Breaking; ಗುಡ್ಡ ಕುಸಿತ, ಹಳಿ ತಪ್ಪಿದ ಯಶವಂತಪುರ-ಕಣ್ಣೂರು ರೈಲು

ಚೆನ್ನೈ, ನವೆಂಬರ್ 12; ಗುಡ್ಡ ಕುಸಿದ ಪರಿಣಾಮ ಕಣ್ಣೂರು-ಯಶವಂತಪುರ ನಡುವಿನ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಲವು ರೈಲುಗಳ ಮಾರ್ಗ ಬದಲಾವಣೆಯಾಗಿದೆ.

ಶುಕ್ರವಾರ ಮುಂಜಾನೆ 3.45ರ ಸುಮಾರಿಗೆ ತಮಿಳುನಾಡಿನ ಧರ್ಮಾವರಂ ಜಿಲ್ಲೆಯ ತೆಪ್ಪೊಡಿ-ಸಿವಾಡಿ ನಡುವಿನ ಪ್ರದೇಶದಲ್ಲಿ ಕಣ್ಣೂರು- ಯಶವಂತಪುರ (07390) ನಡುವಿನ ಎಕ್ಸ್‌ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿವೆ.

Kannur- Yeshwantpur Express Train Derailed

ರೈಲಿನಲ್ಲಿದ್ದ ಎಲ್ಲಾ 2,348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ರೈಲು ಹಳಿ ತಪ್ಪಿದ್ದು, ಯಾವುದೇ ಅನಾಹುತವಾಗಿಲ್ಲ.

ರೈಲು ಹಳಿ ತಪ್ಪಿದ್ದರಿಂದ ಯಾವುದೇ ಅನಾಹುತವಾಗಿಲ್ಲ. ಎಲ್ಲಾ 2348 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಯಾರೂ ಸಹ ಗಾಯಗೊಂಡಿಲ್ಲ ಎಂದು ನೈಋತ್ಯ ರೈಲ್ವೆ ಹೇಳಿದೆ.

ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಾಗುವಾಗ ಗುಡ್ಡ ಕುಸಿದು ಬಿದ್ದಿದೆ. ಈ ಸಂದರ್ಭದಲ್ಲಿ ಕಲ್ಲುಗಳು ಹಳಿಗೆ ಸಿಲುಕಿದ್ದು, ರೈಲು ಹಳಿ ತಪ್ಪಿದೆ. ರೈಲಿನ 5 ಬೋಗಿ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಸಾಗಬೇಕಾದ ಕೆಲವು ರೈಲುಗಳ ಮಾರ್ಗ ಬದಲಾಗಿದೆ.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ರೈಲಿನಲ್ಲಿದ್ದ ಪ್ರಯಾಣಿಕರ ಸಂಚಾರಕ್ಕಾಗಿ ಬಸ್‌ಗಳ ವ್ಯವಸ್ಥೆಯನ್ನು ಇಲಾಖೆ ಮಾಡಿದೆ.

ನೈಋತ್ಯ ರೈಲ್ವೆ ಬುಲೆಟಿನ್

ರೈಲು ನಂಬರ್ 07390 ಕಣ್ಣೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಕುರಿತು ನೈಋತ್ಯ ರೈಲ್ವೆ ಬುಲೆಟಿನ್ ಬಿಡುಗಡೆ ಮಾಡಿದೆ.

* ಕಣ್ಣೂರಿನಿಂದ ಗುರುವಾರ ಸಂಜೆ 6.05ಕ್ಕೆ ರೈಲು ಹೊರಟಿತ್ತು. ನವೆಂಬರ್ 12ರಂದು ಮುಂಜಾನೆ 3.50ರ ಸುಮಾರಿಗೆ ರೈಲು ಸಾಗುತ್ತಿದ್ದಾಗ ಗುಡ್ಡ ಕುಸಿದಿದೆ. ಚಲಿಸುತ್ತಿದ್ದ ರೈಲಿನ ಚಕ್ರಕ್ಕೆ ಕಲ್ಲುಗಳು ಸಿಲುಕಿವೆ.

* ಬಿ 1, ಬಿ 2 (3ನೇ ಎಸಿ), ಸ್ಲೀಪರ್ ಕೋಚ್‌ಗಳಾದ ಎಸ್‌ 6, ಎಸ್ 7, ಎಸ್‌ 8, ಎಸ್‌ 9, ಎಸ್ 10 ಬೋಗಿಗಳು ಹಳಿ ತಪ್ಪಿವೆ.

* ಬೆಂಗಳೂರು ರೈಲು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಂ ಸಿಂಗ್‌ ಮತ್ತು ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿದೆ. ಸೇಲಂನ ರೈಲ್ವೆ ವಿಭಾಗದ ತಂಡ ಸಹ ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸುತ್ತಿದೆ.

* ರೈಲಿನಲ್ಲಿ ಸಂಚಾರ ನಡೆಸುತ್ತಿದ್ದ ಜನರ ಸಂಚಾರಕ್ಕೆ ಸೇಲಂನಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಅಪಘಾತ ನಡೆದ ಸ್ಥಳದಿಂದ ಪ್ರಯಾಣಿಕರನ್ನು ಕರೆತರಲು 5 ಬಸ್ ವ್ಯವಸ್ಥೆ ಮಾಡಲಾಗಿದೆ.

* ಅಪಘಾತ ನಡೆದ ಸ್ಥಳದಲ್ಲಿ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.

* ಸಹಾಯವಾಣಿ ಸಂಖ್ಯೆಗಳು ಹೊಸೂರು 04344-222603, ಬೆಂಗಳೂರು 080-22156554 ಧರ್ಮಪುರಿ 04342-232111

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+