ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುಣಾನಿಧಿಯವರೇ ತಮ್ಮ ಮಗ ಸ್ಟಾಲಿನ್‌ನನ್ನು ನಂಬಲಿಲ್ಲ; ಪಳನಿಸ್ವಾಮಿ

|
Google Oneindia Kannada News

ಚೆನ್ನೈ, ಮಾರ್ಚ್ 22: "ಕರುಣಾನಿಧಿಯವರೇ ತಮ್ಮ ಮಗ ಸ್ಟಾಲಿನ್‌ನನ್ನು ನಂಬುತ್ತಿರಲಿಲ್ಲ" ಎಂದು ತಮಿಳುನಾಡು ಸಿ.ಎಂ. ಎಡಪ್ಪಾಡಿ ಪಳನಿಸ್ವಾಮಿ ಅವರು ಡಿಎಂಕೆ ಅಧ್ಯಕ್ಷ ಎಂ.ಕೆ ಸ್ಟಾಲಿನ್ ಅವರನ್ನು ಟೀಕಿಸಿದ್ದಾರೆ.

ತಿರುವಣ್ಣಮಲೈನಲ್ಲಿ ಭಾನುವಾರ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕರುಣಾನಿಧಿಯವರೇ ಸ್ವತಃ ತಮ್ಮ ಮಗ ಸ್ಟಾಲಿನ್ ಅವರನ್ನು ನಂಬುತ್ತಿರಲಿಲ್ಲ. ಅವರು ಸಾಯುವ ಎರಡು ವರ್ಷದ ಮುನ್ನ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆ ಸಂದರ್ಭದಲ್ಲಿಯೂ ಅವರ ಪಕ್ಷವನ್ನು ತಮ್ಮ ಮಗ ಸ್ಟಾಲಿನ್‌ಗೆ ನೀಡಲಿಲ್ಲ. ಹೀಗಿದ್ದಾಗ ಜನರು ಹೇಗೆ ಸ್ಟಾಲಿನ್ ಅವರನ್ನು ನಂಬಬೇಕು" ಎಂದು ಪ್ರಶ್ನಿಸಿದ್ದಾರೆ. ಮುಂದೆ ಓದಿ...

"ಮೋಸದಿಂದ ಕರುಣಾನಿಧಿ ಸಿಎಂ ಆದರು"

ಪಕ್ಷದ ಮುಖಂಡ ನೆಂದುಚೇಸಿಯನ್ ಅವರನ್ನು ಮೋಸಗೊಳಿಸುವ ಮೂಲಕ ದಿ.ಕರುಣಾನಿಧಿಯವರು ಸಿಎಂ ಆದರು ಎಂದು ಆರೋಪಿಸಿದ ಅವರು, ನಾನು ಅಂಥ ದಾರಿಯನ್ನು ಆಯ್ದುಕೊಂಡು ಬರಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ನನ್ನನ್ನು ಪಕ್ಷದ ಶಾಸಕರು ಚುನಾಯಿಸಿದ ನಂತರ ಪಕ್ಷಕ್ಕೆ ಬಂದೆ" ಎಂದು ಆರೋಪಿಸಿದರು.

ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್ಅಧಿಕಾರಕ್ಕೆ ಬಂದದ್ದೇ ಆದರೆ ಜಯಲಲಿತಾ ನಿಗೂಢ ಸಾವಿನ ಪ್ರಕರಣ ಬಗೆಹರಿಸುವೆ; ಸ್ಟಾಲಿನ್

"ಯಾವ ಅಧಿಕಾರಿಯನ್ನೂ ನಾನು ಬೆದರಿಸಿಲ್ಲ"

ಕಳೆದ ನಾಲ್ಕು ವರ್ಷದಿಂದ ನಾನು ಸಿಎಂ ಆಗಿದ್ದೇನೆ. ಯಾವೊಬ್ಬ ಅಧಿಕಾರಿಯನ್ನೂ ನಾನು ಬೆದರಿಸಿಲ್ಲ. ಆದರೆ ಸ್ಟಾಲಿನ್ ಹಾಗೂ ಅವರ ಮಗ ಉದಯನಿಧಿ ಸ್ಟಾಲಿನ್ ಅಧಿಕಾರಿಗಳಿಗೂ ಬೆದರಿಕೆ ಹಾಕುತ್ತಾರೆ ಎಂದು ದೂರಿದರು. ಯಾರಾದರೂ ಭಾಷಣ ಬರೆದುಕೊಟ್ಟರೆ, ಅದನ್ನು ಸ್ಟಾಲಿನ್ ಚೆನ್ನಾಗಿ ಉರು ಹೊಡೆಯುತ್ತಾರೆ ಎಂದು ಟೀಕಿಸಿದರು.

 2,726 ನಾಮಪತ್ರಗಳು ತಿರಸ್ಕೃತ

2,726 ನಾಮಪತ್ರಗಳು ತಿರಸ್ಕೃತ

ತಮಿಳುನಾಡು ಚುನಾವಣೆಗೆ ಪಳನಿಸ್ವಾಮಿ ಹಾಗೂ ಸ್ಟಾಲಿನ್ ಅವರ ನಾಮಪತ್ರ ಸಲ್ಲಿಕೆಯಾಗಿದ್ದು, ಅದನ್ನು ಸ್ವೀಕರಿಸಲಾಗಿದೆ. ಒಟ್ಟಾರೆ ಬಂದಿರುವ 7,255 ನಾಮಪತ್ರಗಳಲ್ಲಿ 4,526 ನಾಮಪತ್ರಗಳು ಸ್ವೀಕೃತವಾಗಿದ್ದು, 2,726 ನಾಮಪತ್ರಗಳು ತಿರಸ್ಕೃತಗೊಂಡಿವೆ. ಸೋಮವಾರ, ಮಾರ್ಚ್ 22 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಎಷ್ಟು ಮಂದಿ ವಿಧಾನಸಭೆ ಚುನಾವಣೆ ಸ್ಪರ್ಧೆಯಲ್ಲಿರುವರು ಎಂದು ಇಂದು ತಿಳಿದುಬರಲಿದೆ.

ಅಣ್ಣಾಮಲೈಗೆ ಆಘಾತ: ನಾಮಪತ್ರ ತಡೆ ಹಿಡಿದ ಚುನಾವಣಾ ಆಯೋಗಅಣ್ಣಾಮಲೈಗೆ ಆಘಾತ: ನಾಮಪತ್ರ ತಡೆ ಹಿಡಿದ ಚುನಾವಣಾ ಆಯೋಗ

 ತಮಿಳುನಾಡು ಚುನಾವಣೆ ವಿವರ...

ತಮಿಳುನಾಡು ಚುನಾವಣೆ ವಿವರ...

ರಾಜ್ಯದ 234 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನವನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ರಾಷ್ಟ್ರೀಯ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಅಖಾಡಕ್ಕೆ ಇಳಿದಿವೆ. ಎಐಎಡಿಎಂಕೆ-ಬಿಜೆಪಿ ಹಾಗೂ ಡಿಎಂಕೆ-ಕಾಂಗ್ರೆಸ್ ಮೈತ್ರಿಯ ಮೂಲಕ ಚುನಾವಣೆ ಎದುರಿಸಲು ಅಣಿಯಾಗಿವೆ.

English summary
Tamil Nadu Chief Minister Edappadi Palaniswami attacked DMK president MK Stalin saying that even his late father and former CM Karunanidhi did not believe in him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X