ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿ ಆರೋಗ್ಯದಲ್ಲಿ ಸುಧಾರಣೆ, ಶೀಘ್ರವೇ ಆಸ್ಪತ್ರೆಯಿಂದ ಮನೆಗೆ!

By Mahesh
|
Google Oneindia Kannada News

ಚೆನ್ನೈ, ಡಿಸೆಂಬರ್ 19: ಶ್ವಾಸಕೋಶದ ಸೋಂಕಿಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೊಳಪಟ್ಟಿರುವ ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರು ಶೀಘ್ರವೇ ಆಸ್ಪತ್ರೆಯಿಂದ ಮನೆಗೆ ಬರಲಿದ್ದಾರೆ ಎಂದು ಡಿಎಂಕೆ ಖಜಾಂಚಿ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಈ ಮೂಲಕ ಕರುಣಾನಿಧಿ ಅನಾರೋಗ್ಯದ ಬಗ್ಗೆ ಹಬ್ಬಿದ್ದ ಗಾಳಿಸುದ್ದಿಗಳಿಗೆ ಗುದ್ದು ನೀಡಿದ್ದಾರೆ.

ಚೆನ್ನೈನ ಕಾವೇರಿ ಆಸ್ಪತ್ರೆಯಲ್ಲಿ ಉಸಿರಾಟ ತೊಂದರೆ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ಡಾ. ಎಂ ಕರುಣಾನಿಧಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ. ಇನ್ನೆರಡು ಮೂರು ದಿನಗಳಲ್ಲಿ ಮನೆ ಸೇರಲಿದ್ದಾರೆ ಎಂದು ಡಿಎಂಕೆ ವಕ್ತಾರರು ಹೇಳಿದ್ದಾರೆ.

ಇತ್ತೀಚೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಚೆನ್ನೈನಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿ ಕರುಣಾನಿಧಿ ಅವರ ಆರೋಗ್ಯ ವಿಚಾರಿಸಿ, ಗುಣಮುಖರಾಗುವಂತೆ ಹಾರೈಸಿದ್ದರು.

Karunanidhi to be discharged in two days: Stalin

92ವರ್ಷ ವಯಸ್ಸಿನ ಕರುಣಾನಿಧಿ ಅವರು Tracheostomy ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿತ್ತು. ಈಗ ಕರುಣಾನಿಧಿ ಅವರು ಗುಣಮುಖರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. ಡಿಸೆಂಬರ್ 20ರಂದು ಡಿಎಂಕೆ ಸಭೆ ನಡೆಸಲಿದ್ದು, ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಲ
ಿದೆ.(ಒನ್ಇಂಡಿಯಾ ಸುದ್ದಿ)

English summary
Dravida Munnetra Kazhagam's treasurer M K Stalin on Monday said that Dr M Karunanidhi will be discharged in two days. Stalin said that the party chief's health had improved greatly and he is likely to return home in a couple of days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X