ಮೂರು ವಾರದಲ್ಲಿ ಮನೆಗೆ ಮರಳುತ್ತಾರಾ ಮುಖ್ಯಮಂತ್ರಿ ಜಯಲಲಿತಾ!

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ನವೆಂಬರ್ 4: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ತಮ್ಮ ಊಟದ ಪಟ್ಟಿಯನ್ನು ಬರೆದುಕೊಡುತ್ತಿದ್ದಾರೆ. ಪೂರ್ತಿಯಾಗಿ ಪ್ರಜ್ಞೆ ಬಂದಿದೆ. ಅಕ್ಟೋಬರ್ ಮೂರನೇ ವಾರದಿಂದಲೇ ಹಗಲಿನ ವೇಳೆ ನಿದ್ರೆ ಮಾಡುತ್ತಿಲ್ಲ. ಅಗಿನಿಂದ ಪೂರ್ಣ ಪ್ರಮಾಣದಲ್ಲಿ ಪ್ರಜ್ಞೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ನಾಲ್ಕು ದಿನದಲ್ಲಿ ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಅಪೋಲೋ ಆಸ್ಪತ್ರೆಯಿಂದ ಮಾಹಿತಿ ಬಿಡುಗಡೆ ಮಾಡಬಹುದು ಎಂದು ಮೂಲಗಳು ಖಚಿತಪಡಿಸಿವೆ. ಜಯಲಲಿತಾ ಅವರ ಆರೋಗ್ಯ ಸಂಬಂಧಿ ಮಾಹಿತಿಯನ್ನು ಅಕ್ಟೋಬರ್ 21ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅದೇ ಕೊನೆ. ಆ ನಂತರ ಯಾವುದೇ ಸಂಗತಿ ಬಹಿರಂಗ ಪಡಿಸಿಲ್ಲ.[ಸನ್ನೆ ಮೂಲಕ ಸ್ಪಂದಿಸುತ್ತಿದ್ದಾರೆ ಜಯಲಲಿತಾ!]

Jayalalithaa

ಜಯಲಲಿತಾ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ತಮಗೆ ಬೇಕಾದ ಆಹಾರದ ಪಟ್ಟಿಯನ್ನು ಅವರೇ ಬರೆದುಕೊಡುತ್ತಿದ್ದು, ಆಹಾರ ಸೇವನೆ ಕೂಡ ಸಾಮಾನ್ಯವಾಗಿದೆ. ಗುರುವಾರ ದೊರೆತ ಮಾಹಿತಿ ಪ್ರಕಾರ ಆಕೆಯನ್ನು ತೀವ್ರ ನಿಗಾ ಘಟಕದಿಂದ ಖಾಸಗಿ ರೂಮ್ ಗೆ ಶೀಘ್ರದಲ್ಲೇ ಶಿಫ್ಟ್ ಮಾಡಲಾಗುತ್ತದೆ.['ಅಮ್ಮ' ಆರೋಗ್ಯದಲ್ಲಿ ಚೇತರಿಕೆ ಅಂತಾರೆ ಡಾ ಸ್ವಾಮಿ!]

ಆಸ್ಪತ್ರೆ ವೈದ್ಯರ ಪ್ರಕಾರ, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಇನ್ನು ಮೂರು ವಾರದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸದ್ಯಕ್ಕೆ ಅವರ ಆರೋಗ್ಯದ ಪರಿಶೀಲನೆ ನಡೆಯುತ್ತಲೇ ಇದೆ. ಜತೆಗೆ ಫಿಸಿಯೋ ಥೆರಪಿಯಲ್ಲಿದ್ದಾರೆ. ತಿಂಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಕಳೆದ ಅವರಿಗೆ ಇದು ಬಹಳ ಮುಖ್ಯ ಎಂದು ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Jayalalithaa has been writing down her own menu and is fully conscious. She has been taken off sedation from the third week of October and has remained fully conscious since then, sources say. The Apollo Hospital is likely to issue a health bulletin on the Tamil Nadu Chief Minister in the next four days.
Please Wait while comments are loading...