್ಲೆಯ ಮನ್ನಾರ್ಗುಡಿಯ ಶ್ರೀ ವಿದ್ಯಾ ರಾಜಗೋಪಾಲ ಸ್ವಾಮಿ ದೇವಾಲಯದ ಆನೆಯ ಚಿತ್ರ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. 'ಬಾಬ್ ಕಟ್ ಸೆಂಗಮಲಮ್' ಎಂದೇ ಈ ಹೆಣ್ಣಾನೆಗೆ ಹೆಸರು ಇಡಲಾಗಿದೆ.

ಐಎಫ್‌ಎಸ್ ಅಧಿಕಾರಿ ಸುಧಾ ರಮೆನ್ ಮೊದಲ ಬಾರಿಗೆ ಈ ಹೆಣ್ಣು ಆನೆಯ ಚಿತ್ರವನ್ನು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ ಈಗ 30.2 ಸಾವಿರ ಲೈಕ್‌ಗಳನ್ನು ಪಡೆದಿದೆ. 5 ಸಾವಿರ ಜನರು ಇದನ್ನು ರೀ ಟ್ವೀಟ್ ಮಾಡಿದ್ದಾರೆ.

Latest Internet Sensation Bob Cut Sengamalam Elephant

ಎಸ್. ರಾಜಗೋಪಾಲ್ ಎನ್ನುವ ಮಾವುತ ಈ ಆನೆಯನ್ನು ನೋಡಿಕೊಳ್ಳುತ್ತಿದ್ದಾರೆ. ತನ್ನ ವಿಶೇಷ ಬಾಬ್ ಕಟ್ ಕೇಶ ವಿನ್ಯಾಸದಿಂದಲೇ ಈ ಆನೆ ಜನರ ಗಮನ ಸೆಳೆಯುತ್ತಿದೆ. "ಇದು ಮಗುವಿನಂತೆ ನೋಡಿಕೊಳ್ಳುವುದು ಅಷ್ಟು ಸುಲಭವಲ್ಲ" ಎಂದು ಮಾವುತ ಹೇಳಿದ್ದಾರೆ.

ವಾರಕ್ಕೆ ಮೂರು ಬಾರಿ ಶಾಂಪು ಹಾಕಿ ಆನೆಗೆ ಸ್ನಾನ ಮಾಡಿಸಲಾಗುತ್ತದೆ. ಬೇಸಿಗೆ ಕಾಲದಲ್ಲಿ ಆನೆಗೆ ಸ್ನಾನ ಮಾಡಿಸಲು ಸುಮಾರು 45 ಸಾವಿರ ರೂ. ಖರ್ಚು ಮಾಡಿ ಶವರ್ ವ್ಯವಸ್ಥೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+