ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

154 ಕ್ಷೇತ್ರಗಳಲ್ಲಿ ಕಮಲ ಹಾಸನ್ ಪಕ್ಷ ಸ್ಪರ್ಧೆ: 80 ಸೀಟುಗಳು ಮಿತ್ರಪಕ್ಷಗಳಿಗೆ

|
Google Oneindia Kannada News

ಚೆನ್ನೈ, ಮಾರ್ಚ್ 9: ತಮಿಳುನಾಡು ವಿಧಾನಸಭೆ ಚುನಾವಣೆಯ 234 ಕ್ಷೇತ್ರಗಳ ಪೈಕಿ 154 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ ಪಕ್ಷ ಪ್ರಕಟಿಸಿದೆ. ಉಳಿದ 80 ಸೀಟುಗಳಲ್ಲಿ ಎಂಎನ್‌ಎಂನ ಮಿತ್ರ ಪಕ್ಷಗಳಾದ ಆಲ್ ಇಂಡಿಯಾ ಸಮತುವ ಮಕ್ಕಳ್ ಕಚ್ಚಿ ಮತ್ತು ಇಂಧಿಯಾ ಜನನಾಯಗ ಕಚ್ಚಿ ಪಕ್ಷಗಳು ತಲಾ 40 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಈ ಸೀಟು ಹಂಚಿಕೆ ಒಪ್ಪಂದವನ್ನು ಎಂಕೆಎಂ ಸೋಮವಾರ ರಾತ್ರಿ ಪ್ರಕಟಿಸಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇ 4ರಷ್ಟು ಮತಗಳನ್ನು ಎಂಎನ್‌ಎಂ ಪಡೆದುಕೊಂಡಿತ್ತು. ನಗರ ಪ್ರದೇಶಗಳಲ್ಲಿ ಶೇ 10ರಷ್ಟು ಮತಗಳನ್ನು ಗಳಿಸಿತ್ತು.

ನಟ ಶರತ್ ಕುಮಾರ್ ಅವರ ಎಐಎಸ್‌ಎಂಕೆ ಪಕ್ಷದೊಂದಿಗೆ ಕಮಲ್ ಹಾಸನ್ ಮೈತ್ರಿನಟ ಶರತ್ ಕುಮಾರ್ ಅವರ ಎಐಎಸ್‌ಎಂಕೆ ಪಕ್ಷದೊಂದಿಗೆ ಕಮಲ್ ಹಾಸನ್ ಮೈತ್ರಿ

'ದೀರ್ಘಕಾಲದಿಂದ ಬಾಕಿ ಉಳಿದಿರುವ ಜನರ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ತಮಿಳುನಾಡನ್ನು ಪರಿವರ್ತಿಸುವ ಸಾಮಾನ್ಯ ಗುರಿಗೆ ಈ ಮೂರೂ ಪಕ್ಷಗಳು ಬದ್ಧವಾಗಿವೆ. ತಮಿಳುನಾಡಿನ ಹೆಮ್ಮೆ ಮತ್ತು ವೈಭವವನ್ನು ಮರಳಿ ತರುವುದು ನಮ್ಮ ಸಾಮಾನ್ಯ ಕಾರ್ಯಸೂಚಿಯಾಗಿದೆ. ಹೀಗಾಗಿ ದೀರ್ಘಕಾಲ ಉಳಿಯುವ ಸಹ ಪ್ರಯಾಣವನ್ನು ಸಾಗಿಸಲು ನಿರ್ಧರಿಸಿವೆ' ಎಂದು ಪಕ್ಷ ತಿಳಿಸಿದೆ.

 Kamal Haasans MNM To Contest In 154 Seats, Rest 80 For Other 2 Allies

'ತಮಿಳರು ಮಾರಾಟಕ್ಕಿಲ್ಲ, ಅವರ ಮತಗಳು ಕೂಡ ಮಾರಾಟಕ್ಕಿಲ್ಲ' ಎಂದು ಕಳೆದ ವಾರ ಎಐಎಡಿಎಂಕೆ ಮತ್ತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಕಮಲ ಹಾಸನ್, ಭ್ರಷ್ಟಾಚಾರಮುಕ್ತ ಸರ್ಕಾರಕ್ಕಾಗಿ ತಮ್ಮ ಪಕ್ಷಕ್ಕೆ ಬಹುಮತ ನೀಡುವಂತೆ ಕೋರಿದ್ದರು.

English summary
Tamil Nadu Assembly election 2021: Kamal Haasan's MNM to contest in 154 seats and its 2 allies will fight in 40 seats each.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X